Asianet Suvarna News Asianet Suvarna News

ಯಾದಗಿರಿ: ಕನ್ನಡ ಸಂಸ್ಕೃತಿ ಇಲಾಖೆಯ ವಿಭಾಗೀಯ ಕಚೇರಿ ಆರಂಭಿಸಲು ಆಗ್ರಹ

ಕನ್ನಡ ಸಂಸ್ಕೃತಿ ಇಲಾಖೆಯ ವಿಭಾಗೀಯ ಕಚೇರಿಯನ್ನು ಕಲ್ಯಾಣ ಕರ್ನಾಟಕದಲ್ಲಿ ಆರಂಭಕ್ಕೆ ಮನವಿ|  ಬೆಂಗಳೂರು ಕೇಂದ್ರ ಸ್ಥಾನದಲ್ಲಿಯೇ ಈ ನಿರ್ಣಯಗಳು ಕೈಗೊಳ್ಳುತ್ತಿರುವುದರಿಂದ ಅರ್ಹರ ಬದಲಿಗೆ ಅನರ್ಹರು ಸರ್ಕಾರದ ಯೋಜನೆ ದುರ್ಬಳಕೆಗೆ ಅವಕಾಶವಾಗಿದೆ|

Request to Start Divisional Office in Kalyana Karnataka
Author
Bengaluru, First Published Oct 23, 2019, 2:13 PM IST

ಯಾದಗಿರಿ[ಅ.23]:  ಕನ್ನಡ ಸಂಸ್ಕೃತಿ ಇಲಾಖೆಯ ವಿಭಾಗೀಯ ಕಚೇರಿಯನ್ನು ಕಲ್ಯಾಣ ಕರ್ನಾಟಕದಲ್ಲಿಆರಂಭಿಸಿ, ಜಂಟಿ ನಿರ್ದೇಶಕರ ನೇಮಕ ಮಾಡಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಅದ್ಯಕ್ಷ ಶರಣು ಬಿ. ಗದ್ದುಗೆ ಸಚಿವ ಸಿ.ಟಿ. ರವಿ ಅವರಿಗೆ ಒತ್ತಾಯಿಸಿದರು.

ಭಾನುವಾರ ವಿಜಯಪುರಕ್ಕೆ ಆಗಮಿಸಿದ್ದ ಸಚಿವ ರವಿ ಅವರಿಗೆ ಸನ್ಮಾನಿಸಿ ಮನವಿ ಸಲ್ಲಿಸಿ ಮಾತನಾಡಿದ ಅವರು, ರಾಜ್ಯದ ಎಲ್ಲೆಡೆ ನಡೆಯುವ ಸಾಂಸ್ಕತಿಕ ಚಟುವಟಿಕೆಗಳಿಗೆ ಸಮರ್ಪಕವಾಗಿ ಮತ್ತು ಅರ್ಹರಿಗೆ ಅನುದಾನ ನೀಡಲು ಅಧಿಕಾರ ವಿಕೇಂದ್ರಿಕರಣ ಮಾಡಿದಲ್ಲಿ ಸಾಧ್ಯವಾಗಲಿದೆ. ಹಾಲಿ ಬೆಂಗಳೂರು ಕೇಂದ್ರ ಸ್ಥಾನದಲ್ಲಿಯೇ ಈ ನಿರ್ಣಯಗಳು ಕೈಗೊಳ್ಳುತ್ತಿರುವುದರಿಂದ ಅರ್ಹರ ಬದಲಿಗೆ ಅನರ್ಹರು ಸರ್ಕಾರದ ಯೋಜನೆ ದುರ್ಬಳಕೆಗೆ ಅವಕಾಶವಾಗಿದೆ ಎಂದು ವಿವರಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಲಾವಿದರಿಗೆ ಮಾಸಾಶನ ನೀಡಲು ಮತ್ತು ಹೆಚ್ಚಳ ಮಾಡಲು ತಕ್ಷಣ ಅರ್ಜಿಗಳನ್ನುಪರಿಶೀಲನೆ ನಡೆಸಲು ಅನುಕೂಲವಾಗುತ್ತದೆ, ಕಲಂ 371 ಅಡಿ ನೀಡಿರುವ ಮೀಸಲಾತಿ ಅನ್ವಯ ಈ ಭಾಗಕ್ಕೆ ವಿಶೇಷ ಅನುದಾನ ನೀಡಬೇಕು ಎಂಬ ವಿಷಯ ಸೇರಿದಂತೆ ಅನೇಕ ವಿಷಯಗಳ ಚರ್ಚೆ ಮಾಡಿದರು. ಸೂಕ್ತ ಕ್ರಮದ ಭರವಸೆಯನ್ನು ಸಚಿವರು ನೀಡಿದರು. ಪರಿಷತ್ ಸದಸ್ಯ ಅರುಣ್ ಶಹಾಪುರ, ಮಾಜಿ ಸಚಿವ ಬೆಳ್ಳುಬ್ಬಿ, ಮಾಜಿ ಶಾಸಕ ಅಪ್ಪುಪಟ್ಟಣಶೆಟ್ಟಿ, ಗುರು ಎಸ್. ಕಾಮಾ, ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

Follow Us:
Download App:
  • android
  • ios