Asianet Suvarna News Asianet Suvarna News

ಹೀಗಿದ್ದ ಆಸಿಸ್ ಹೀಗಾಯ್ತು: ಕಾಡ್ಗಿಚ್ಚಿಗೆ ಬದುಕೇ ಸರ್ವನಾಶವಾಯ್ತು!

ಆಸ್ಟ್ರೇಲಿಯಾದ ಕಾಡುಗಳಲ್ಲಿ ಅಗ್ನಿ ನರ್ತನ| ಬೆಂಕಿಯ ಆಟಕ್ಕೆ ಬದುಕೇ ಸರ್ವನಾಶ| ಮೂಕ ಪ್ರಾಣಿಗಳು ಕಾಡ್ಗಿಚ್ಚಿಗೆ ಬಲಿ| ನೋಡ ನೋಡುತ್ತಿದ್ದಂತೆ ಭಸ್ಮವಾಯ್ತು ಬದುಕು

Incredible images show insane damage caused by Bushfire In Australia
Author
Bangalore, First Published Jan 8, 2020, 2:04 PM IST

ಕ್ಯಾನ್‌ಬೆರಾ[ಜ.08]: ಆಸ್ಟ್ರೇಲಿಯಾದ ಕಾಡುಗಳಿಗೆ ತಗುಲಿದ ಬೆಂಕಿಯಿಣದ ಎಲ್ಲವೂ ನಾಶವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಈ ಬೆಂಕಿ ನಂದಿಸಲು ನಿರಂತರ ಪ್ರಯತ್ನಿಸುತ್ತಿದ್ದರೂ, ವಿನಾಶಕಾರಿ ಬೆಂಕಿ ಮತ್ತಷ್ಟು ವ್ಯಾಪಿಸುತ್ತಿದೆ. ಕಳೆದ 4 ತಿಂಗಳಿನಿಂದ ತಗುಲಿದ ಈ ಬೆಂಕಿ 50 ಕೋಟಿಗೂ ಅಧಿಕ ಪಶು ಪಕ್ಷಿಗಳನ್ನು ಆಹುತಿ ಪಡೆದಿದೆ. ಬೆಂಕಿ ನರ್ತನದ ಫೋಟೋ ಹಾಗೂ ವಿಡಿಯೋಗಳು ಬೆಚ್ಚಿ ಬೀಳಿಸುವಂತಿವೆ. ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ಎರಡು ಫೋಟೋಗಳು ಭಾರೀ ವೈರಲ್ ಆಗಲಾರಂಭಿಸಿವೆ. ಕಾಡ್ಗಿಚ್ಚಿಗೂ ಮೊದಲು ಹಾಗೂ ಬಳಿಕದ ಫೋಟೋಗಳು ಬಹುತೇಕ ಎಲ್ಲರನ್ನೂ ಭಾವುಕರನ್ನಾಗಿಸಿವೆ.

ಆಸ್ಪ್ರೇಲಿಯಾ ಕಾಳ್ಗಿಚ್ಚು ಜಗತ್ತಿಗೆ ಏಕೆ ಎಚ್ಚರಿಕೆ ಗಂಟೆ?

ಅತ್ಯಂತ ಸುಂದರ ರಸ್ತೆ ಹೀಗಾಗಿದೆ

ಈ ಫೋಟೋ ಆಸ್ಟ್ರೇಲಿಯಾದ ಅತ್ಯಂತ ಸುಂದರ ರಸ್ತೆಯಲ್ಲೊಂದಾಘಿರುವ ಕರೆಯಲಾಗುವ ಫ್ಲಿಂಡರ್ಸ್ ಚೆಜ್ ನ್ಯಾಷನಲ್ ಪಾರ್ಕ್ ರಸ್ತೆಯದ್ದಾಗಿದೆ. ಇವುಗಳಲ್ಲಿ ಒಂದು ಫೋಟೋ ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುವ ಮರಗಳ ನಡುವೆ ಹಾದು ಹೋಗುವ ರಸ್ತೆ ಅಂದರೆ ಬೆಂಕಿ ತಗುಲುವ ಮುನ್ನ ಇದ್ದ ದೃಶ್ಯವಾದರೆ, ಮತ್ತೊಂದು ಬೆಂಕಿಯಿಂದ ಸರ್ವನಾಶವಾದ ಬಳಿಕ ತೆಗೆದ ಅದೇ ರಸ್ತೆಯ ಫೋಟೋ. ಸದ್ಯ ಇಲ್ಲಿ ಅದೆಷ್ಟೇ ದೂರ ಕಣ್ಣು ಹಾಯಿಸಿದರೂ ಸ್ವಲ್ಪವೂ ಹಸಿರು ಕಾಣ ಸಿಗುವುದಿಲ್ಲ. ಕೇವಲ ಬೆಂಕಿಯಿಂದ ಸುಟ್ಟು ಕರಕಲಾದ ಗಿಡ, ಮರ ಹಾಗೂ ಭೂಮಿಯಷ್ಟೇ ಕಾಣುತ್ತದೆ.

ಕೋಲಾ ಪ್ರಾಣಿಗಳು ಅತ್ಯಧಿಕ ಸಂಖ್ಯೆಯಲ್ಲಿ ಬಲಿ

ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಭಾರೀ ದುಃಖ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆಡಳಿತದ ತನಿಖೆ ಸಂಬಂಧ ಸವಾಲು ಹಾಕತೊಡಗಿದ್ದಾರೆ. ಸಾವಿರಾರು ಮನೆಗಳು ಈ ಬೆಂಕಿಗೆ ಭಸ್ಮವಾಗಿವೆ. ಮನೆಗಳನ್ನು ಕಳೆದುಕೊಂಡ ಅಸಂಖ್ಯಾತ ಮಂದಿ ನಿರಾಶ್ರಿತರಾಗಿದ್ದಾರೆ. ಈ ಬೆಂಕಿ ದುರಂತಕ್ಕೆ ಕೋಲಾ ಪ್ರಾಣಿಗಳು ಅತಿ ಹೆಚ್ಚು ಬಳಲಿವೆ. ಕಾಡಿಗೆ ತಗುಲಿರುವ ಬೆಂಕಿಯಿಂದ ಕೋಲಾ ಪ್ರಾಣಿಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. 

ಫೈರ್ ಫೈಟರ್ ಅಪ್ಪನ ಫೋಟೋ ಶೇರ್ ಮಾಡಿದ ಮಗಳು: ನೆಟ್ಟಿಗರು ಭಾವುಕ!

ಕಾಡಿನಿಂದ ನಾಡಿನೆಡೆ ಹೆಜ್ಜೆ ಹಾಕುತ್ತಿವೆ ಮೂಕ ಪ್ರಾಣಿಗಳು

ಈವರೆಗೆ ಸುಮಾರು 48 ಕೋಟಿ ಪ್ರಾಣಿಗಳು ಸಾವನ್ನಪ್ಪಿರಬಹುದೆಂದು ಸಿಡ್ನಿಯ ಪರಿಸರಶಾಸ್ತ್ರಜ್ಞರೊಬ್ಬರು ಅಂದಾಜಿಸಿದ್ದಾರೆ. ಈ ಕಾಡ್ಗಿಚ್ಚಿನಿಂದಾಗಿ ಆಸ್ಟ್ರೇಲಿಯಾದ ರಾಷ್ಟ್ರ ಪ್ರಾಣಿ ಕಾಂಗರೂ ಸೇರಿದಂತೆ ಎಲ್ಲಾ ಪ್ರಾಣಿಗಳು ತಮ್ಮ ಜೀವ ಉಳಿಸಿಕೊಳ್ಳಲು ನಾಡಿನೆಡೆ ಧಾವಿಸಲಾರಂಭಿಸಿವೆ.

ನ್ಯೂಜಿಲೆಂಡ್‌ವರೆಗೆ ಹಬ್ಬಿದೆ ಆಸ್ಟ್ರೇಲಿಯಾ ಕಾಡ್ಗಿಚ್ಚಿನ ಹೊಗೆ

ಆಸ್ಟ್ರೇಲಿಯಾದ ಕಾಡಿಗೆ ತಾಗಿರುವ ಬೆಂಕಿಯಿಂದ ಉಂಟಾಗಿರುವ ದಟ್ಟ ಹೊಗೆ 2,200 ಕಿ. ಮೀ ದೂರದವರೆಗೆ ಹಬ್ಬಿಕೊಂಡಿದೆ. ನ್ಯೂಜಿಲೆಂಡ್‌ನಲ್ಲೂ ಈ ಬೆಂಕಿಯ ಪ್ರಭಾವ ಕಾಣಿಸಿಕೊಳ್ಳಲಾರಂಭಿಸಿದೆ. 

5 ದಿನದೊಳಗೆ 10 ಸಾವಿರ ಒಂಟೆ ಕೊಲ್ಲಲು ಆದೇಶ: ಕಾರಣ ಹೀಗಿದೆ!

Follow Us:
Download App:
  • android
  • ios