Asianet Suvarna News Asianet Suvarna News

ಇಂಡಿ: ತಾಂಬಾ ಗ್ರಾಮದ ಜನರ ನಿದ್ದಗೆಡಿಸಿದ ಚರ್ಮರೋಗ

ತಾಂಬಾ ಗ್ರಾಮ​ಸ್ಥರಿಗೆ ಚರ್ಮ​ರೋಗ ಕಾಟ| ಗಜ​ಕರ್ಣ ಎಂಬ ಚರ್ಮ​ಸಂಬಂಧಿ ಬಾಧೆ​ಯಿಂದ ಹೈರಾ​ಣಾ​ದ ಜನರು| ಈ ಬಾಧೆ​ಯಿಂದ ಬಳಲಿ ಬೆಂಡಾದ ಅರ್ಧ​ಕ್ಕರ್ಧ ತಾಂಬಾ ಗ್ರಾಮ​ಸ್ಥ​ರು|ತಾಂಬಾ​ದಲ್ಲಿ ಅರ್ಧ​ಕ್ಕರ್ಧ ಜನರು ಇಂತಹ ಚರ್ಮ ​ಸಂಬಂಧಿ ರೋಗ​ಬಾ​ಧೆ​ಯಿಂದ ಬಳು​ಲುತ್ತಿ​ದ್ದಾರೆ|  ಪುರು​ಷ, ಮಹಿಳೆ, ವಯೋ​ವೃ​ದ್ಧರು, ಮಕ್ಕಳು ಸಹಿತ ಇಂತಹ ಬಾಧೆ​ಯಿಂದ ಬಳಲಿ ಬೆಂಡಾ​ಗಿ​ದ್ದಾರೆ| ಯಾರನ್ನೇ ಕೇಳಿ​ದರೂ ಚರ್ಮವ್ಯಾಧಿಯದೇ ಮಾತು ಕೇಳಿ​ಬ​ರು​ತ್ತಿದೆ| 

Skin Disease in Entire Tamba Village in Vijayapura District
Author
Bengaluru, First Published Oct 16, 2019, 1:00 PM IST

ಲಕ್ಷ್ಮಣ ಹಿರೇಕುರಬರ 

ತಾಂಬಾ[ಅ.16]: ಗಜ​ಕರ್ಣ ಎಂಬ ಚರ್ಮ ​ಸಂಬಂಧಿ ರೋಗ ಇಂಡಿ ತಾಲೂ​ಕಿನ ತಾಂಬಾ ಗ್ರಾಮದ ಅರ್ಧ​ಕ್ಕರ್ಧ ಗ್ರಾಮ​ಸ್ಥ​ರನ್ನೇ ನಿದ್ದೆ​ಗೆ​ಡಿ​ಸಿದೆ.

ಹಲವರಿಗೆ ಗಜಕರ್ಣ, ಕೆಲವರಿಗೆ ಹುರುಕು (ಗುಳ್ಳಿ), ತುರಿಕೆ ಆರಂಭ​ವಾ​ದರೆ ಕಲ್ಲಿ​ನಿಂದ ಉಜ್ಜಿ​ಕೊ​ಳ್ಳು​ವ​ಷ್ಟರ ಮಟ್ಟಿಗೆ ಸಂಕಟ ಕೊಡು​ತ್ತಿದೆ. ಸುಮಾರು 20 ಸಾವಿ​ರಕ್ಕೂ ಅಧಿಕ ಜನಸಂಖ್ಯೆ ಇರುವ ತಾಂಬಾ​ದಲ್ಲಿ ಅರ್ಧ​ಕ್ಕರ್ಧ ಜನರು ಇಂತಹ ಚರ್ಮ ​ಸಂಬಂಧಿ ರೋಗ​ಬಾ​ಧೆ​ಯಿಂದ ಬಳು​ಲುತ್ತಿ​ದ್ದಾರೆ. ರಾತ್ರಿ​ಯಿಡಿ ನಿದ್ದೆ​ಗೆ​ಡು​ತ್ತಿ​ದ್ದಾರೆ. ಪುರು​ಷ, ಮಹಿಳೆ, ವಯೋ​ವೃ​ದ್ಧರು, ಮಕ್ಕಳು ಸಹಿತ ಇಂತಹ ಬಾಧೆ​ಯಿಂದ ಬಳಲಿ ಬೆಂಡಾ​ಗಿ​ದ್ದಾರೆ. ಯಾರನ್ನೇ ಕೇಳಿ​ದರೂ ಚರ್ಮವ್ಯಾಧಿಯದೇ ಮಾತು ಕೇಳಿ​ಬ​ರು​ತ್ತಿದೆ. ಈ ಮೊದಲು ಕಡಿ​ಮೆ​ಯಿದ್ದ ಬಾಧೆ ಕಳೆದ ಆರೇಳು ತಿಂಗ​ಳಿಂದ ತೀವ್ರ ಸ್ವರೂಪ ಪಡೆ​ದು​ಕೊಂಡಿದೆ ಎಂದು ಗ್ರಾಮ​ಸ್ಥರು ಅಳಲು ತೋಡಿ​ಕೊಂಡಿ​ದ್ದಾರೆ. ತಾಂಬಾ ಅಷ್ಟೇ ಅಲ್ಲ, ಸುತ್ತ​ಮು​ತ್ತ​ಲಿನ ಅನೇಕ ಗ್ರಾಮ​ಸ್ಥರು ಇದೇ ಬಾಧೆ​ಯಿಂದ ಬಳ​ಲು​ತ್ತಿ​ದ್ದಾ​ರೆ ಎಂದು ತಿಳಿದು ಬಂದಿದೆ.

ಕಾರ​ಣ​ವೇ​ನು?:

ದೇಹದ ವಿವಿಧ ಭಾಗಗಳಲ್ಲಿ ಗೋಲಾಕಾರ ಹಾಗೂ ಚೌಕಾಕಾರವಾಗಿ ಬಿದ್ದ ಕಲೆ ಅತಿಯಾಗಿ ತುರಿಕೆ ಆರಂಭ​ವಾ​ಗು​ತ್ತದೆ. ರಾತ್ರಿ ನಿದ್ರೆಯನ್ನೂ ಮಾಡಲು ಬಿಡದೆ ಹೈರಾಣಾಗಿಸಿದೆ. ತುರಿಕೆಯ ವೇದನೆ ತಾಳದೆ ಅನೇ​ಕರು ಸಣ್ಣ ಕಲ್ಲಿನಿಂದ ತುರಿಸಿಕೊಂಡು ಮುಲಾಮು ಹಚ್ಚಿಕೊಂಡು ನಂತರವೇ ರಾತ್ರಿ ನಿದ್ರೆ ಮಾಡು​ತ್ತಿ​ದ್ದಾರೆ. ಮತ್ತೇ ಮರುದಿನ ಅದೇ ಸ್ಥಿತಿ ಎಂದು ಅಬ್ದುಲ್‌ ಮಬುಬ್‌ ಅವರು ಹೇಳು​ತ್ತಾ​ರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ರೋಗಕ್ಕೆ ಕುಡಿಯುವ ನೀರು, ಮಲಿನ ನೀರು, ಸುತ್ತಮುತ್ತ​ಲಿನ ಗಲೀಜು ವಾತಾ​ವ​ರಣ ಕಾರಣ ಎಂದು ಗ್ರಾಮ​ಸ್ಥರು ಶಂಕೆ ವ್ಯಕ್ತ​ಪ​ಡಿ​ಸಿ​ದ್ದಾರೆ. ಆದರೆ ಇದು ಗಾಳಿಯಿಂದ ಆಗುವಂತಹದ್ದು ಅಲ್ಲ. ಸ್ವಚ್ಛತೆ ಇಲ್ಲದಿರು​ವುದು, ಹಸಿಯಾದ ಬಟ್ಟೆ ತೊಡು​ವು​ದ​ರಿಂದ ಬರು​ತ್ತದೆ ಎಂದು ವೈದ್ಯಾ​ಧಿ​ಕಾ​ರಿ​ಗಳು ಹೇಳು​ತ್ತಾರೆ. ಗರ್ಭಿಣಿ​ಯರು, ಶಿಶುವಿಗೆ ಈ ತುರಿಕೆ ರೋಗದಿಂದ ಯಾವುದೇ ತೊಂದರೆ ಇಲ್ಲ ಎಂದೂ ಅಭಯ ನೀಡಿ​ದ್ದಾರೆ.

ವೈದ್ಯರಿಗೆ ತೋರಿ​ಸಲು ಮುಜುಗರ:

ಗ್ರಾಮದಲ್ಲಿ ಪುರುಷರು, ಮಹಿಳೆಯರು, ಯುವ​ತಿ​ಯರು ಸೇರಿದಂತೆ ಮಕ್ಕಳಿಗೂ ತೊಡೆಯ ಭಾಗದಲ್ಲಿ ಈ ಗಜಕರ್ಣ ಬಾಧೆ ಕಾಣಿ​ಸಿದ್ದು, ಇದನ್ನು ವೈದ್ಯರಿಗೆ ತೋರಿ​ಸಲು ನಾಚಿಕೊಳ್ಳುತ್ತಿ​ದ್ದಾರೆ. ಆದರೆ ವಿಪರೀತ ತುರಿಕೆ ತಾಳದೆ ತೋರಿಸುವುದು ಅನಿವಾರ್ಯವಾಗಿದೆ ಎಂದು ಶರಣು ಉಪ್ಪಾರ ಹೇಳು​ತ್ತಾರೆ. ದೇಹದ ಇತರೆ ಭಾಗಕ್ಕೂ ಈ ಚರ್ಮ​ರೋಗ ಬಾಧೆ ಆವ​ರಿ​ಸು​ತ್ತಿ​ರು​ವು​ದ​ರಿಂದ ಹೆದ​ರಿದ ಕೆಲ ಗ್ರಾಮ​ಸ್ಥರು ಇಂಡಿ, ವಿಜಯಪುರ ಆಸ್ಪತ್ರೆಗಳಿಗೆ ಅಲೆದಾಡಿ ಸಾವಿರು ರುಪಾಯಿ ಖರ್ಚು ಮಾಡು​ತ್ತಿ​ದ್ದಾರೆ. ಎರ​ಡ್ಮೂರು ತಿಂಗ​ಳಾ​ನು​ಗ​ಟ್ಟಲೆ ಔಷ​ಧೋ​ಪ​ಚಾರ ಮಾಡಿ​ಕೊಳ್ಳುತ್ತಿದ್ದಾರೆ.

ಕಾರಣ ಏನೇ ಇರಲಿ, ಸಂಬಂಧಿಸಿ ಇಲಾಖೆ ಹಾಗೂ ಅಧಿ​ಕಾ​ರಿ​ಗಳು ಈ ಸಮ​ಸ್ಯೆ​ಯತ್ತ ಚಿತ್ತ ಹರಿಸಿ ರೋಗ​ಬಾ​ಧೆ​ಯಿಂದ ಬಳಲಿ ಬೆಂಡಾದ ಗ್ರಾಮ​ಸ್ಥ​ರ​ನ್ನು ಮುಕ್ತ​ಗೊ​ಳಿ​ಸಲು ಕ್ರಮ ಕೈಗೊ​ಳ್ಳ​ಬೇಕು ಎಂದು ನಾಗ​ರಿ​ಕರು ಮನವಿ ಮಾಡಿ​ದ್ದಾರೆ.

ಈ ಬಗ್ಗೆ ಮಾತನಾಡಿದ ತಾಂಬಾದ ತಾಪಂ ಸದಸ್ಯ ಪ್ರಕಾಶ ಮುಂಜಿ ಅವರು, ತಾಂಬಾ ಗ್ರಾಮದಲ್ಲಿ ಶೇ. 60 ರಷ್ಟು ಜನರಿಗೆ ಗಜಕರ್ಣ ರೋಗ ಹರಡಿದೆ. ಇದಕ್ಕೆ ಕುಡಿಯುವ ನೀರು ಅಥವಾ ಗಾಳಿ ಕಾರಣವಿರ​ಬ​ಹುದು. ಇದನ್ನು ವೈದ್ಯರು ತಪಾಸಣೆ ನಡೆಸಿ ರೋಗದಿಂದ ಮುಕ್ತಗೊಳಿಸಬೇಕು ಎಂದು ಹೇಳಿದ್ದಾರೆ. 

ಇನ್ನು ಈ ಬಗ್ಗೆ ಮಾಹಿತಿ ನೀಡಿದ ತಾಂಬಾದ ಪ್ರಾಥಮಿಕ ಆರೋಗ್ಯ ಕೇಂದ್ರದ  ಡಾ.ಎ.ಎಂ. ಬಾಗವಾನ ಅವರು, ತಾಂಬಾ ಸೇರಿ ಈ ಭಾಗದಿಂದ ಪ್ರತಿದಿನ ಎರಡು ನೂರರಿಂದ ಮೂರು ನೂರಕ್ಕೂ ಹೆಚ್ಚು ಜನರು ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ಅದರಲ್ಲಿ ಗಜಕರ್ಣ ಹಾಗೂ ಚರ್ಮರೋಗದ ಜನರೇ ಇರು​ತ್ತಾರೆ. ಎಲ್ಲ ರೋಗಿಗಳನ್ನು ತಪಾಸಣೆ ಮಾಡಿ ಕಳುಹಿಸು​ತ್ತಿ​ದ್ದೇವೆ ಎಂದು ತಿಳಿಸಿದ್ದಾರೆ. 

ಗಜ​ಕರ್ಣ ಎಂಬ ಚರ್ಮ​ರೋಗ ಸ್ವಚ್ಛತೆ ಇಲ್ಲದಿರು​ವುದು, ಹಸಿಯಾದ ಬಟ್ಟೆ ತೊಡು​ವು​ದ​ರಿಂದ ಬರು​ತ್ತದೆ. ಹಾಗೊಂದು ವೇಳೆ ಒಮ್ಮಿಂದೊಮ್ಮೆಲೆ ಗ್ರಾಮ​ಸ್ಥ​ರಿಗೆ ತುರಿಕೆ ಆಗಿ​ದ್ದರೆ ನಾವು ಪರೀಕ್ಷೆ ಮಾಡು​ತ್ತೇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿ​ಕಾ​ರಿ ಡಾ. ಮಹೇಂದ್ರ ಕಾಪ್ಸೆ ಅವರು ತಿಳಿಸಿದ್ದಾರೆ. 
 

Follow Us:
Download App:
  • android
  • ios