(ವಿಡಿಯೋ)ಮಕ್ಕಳನ್ನು ರಸ್ತೆ ದಾಟಿಸುವ ಮುನ್ನ ಎಚ್ಚರವಿರಲಿ: ಕ್ಯಾಮರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

(ವಿಡಿಯೋ)ಮಕ್ಕಳನ್ನು ರಸ್ತೆ ದಾಟಿಸುವ ಮುನ್ನ ಎಚ್ಚರವಿರಲಿ: ಕ್ಯಾಮರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

July 17, 2017, 1:04 p.m.

ತೆಲ್ಲಂಗಾಣ(ಜು.17): ಪೋಷಕರೇ ಮಕ್ಕಳನ್ನು ರಸ್ತೆ ದಾಟಿಸುವ ಮುನ್ನಾ ಸ್ವಲ್ಪ ಎಚ್ಚರ ವಹಿಸಿ.. ಏಕೆಂದರೆ ಈ ದೃಶ್ಯವನ್ನು ನೋಡಿದ್ರೆ ಬೆಚ್ಚಿ ಬೀಳ್ತೀರಾ.

ಇಂದು ತೆಲಂಗಾಣ ರಾಜ್ಯ ಕರೀಂನಗರ ಜಿಲ್ಲೆಯ ಗಂಗಾಧರ ಎಂಬಲ್ಲಿ ಭೀಕರ ಅಪಘಾತ ಸಂಭವಿಸಿದೆ. ಬೆಳಗ್ಗೆ ತಾಯಿ ಬಾಲಕ, ಬಾಲಕಿ ರಸ್ತೆಯ ದಾಟಲು ನಿಂತಿದ್ದಾರೆ. ಈ ವೇಳೆ ತಾಯಿ ಕೈಯಿಂದ ಬಿಡಿಸಿಕೊಂಡು ಬಾಲಕ ರಸ್ತೆ ದಾಟಲು ಓಡಿ ಹೋಗಿದ್ದಾನೆ. ಈ ವೇಳೆ ಅತಿ ವೇಗವಾಗಿ ಬಂದ ಬೈಕ್ ಆತನನ್ನು ಗುದ್ದಿಕೊಂಡು ಹೋಗಿದೆ.

ಈ ವೇಳೆ ಬಾಲಕ ಸುಮಾರು ಮೀಟರ್ ದೂರ ಹೋಗಿ ಬಿದ್ದು ಪ್ರಾಣ ತೆತ್ತಿದ್ದಾನೆ. ಸ್ಥಳದಲ್ಲಿದ್ದವರು ಆತನ ರಕ್ಷಣೆಗೆ ಮುಂದಾಗಿದ್ದು ಆಗಾಗಲೇ ಆತ ಮೃತಪಟ್ಟಿದ್ದಾನೆ.