Asianet Suvarna News Asianet Suvarna News

ಲಾಕ್‌ಡೌನ್ ಸುಲಿಗೆ: ಸರ್ಕಾರದ ನಡೆಯ ಬಗ್ಗೆ ಕಿಡಿಕಾರಿದ ಮಾಜಿ ಸಚಿವ ಎಚ್‌ ಕೆ ಪಾಟೀಲ್

ಕೆಲಸವಿಲ್ಲದೇ ಊಟಕ್ಕೂ ಪರಿಸ್ಥಿತಿ ಇದೆ. ಅಂತಹದ್ದರಲ್ಲಿ ದುಪ್ಪಟ್ಟು ಹಣ ಪಡೆಯುವುದು ಸರಿಯಲ್ಲ. ಸರ್ಕಾರ ಈ ಬಗ್ಗೆ ಸೂಕ್ತ ಗಮನಹರಿಸಬೇಕು ಎಂದರು. ಇಂತಹ ಸಂದರ್ಭದಲ್ಲೂ ಕೆಎಸ್‌ಆರ್‌ಟಿಸಿ ಲಾಭದ ಲೆಕ್ಕಾಚಾರ ಹಾಕುತ್ತಿರುವುದು ಸರಿಯಲ್ಲ ಎಂದು ಎಚ್.ಕೆ. ಪಾಟೀಲ್ ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
 
ಬೆಂಗಳೂರು(ಮೇ.02): ನಗರದಲ್ಲಿರುವ ಕೂಲಿ ಕಾರ್ಮಿಕರಿಗೆ ತಮ್ಮ ಸ್ವಂತ ಊರುಗಳಿಗೆ ತೆರಳು ಸರ್ಕಾರ ಅನುವು ಮಾಡಿಕೊಟ್ಟಿದೆ. ಆದರೆ ಪ್ರಯಾಣಿಕರಿಗೆ ದುಪ್ಪಟ್ಟು ಹಣ ಸುಲಿಗೆ ಮಾಡುತ್ತಿರುವುದರ ಬಗ್ಗೆ ಸುವರ್ಣ ನ್ಯೂಸ್ ದ್ವನಿಯೆತ್ತಿದೆ. 

ಈ ಸುದ್ದಿಯನ್ನು ಗಮನಿಸಿ ಸುವರ್ಣ ನ್ಯೂಸ್ ಜತೆ ಮಾತನಾಡಿದ ಮಾಜಿ ಸಚಿವ ಎಚ್‌.ಕೆ. ಪಾಟೀಲ್, ಸರ್ಕಾರದ ನಡೆ ಅಮಾನವೀಯ. ಈ ದೃಶ್ಯಗಳನ್ನು ನೋಡಿದಾಗ ಕಣ್ಣಲ್ಲಿ ನೀರು ಬಂದಂಗೆ ಆಯ್ತು. ಇದು ಮೂರ್ಖತನದ ಪರಮಾವಧಿ ಎಂದು ಹೇಳಿದ್ದಾರೆ.

ಲಾಕ್‌ಡೌನ್ ಸುಲಿಗೆ: ಸರ್ಕಾರ ಉಚಿತವಾಗಿ ಕಾರ್ಮಿಕರನ್ನು ಊರಿಗೆ ಕಳಿಸಬೇಕು ಎಂದು ಸಿದ್ದರಾಮಯ್ಯ

ಕೆಲಸವಿಲ್ಲದೇ ಊಟಕ್ಕೂ ಪರಿಸ್ಥಿತಿ ಇದೆ. ಅಂತಹದ್ದರಲ್ಲಿ ದುಪ್ಪಟ್ಟು ಹಣ ಪಡೆಯುವುದು ಸರಿಯಲ್ಲ. ಸರ್ಕಾರ ಈ ಬಗ್ಗೆ ಸೂಕ್ತ ಗಮನಹರಿಸಬೇಕು ಎಂದರು. ಇಂತಹ ಸಂದರ್ಭದಲ್ಲೂ ಕೆಎಸ್‌ಆರ್‌ಟಿಸಿ ಲಾಭದ ಲೆಕ್ಕಾಚಾರ ಹಾಕುತ್ತಿರುವುದು ಸರಿಯಲ್ಲ ಎಂದು ಎಚ್.ಕೆ. ಪಾಟೀಲ್ ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Video Top Stories