ಗೃಹ ಪ್ರವೇಶಕ್ಕೆ ಸಿದ್ಧತೆ ನಡೆಸಿದ್ದ ಕುಟುಂಬಸ್ಥರಿಗೆ ಶಾಕ್; ಮಂಡ್ಯ ಜಿಲ್ಲೆಯಲ್ಲೊಂದು ವಿಸ್ಮಯಕಾರಿ ಘಟನೆ

ಗೃಹ ಪ್ರವೇಶಕ್ಕೆ ಸಿದ್ಧತೆ ನಡೆಸಿದ್ದ ಕುಟುಂಬಸ್ಥರಿಗೆ ಶಾಕ್; ಮಂಡ್ಯ ಜಿಲ್ಲೆಯಲ್ಲೊಂದು ವಿಸ್ಮಯಕಾರಿ ಘಟನೆ

Feb. 7, 2018, 8:34 p.m.

ಮಂಡ್ಯ: ಮನೆ ಎದುರು ಅಥವಾ ಹಿತ್ತಲಿನಲ್ಲಿ ಹುತ್ತ ಕಟ್ಟೋದು ನಾವು ನೋಡಿ ಇರ್ತೀವಿ. ಆದ್ರೆ ಮನೆಯೊಳಗೆ ಹಾವಿನ ಹುತ್ತ ಕಟ್ಟಿದ್ರೆ ಹೇಗಿರಬೇಡ. ಅದು ಗೃಹ ಪ್ರವೇಶಕ್ಕೆ ಸಿದ್ಧಗೊಂಡಿದ್ದ  ಮನೆಯಲ್ಲಿ ಹುತ್ತ ಕಟ್ಟಿರುವ ಅಪರೂಪದ ಘಟನೆ ಮಂಡ್ಯದಲ್ಲಿ ನಡೆದಿದೆ. ಗೃಹ ಪ್ರವೇಶಕ್ಕೆಂದು ಆ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಆದ್ರೆ ರಾತ್ರೋರಾತ್ರಿ ಗೃಹಪ್ರವೇಶಕ್ಕೆ ಸಿದ್ಧಗೊಂಡಿದ್ದ ಮನೆ ದೇವರ ಕೋಣೆಯಲ್ಲಿ ಹಾವಿನ ಹುತ್ತಗಳು ತಲೆ ಎತ್ತಿವೆ. ಗೃಹಪ್ರವೇಶಕ್ಕೆಂದು ಬಂದ ಕುಟುಂಬಸ್ಥರಿಗೆ ಶಾಕ್​ ಆಗಿದೆ.. ದೇವರ ಕೋಣೆಯಲ್ಲಿ ಹುತ್ತಗಳು ತಲೆ ಎತ್ತಿರುವುದು ಮನೆ ಮಾಲೀಕರಲ್ಲಿ ಕುತೂಹಲ ಹೆಚ್ಚಿಸಿದೆ.