Asianet Suvarna News Asianet Suvarna News

ಗಾಡಿ ಹಾಳಾಗಿದ್ರೆ ಫ್ರೀ ರಿಪೇರಿ! ಇವರನ್ನ ಸಂಪರ್ಕಿಸಿ, ಕಂಡಿಷನ್ಸ್ ಅಪ್ಲೈ

ಕೊರೋನಾ ವಾರಿಯರ್ಸ್‌ ಬೆಂಬಲಕ್ಕೆ ನಿಂತ ಮೆಕ್ಯಾನಿಕ್ಸ್‌| ಪೊಲೀಸ್‌, ವೈದ್ಯರು, ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಸಿಬ್ಬಂದಿ ವಾಹನಗಳಿಗೆ ಉಚಿತ ಬ್ರೇಕ್‌ಡೌನ್‌ ಸರ್ವಿಸ್| ಸುಮಾರು 40 ಮೆಕ್ಯಾನಿಕ್‌ಗಳ ತಂಡದಿಂದ ಉಚಿತ ಸೇವೆ|

ಬೆಂಗಳೂರು(ಏ.26): ಕೊರೋನಾ ವೈರಸ್‌ ವಿರುದ್ಧ ಹೋರಾಟಕ್ಕಿಳಿದ ಪೊಲೀಸ್‌, ವೈದ್ಯರು, ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಸಿಬ್ಬಂದಿ ವಾಹನಗಳಿಗೆ ಉಚಿತ ಬ್ರೇಕ್‌ಡೌನ್‌ ಸರ್ವಿಸ್ ನೀಡಲು ಮೆಕ್ಯಾನಿಕ್ಸ್‌ ಲೈಫ್‌ ಅಸೋಸಿಯೇಷನ್‌ ನಿರ್ಧರಿಸಿದೆ. ಈ ಮೂಲಕ ಕೊರೋನಾ ವಾರಿಯರ್ಸ್‌ ಬೆಂಬಲಕ್ಕೆ ಮೆಕ್ಯಾನಿಕ್ಸ್‌ ನಿಂತಿದೆ. 

ಒಬ್ಬ ಬಿಹಾರಿಯಿಂದ 29 ಜನಕ್ಕೆ ಅಂಟಿದ ಮಹಾಮಾರಿ: ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರು ನಂ.1..!

ವಾಹನಗಳು ರಸ್ತೆಯಲ್ಲಿ ಕೆಟ್ಟು ನಿಂತರೆ ಒಂದು ಕರೆ ಮಾಡಿದರೆ ಸಾಕು ಮೆಕ್ಯಾನಿಕ್ಸ್‌ ಲೈಫ್‌ ಅಸೋಸಿಯೇಷನ್‌ ತಂಡ ಬಮದು ವಾಹನವನ್ನ ಉಚಿತವಾಗಿ ರಿಪೇರಿ ಮಾಡಿಕೊಡಲಾಗುತ್ತದೆ. ಸುಮಾರು 40 ಮೆಕ್ಯಾನಿಕ್‌ಗಳ ತಂಡ ಈ ಸೇವೆಯನ್ನ ನೀಡಲಿದೆ. 
 

Video Top Stories