ಆಪ್‌ಗೆ ಅಧಿಕಾರ, ಕೈಗೆ ತಿರಸ್ಕಾರ, ಕಮಲಕ್ಕೆ ವಿಪಕ್ಷ ಆಕಾರ: ಇದು ಸಮೀಕ್ಷೆಗಳ ಸಾರ!
ದೆಹಲಿ ವಿಧಾನಸಭೆ ಚುನಾವಣೆ ಮತದಾನ ಪ್ರಕ್ರಿಯೆ ಅಂತ್ಯ| ಕೇವಲ ಶೇ.54.65ರಷ್ಟು ಮತದಾನ ಎಂದ ಚುನಾವಣಾ ಆಯೋಗ| ಶುರುವಾಯಿತು ಚುನಾವಣೋತ್ತರ ಸಮೀಕ್ಷೆಗಳ ಭರಾಟೆ| ಪ್ರಮುಖ ಸುದದಿವಾಹಿನಿಗಳ ಚುನಾವಣೋತ್ತರ ಸಮೀಕ್ಷೆ ಬಹಿರಂಗ| ಚುನಾವಣೋತ್ತರ ಸಮೀಕ್ಷೆಗಳಲ್ಲಿ ಗೆದ್ದ ಆಮ್ ಆದ್ಮಿ ಪಕ್ಷ| ಮತ್ತೆ ಅಧಿಕಾರದ ಗದ್ದುಗೆ ಏರಲಿದ್ದಾರೆ ಅರವಿಂದ್ ಕೇಜ್ರಿವಾಲ್| ಬಿಜೆಪಿ ಪ್ರಮುಖ ವಿರೋಧ ಪಕ್ಷ ಸ್ಥಾನಕ್ಕೆ ತೃಪ್ತಿ|
ನವದೆಹಲಿ(ಫೆ.08): ಅಷ್ಟೇನೂ ಹುರುಪಿನ ಮತದಾನ ನಡೆಯದ ದೆಹಲಿ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದ್ದು ಮತ್ತೆ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರುವ ಲಕ್ಷಣಗಳು ದಟ್ಟವಾಗಿದೆ. 70 ಶಾಸಕರ ಸಂಖ್ಯಾಬಲದ ದೆಹಲಿ ವಿಧಾನಸಭೆಯಲ್ಲಿ ಅಧಿಕಾರಕ್ಕೆ ಬರಲು 36 ಶಾಸಕರ ಸರಳ ಬಹುಮತ ಅಗತ್ಯವಿದ್ದು, ಈ ಬಾರಿಯೂ ಆಮ್ ಆದ್ಮಿ ಪಕ್ಷ ಬಹುಮತ ಪಡೆಯಲಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...