ಪ್ರೀತಿ ಅಂದ್ರೆ ಇದೇನಾ? ಬಾಲಕಿಯೊಬ್ಬಳು ಮಗುವನ್ನು ರಕ್ಷಿಸಿದ ಪರಿ ಇದು!

ಪ್ರೀತಿ ಅಂದ್ರೆ ಇದೇನಾ? ಬಾಲಕಿಯೊಬ್ಬಳು ಮಗುವನ್ನು ರಕ್ಷಿಸಿದ ಪರಿ ಇದು!

Feb. 13, 2018, 8:14 p.m.

ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ನವಿಲಗೋಣ ಗ್ರಾಮದಲ್ಲಿ ಮೈಜುಮ್ಮೆನಿಸುವ ಘಟನೆ ನಡೆದಿದೆ. ಪುಟ್ಟ ಮಕ್ಕಳಿಬ್ಬರು ಆಟವಾಡುತ್ತಿದ್ದಾಗ,  ಇದ್ದಕ್ಕಿದ್ದಂತೆಯೇ ನುಗ್ಗಿ ಬಂದ ಹಸು ಸತತವಾಗಿ ದಾಳಿ ನಡೆಸಿದೆ. ಆದರೆ, ಆ ಬಾಲಕಿ, ತಾನು ಪೆಟ್ಟುತಿಂದರೂ ಸಣ್ಣಮಗುವನ್ನು ರಕ್ಷಿಸಲು ಯತ್ನಿಸುವ ಮನಕಲಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗು ಹಾಗೂ ಬಾಲಕಿ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.