ಡಿಆರ್'ಎಸ್ ಅಂದ್ರೆ ಡ್ರೆಸ್ಸಿಂಗ್ ರಿವ್ಯೂ ಸಿಸ್ಟಮ್ಮಾ..?

ಡಿಆರ್'ಎಸ್ ಅಂದ್ರೆ ಡ್ರೆಸ್ಸಿಂಗ್ ರಿವ್ಯೂ ಸಿಸ್ಟಮ್ಮಾ..?

March 7, 2017, 6:11 p.m.

ಬೆಂಗಳೂರಿನಲ್ಲಿ ಇಂದು ಮುಕ್ತಾಯವಾದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಹಲವು ರೋಚಕ ಸನ್ನಿವೇಷಗಳಿಗೆ ಕಾರಣವಾಯಿತು.

ಅದರಲ್ಲೂ ಎರಡನೇ ಇನಿಂಗ್ಸ್'ನಲ್ಲಿ ಆಸೀಸ್ ನಾಯಕ ಸ್ಟೀವ್ ಸ್ಮಿತ್ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಕಷ್ಟು ಬೆವರು ಹರಿಸಿದರು. ಆದರೆ ಉಮೇಶ್ ಯಾದವ್ ಎಸೆದ ಚೆಂಡನ್ನು ಸರಿಯಾಗಿ ಗ್ರಹಿಸದೇ ಎಲ್'ಬಿ ಬಲೆಗೆ ಬೀಳಬೇಕಾಯಿತು. ಈ ವೇಳೆ ಅಂಪೈರ್ ಔಟ್ ನೀಡಿದರು ಸ್ಮಿತ್ ಡ್ರೆಸ್ಸಿಂಗ್ ರೂಂನಿಂದ ಏನಾದರೂ ಸಲಹೆ ಸಿಗಬಹುದೇ ಎಂದು ಕಾಯುತ್ತಾ ನಿಂತರು. ಅಷ್ಟರಲ್ಲಾಗಲೇ ಅಂಪೈರ್ ಪೆವಿಲಿಯನ್'ಗೆ ತೆರಳಲು ಸ್ಮಿತ್'ಗೆ ಸೂಚಿಸಿದರು.

ಸ್ಮಿತ್ ಈ ನಕಾರಾತ್ಮಕ ತಂತ್ರ ಟೀಂ ಇಂಡಿಯಾ ನಾಯಕ ಕೊಹ್ಲಿಯ ಅಸಮಧಾನಕ್ಕೂ ಕಾರಣವಾಯಿತು.