ಅತಿಹೆಚ್ಚು ಬಲಿಪಡೆದ ಟಾಪ್ 5 ವಿಕೆಟ್'ಕೀಪರ್'ಗಳಿವರು; ನಂ.1 ಸ್ಥಾನಕ್ಕೇರಬಹುದಾ ಧೋನಿ..?

ಅತಿಹೆಚ್ಚು ಬಲಿಪಡೆದ ಟಾಪ್ 5 ವಿಕೆಟ್'ಕೀಪರ್'ಗಳಿವರು; ನಂ.1 ಸ್ಥಾನಕ್ಕೇರಬಹುದಾ ಧೋನಿ..?

Feb. 8, 2018, 4:54 p.m.

- ನವೀನ್ ಕೊಡಸೆ

ಮಹೇಂದ್ರ ಸಿಂಗ್ ಧೋನಿ ಏಕದಿನ ಕ್ರಿಕೆಟ್'ನಲ್ಲಿ 400 ಬಲಿ ಪಡೆದ ಭಾರತದ ಮೊದಲ ಹಾಗೂ ವಿಶ್ವದ 4ನೇ ವಿಕೆಟ್'ಕೀಪರ್ ಎನ್ನುವ ದಾಖಲೆ ಬರೆದಿದ್ದಾರೆ. ಜಸ್'ಪ್ರೀತ್ ಬುಮ್ರಾ ಬೌಲಿಂಗ್'ನಲ್ಲಿ ಡೇವಿಡ್ ಮಿಲ್ಲರ್ ಕ್ಯಾಚ್ ಹಿಡಿಯುವ ಮೂಲಕ ಧೋನಿ ವಿನೂತನ ದಾಖಲೆ ನಿರ್ಮಿಸಿದ್ದಾರೆ. ಈ ಪಟ್ಟಿಯಲ್ಲಿ ಲಂಕಾ ಮಾಜಿ ಕ್ರಿಕೆಟಿಗ ಸಂಗಕ್ಕರ(482) ಮೊದಲ ಸ್ಥಾನದಲ್ಲಿದ್ದರೆ, ಗಿಲ್'ಕ್ರಿಸ್ಟ್(472) ಹಾಗೂ ಮಾರ್ಕ್ ಬೌಷರ್(424) ಉಳಿದೆರಡು ಸ್ಥಾನದಲ್ಲಿದ್ದಾರೆ.

ಎಂ.ಎಸ್. ಧೋನಿ ಬಹುತೇಕ 2019ರ ವಿಶ್ವಕಪ್'ವರೆಗೂ ಟೀಂ ಇಂಡಿಯಾದಲ್ಲಿ ಆಡುವ ಸಾಧ್ಯತೆಯಿದ್ದು, ಕನಿಷ್ಠ 40 ಪಂದ್ಯವನ್ನಾಡಿದರೂ ಈ ಪಟ್ಟಿಯಲ್ಲಿ ನಂ.1 ಪಟ್ಟಕ್ಕೇರುವುದು ಕಷ್ಟವೇನಲ್ಲ.