Asianet Suvarna News Asianet Suvarna News

ಉಡುಪಿ: ಕಾರಂತ ಥೀಮ್‌ ಪಾರ್ಕ್‌ನಲ್ಲಿ ಯುದ್ಧ ವಿಮಾನ..?

ಶೀಘ್ರದಲ್ಲಿಯೇ ಕಾರಂತ ಥೀಮ್ ಪಾರ್ಕ್‌ನಲ್ಲಿ ಯುದ್ಧ ವಿಮಾನ ನೋಡಲು ಸಾಧ್ಯವಾಗುವ ದಿನಗಳು ಹತ್ತಿರವಿದೆ. ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ಯುದ್ಧ ವಿಮಾನವನ್ನು ಪದರ್ಶನ ಮಾಡಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಕೋಟ ಶ್ರೀನಿವಾಸ್ ಪೂಜಾರಿ ಮನವಿ ಸಲ್ಲಿಸಿದ್ದಾರೆ.

Fighter jets to be kept for Exhibition in karantha theme park
Author
Bangalore, First Published Oct 16, 2019, 10:28 AM IST

ಉಡುಪಿ(ಅ.16): ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ಯುದ್ಧ ವಿಮಾನವನ್ನು ಪದರ್ಶನ ಮಾಡಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ರಾಜ್ಯ ಮುಜರಾಯಿ, ಮೀನುಗಾರಿಕಾ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಸಲ್ಲಿಸಿದ್ದಾರೆ.

ಉಡುಪಿ: ಹಠಾತ್‌ ಮಳೆಗೆ 40 ಎಕ್ರೆ ಭತ್ತದ ಬೆಳೆ ನಾಶ

ಮಂಗಳವಾರ ದೆಹಲಿಯಲ್ಲಿ ರಕ್ಷಣಾ ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಕೋಟ ಚರ್ಚೆ ನಡೆಸಿದ್ದಾರೆ. ದೇಶದ ರಕ್ಷಣಾ ಸೇವೆಯಿಂದ ತೆರವುಗೊಳಿಸಲಾದ ಯುದ್ಧ ವಿಮಾನವನ್ನು ಕಾರಂತ ಥೀಮ್‌ ಪಾರ್ಕ್ ನಲ್ಲಿ ಪ್ರದರ್ಶಿಸುವುದರಿಂದ, ಅಲ್ಲಿಗೆ ಬರುವ ಜಿಲ್ಲೆ ಮತ್ತು ಹೊರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಯುದ್ಧ ವಿಮಾನದ ವೀಕ್ಷಣೆಗೆ ಮತ್ತು ಮಾಹಿತಿ ಪಡೆಯಲು ಸಹಾಯವಾಗುತ್ತದೆ. ಜತೆಗೆ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮೂಡಿಸಲು ಸಹಕಾರಿಯಾಗಲಿದೆ ಎಂದು ಸಚಿವ ಕೋಟ, ಕೇಂದ್ರ ಸಚಿವರಿಗೆ ಮನವರಿಕೆ ಮಾಡಿದ್ದಾರೆ.

20 ಸಾವಿರ ಜನರಿಂದ ಕೈ ತೊಳೆಯುವ ದಿನ ಆಚರಣೆ..!

ಈ ಪ್ರಸ್ತಾವನೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸಮ್ಮತಿ ವ್ಯಕ್ತಪಡಿಸಿದರು ಎಂದು ಕೋಟ ತಿಳಿಸಿದ್ದಾರೆ. ಜತೆಗೆ ರಾಜ್ಯದ ಎ ದರ್ಜೆಯ ಮುಜರಾಯಿ ದೇವಸ್ಥಾನಗಳಲ್ಲಿ ಸಾವಿರ ಜೋಡಿಯ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಧಾರ್ಮಿಕ ದತ್ತಿ ಇಲಾಖೆ ಮೂಲಕ ಅನುಷ್ಟಾನಿಸಲು ಯೋಚಿಸಿರುವುದನ್ನು ಕೇಂದ್ರ ಸಚಿವರ ಗಮನಕ್ಕೆ ತರಲಾಯಿತು ಎಂದವರು ತಿಳಿಸಿದ್ದಾರೆ.

ಉಡುಪಿ ಭಾಗದಲ್ಲಿ ಗುಡುಗು, ಮಿಂಚು ಸಹಿತ ಮಳೆ.

Follow Us:
Download App:
  • android
  • ios