Asianet Suvarna News Asianet Suvarna News

ಬುಲ್‌​ಟ್ರಾಲ್‌, ಲೈಟ್‌ ಫಿಶಿಂಗ್‌ ನಡೆ​ಸಿ​ದ್ರೆ ಡೀಸೆಲ್‌ ಸಬ್ಸಿಡಿ ಕಡಿ​ತ

ಬುಲ್‌ ಟ್ರಾಲ್‌ ಮತ್ತು ಬೆಳಕು ಮೀನುಗಾರಿಕೆ ನಡೆಸುವ ಬೋಟ್‌ಗ​ಳಿಗೆ ಡೀಸೆಲ್‌ ಸಬ್ಸಿಡಿ ಕಡಿತಗೊಳಿಸುವಂತೆ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸರ್ಕಾರದ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ. ಮಹೇಶ್ವರ ರಾವ್‌ ಸೂಚಿಸಿದ್ದಾರೆ.

diesel subsidy will deducted for those who do bultrol fishing
Author
Bangalore, First Published Oct 31, 2019, 10:23 AM IST

ಉಡು​ಪಿ(ಅ.31): ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ಬುಲ್‌ ಟ್ರಾಲ್‌ ಮತ್ತು ಬೆಳಕು ಮೀನುಗಾರಿಕೆ ನಡೆಸುವ ಬೋಟ್‌ಗ​ಳಿಗೆ ಡೀಸೆಲ್‌ ಸಬ್ಸಿಡಿ ಕಡಿತಗೊಳಿಸುವಂತೆ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸರ್ಕಾರದ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ. ಮಹೇಶ್ವರ ರಾವ್‌ ಸೂಚಿಸಿದ್ದಾರೆ.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಜಿಲ್ಲಾಭಿವೃದ್ಧಿ, ಮರಳು ಸಮಸ್ಯೆ ಹಾಗೂ ನೆರೆ ಪರಿಹಾರಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ್ದಾರೆ.

ವಿಶ್ವದ ಅತಿ ಹಿರಿಯಜ್ಜಿ 123 ವರ್ಷದ ಟ್ಯಾಂಜಿಲ್ಯಾ ಇನ್ನಿಲ್ಲ

ಬೆಳಕು ಮೀನುಗಾರಿಕಾ ತಡೆಯುವ ನಿಟ್ಟಿನಲ್ಲಿ ಬಂದರು ದ್ವಾರದಲ್ಲೇ ಜನರೇಟರ್‌ ತೆಗೆದುಕೊಂಡು ಹೋಗುವುದನ್ನು ತಡೆಯುವಂತೆ, ಅಗತ್ಯ ಬಿದ್ದರೆ ಪೊಲೀಸ್‌ ಇಲಾಖೆಯ ನೆರವು ಪಡೆಯುವಂತೆ ಸೂಚಿಸಿದ ಅವರು, ಮೀನುಗಾರಿಕೆ ತೆರಳುವವರ ಸರಿಯಾದ ಮಾಹಿತಿ ಪಡೆಯುವುದಕ್ಕೆ ಡೀಸೆಲ್‌ ಬಂಕ್‌ನ​ಲ್ಲಿಯೇ ಬೋಟ್‌​ನಲ್ಲಿ ತೆರಳುವವರ ಸಂಪೂರ್ಣ ವಿವರ ಪಡೆಯುವಂತೆ ಹಾಗೂ ಸಮುದ್ರದಲ್ಲಿ ಬೋಟ್‌ಗ​ಳನ್ನು ಸರಿಯಾದ ರೀತಿಯಲ್ಲಿ ಪತ್ತೆ ಹಚ್ಚುವ ಕುರಿತಂತೆ ಬೋಟ್‌ ಟ್ರಾಕಿಂಗ್‌ ಸಿಸ್ಟಂನ್ನು ಎಲ್ಲ ಬೋಟ್‌​ಗ​ಳಲ್ಲಿ ಅಳವಡಿಸುವಂತೆ ಸೂಚಿಸಿದ್ದಾರೆ.

ಮಾರು​ಕಟ್ಟೆವ್ಯವ​ಸ್ಥೆಗೆ ಸೂಚ​ನೆ:

ಜಿಲ್ಲೆಯಲ್ಲಿ ಜಾಗತಿಕ ಮನ್ನಣೆ ಪಡೆದಿರುವ ಬೆಳೆಗಳಾದ ಮಟ್ಟುಗುಳ್ಳ ಮತ್ತು ಉಡುಪಿ ಮಲ್ಲಿಗೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃ​ದ್ಧಿಗೊಳಿಸಿ, ಸೂಕ್ತ ಮಾರುಕಟ್ಟೆವ್ಯವಸ್ಥೆ ನಿರ್ಮಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಕಾರ್ಯದರ್ಶಿ ತಿಳಿಸಿದರು.

ಮಳೆಯಿಂದಾಗಿ ಕೃಷಿಗೆ ಭಾರಿ ನಷ್ಟದ ಜೊತೆಗೆ ಅಡಕೆ ಬೆಳೆಗೆ ಕೊಳೆ ರೋಗದ ಸಮಸ್ಯೆ ಎದುರಾಗಿದೆ. ಈ ಸಮಸ್ಯೆ ಪರಿಹಾರಕ್ಕೆ ಸರಕಾರದಿಂದ ಸರ್ವೇ ನಡೆಸಲು ಜಿಲ್ಲಾಧಿಕಾರಿ ಜಿ. ಜಗದೀಶ್‌ ಕೋರಿದ್ದಾರೆ.

ಡೀಮ್‌್ಡ ಫಾರೆಸ್ಟ್‌ ಸರ್ವೇ ಕಾರ್ಯ​ವನ್ನು ಶೀಘ್ರದಲ್ಲಿ ನಡೆಸಬೇಕು ಹಾಗೂ ಜಂಟಿ ಸರ್ವೇ ನಡೆಸಿ ಆರ್‌ಟಿಸಿ ಮಾಡುವ ಮೂಲಕ ಕೆಲಸ ಶೀಘ್ರ ನಡೆಯುವಂತೆ ಅರಣ್ಯ ಇಲಾಖೆಗೆ ಅವರು ಸೂಚಿಸಿದ್ದಾರೆ.

ಸಿದ್ರಾಮಯ್ಯ ಲೋಕಾಯುಕ್ತವನ್ನು ಕೊಂದು ಹಾಕಿದ್ರು: ಶೋಭಾ

ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅನುಷ್ಠಾನಗೊಳಿಸುವ ಮೂಲಕ ಗುರಿ ಸಾಧಿಸುವಂತೆ ಹಾಗೂ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಎಂ. ಮಹೇಶ್ವರ ರಾವ್‌ ಸೂಚಿಸಿದ್ದಾರೆ.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಸಿಇಒ ಪ್ರೀತಿ ಗೆಹಲೋತ್‌, ಎಸ್‌.​ಪಿ. ನಿಶಾ ಜೇಮ್ಸ… ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದ​ರು.

ರಾಜ್ಯ ಮೀನುಗಾರಿಕಾ ಕಾಯ್ದೆಗೆ ತಿದ್ದುಪಡಿ

ಬುಲ್‌​ಟ್ರಾ​ಲ್‌-ಬೆಳಕು ಮೀನುಗಾರಿಕೆಯನ್ನು ನಡೆಸುವ ಬೋಟ್‌ಗಳಿಗೆ ಡೀಸೆಲ್‌ ಸಬ್ಸಿಡಿ ಕಡಿತಗೊಳಿಸಲು, ಅಂತಹ ಬೋಟ್‌ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು, ಅತಿ ಹೆಚ್ಚಿನ ದಂಡ ವಿಧಿಸಲು, ಲೈಸೆನ್ಸ್‌ ರದ್ದುಗೊಳಿಸಲು ಅನುಕೂಲವಾಗುವಂತೆ ಕರ್ನಾಟಕ ಮರೈನ್‌ ಫಿಷಿಂಗ್‌ ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ ಮಾಡುವುದಕ್ಕೆ ಹಾಗೂ ಈ ಕಾನೂನು ಉಲ್ಲಂಘಿಸುವರನ್ನು ತ್ತೆ ಹಚ್ಚಲು ಪ್ರತ್ಯೇಕ ತಂಡ ರಚಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಮಹೇಶ್ವರ ರಾವ್‌ ಹೇಳಿದ್ದಾರೆ.

Follow Us:
Download App:
  • android
  • ios