Asianet Suvarna News Asianet Suvarna News

ಅರಸನಕೋಟೆ ಅಖಿಲಾಂಡೇಶ್ವರಿ ಬಗ್ಗೆ ತಿಳಿದಿರದ ವಿಚಾರಗಳಿವು!

ಇವರು 'ಸದ್ದು' ಎಂದರೆ ಸಾಕು ಅಲ್ಲಿನ ವಾತಾವರಣವೇ ಒಂದು ಘಳಿಕೆಯಲ್ಲಿ ನಿಶಬ್ದವಾಗಿ ಬಿಡುತ್ತದೆ. ಇವರ ಗಾಂಭಿರ್ಯ, ನಟನೆಗೆ ತಕ್ಕ ಹಾವ-ಭಾವ, ಅಂತಯೇ ಆ ಕಣ್ಣೋಟ್ಟಕ್ಕೆ ಮಾರು ಹೋಗದವರು ಯಾರು ಇಲ್ಲ. Yes,ಇವರೇ ಅರಸಿನ ಕೋಟೆಯ ಅಖಿಲಾಡೇಶ್ವರಿ ಅಲಿಯಾಸ್  ವಿನಯಾಪ್ರಸಾದ್.

zee kannada fame Vinaya Prasad cine journey
Author
Bangalore, First Published Nov 8, 2019, 9:23 AM IST

ರಂಗಭೂವಿ ಕಲಾವಿದೆ:

ವಿನಯಾ ಪ್ರಸಾದ್ ಮೂಲತಃ ಉಡುಪಿಯವರು. ಪ್ರಾಥಮಿಕ ಶಿಕ್ಷಣವನ್ನು ಪುತ್ತೂರಿನ ಸಂತ ವಿಕ್ಟರ್ಸ್‌ ಶಾಲೆಯಲ್ಲಿ ಪಡೆದುಕೊಂಡ ಇವರಿಗೆ ಮೊದಲು ವೇದಿಕೆ ಕಲ್ಪಸಿದ್ದೆ ಈ ಶಾಲೆ. ಬಾಲ್ಯದಿಂದಲೂ ಪಾಠ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದ ಇವರು, ಸಂಗೀತ, ನೃತ್ಯ, ಆಶುಭಾಷಣ, ಯೋಗ ಮತ್ತು ಅನೇಕ ಪುಸ್ತಕಗಳನ್ನು ಹೋದುತ್ತಿದ್ದರು. ಇವೆಲ್ಲವೂ ಇವರಿಗೆ ಸಾಹಿತ್ಯದ ಒಲವನ್ನು ಮೂಡಿಸಿತ್ತು. ಅದಕ್ಕೆ ಪೂರಕವಾಗಿ ಇವರ ತಂದೆ ತಾಯಿ ಸಾಹಿತ್ಯದ ಕುರಿತಾದ ಅನೇಕ ಪುಸ್ತಕಗಳನ್ನು ತಂದು ಕೊಡುತ್ತಿದ್ದರು. ಪುತ್ತೂರಿನಲ್ಲಿ ಓದುತ್ತಿರುವ ವೇಳೆ ಮೊದಲ ಬಾರಿಗೆ ಅಭಿನಯ ಶಂಕುತಳಾ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದರು. ಅಲ್ಲಿಂದ ಇವರ ಬಣ್ಣದ ಲೋಕದ ಪಯಣ ಪ್ರಾರಂಭವಾಯಿತು. ನಂತರ ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಪೋಡಕ್ಷನ್ ಟೀಮ್ ಇದ್ದುದ್ದರಿಂದ ಅನೇಕ ಬಗೆಯ ನಾಟಕಗಳನ್ನು ರಚಿನ ನಟನೆ ಮಾಡುತ್ತಿದ್ದರು.

ವಿನಯಾ ಪ್ರಸಾದ್ 7 ವರ್ಷದ ಸಂಸಾರಕ್ಕೆ ಅಸಮಾಧಾನ ತಂದದ್ದು ಇದೊಂದೇ ವಿಚಾರ!

ಸಿನಿ ಪ್ರಪಂಚದ ಐಡಿಯಾವೇ ಇರಲಿಲ್ಲ:

ಸಿನಿಮಾದಲ್ಲಿ  ತಾನು ನಟಿಸುತ್ತೇನೆ ಎಂದು ಯಾವತ್ತೂ ಅಂದುಕೊಂಡವರಲ್ಲ. ಆಕಸ್ಮಿಕವಾಗಿ ಸಿನಿಮಾ ಅವಕಾಶ ಇವರನ್ನು ಅರಸಿ ಬಂದಿತ್ತು. ಬಾಲ್ಯದಿಂದಲೂ ಕಲಾಭೂಮಿಯಲ್ಲಿ ಪಳಗಿದ್ದ ಕಾರಣ ನಟನೆಯನ್ನು ತನ್ನಿಂದ ನಿಭಾಯಿಸಬಹುದು ಎಂಬ ದೈರ್ಯ ಇವರಲ್ಲಿತ್ತು. ಹಾಗಾಗಿ ಮೊದಲ ಬಾರಿಗೆ ಗಣೇಶನ ಮದುವೆ ಚಿತ್ರದಲ್ಲಿ ಅನಂತ್‌ನಾಗ್ ಜೊತೆ ನಟಿಸುವ ಅವಕಾಶ ಇವರ ಪಾಲಿಗೆ ಒದಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 250 ಚಿತ್ರಗಳಲ್ಲಿ ನಟಿಸಿದ್ದಾರೆ.

ಪಂಚಭಾಷಾ ನಟಿ:

ಕನ್ನಡ ಮಾತ್ರವಲ್ಲದೆ ದಕ್ಷಿಣ ಭಾರತದ ಪ್ರತಿಯೊಂದು ಚಿತ್ರರಂಗದಲ್ಲಿ ಬಣ್ಣ ಹಚ್ಚಿದ್ದಾರೆ. ನಮ್ಮದಲ್ಲದ ಭಾಷೆಯಲ್ಲಿ ನಟಿಸುವಾಗ ಇವರು ಮೊದಲು ಹೋಗಿ ಅವರ ಭಾಷೆಯನ್ನು ಕಲಿಯುತ್ತಿದ್ದರಂತೆ. ಈ ಮೂಲಕ ನಾವು ಯಾವ ಪಾತ್ರವನ್ನು ನಟಿಸುತ್ತಿದ್ದೇವೆ ಎಂಬ ಸಂಪೂರ್ಣ ಚಿತ್ರಣ ಸಿಗುತ್ತಿತ್ತು, ಮಾತ್ರವಲ್ಲದೆ ಆ ಭಾಷೆಯ ಸಂಸ್ಕತಿಯನ್ನು ತಿಳಿಸುತ್ತಿತ್ತು. ದಕ್ಷಿಣ ಭಾರತದ ಮೇರು ನಟರಾದ ಚಿರಂಜೀವಿ, ವೆಂಕಟೇಶ್, ಅಲ್ಲುಅರ್ಜುನ್, ರಜನೀಕಾಂತ್, ಮಮುಟ್ಟಿ, ಮೋಹನ್ ಲಾಲ್ ಜೊತೆಗೆ ನಮ್ಮ ಕನ್ನಡದ ಅನೇಕ  ಹಿರಿಯ ನಟರ ಜೊತೆಗೆ ಕೆಲಸ ಮಾಡಿದ್ದಾರೆ. ಮಾತ್ರವಲ್ಲದೆ ತುಳು ಭಾಷೆಯಲ್ಲೂ ನಟಿಸಿದ್ದಾರೆ.

ತಂದೆ ಕಳೆದುಕೊಂಡ 'ಪಾರು' ತಮ್ಮ; ದುಃಖದಲ್ಲೇ ಅವಾರ್ಡ್ ಸ್ವೀಕಾರ!

ಎಲ್ಲರೊಳಗೆ ಒಂದಾಗು ಮಂಕುತಿಮ್ಮ:

ನಾವು ಅದೆಷ್ಟೇ ಹೆಸರು ಮಾಡಿದರೂ ನಾನು ನಾನಾಗಿಯೇ ಇರಬೇಕು. ಯಾಕಂದ್ರೆ ಬಣ್ಣದ ಲೋಕದಲ್ಲಿ ನಾವು ಮಾಡುವ ಪಾತ್ರಕ್ಕೂ ಮನೆಯಲ್ಲಿ ನಾವು ನಿರ್ವಹಿಸುವ ಪಾತ್ರಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಹಾಗಾಗಿ ಬಣ್ಣ ಹಾಕಿದಾಗ ನಾವು ಆ ಪಾತ್ರಧಾರಿಯಾಗಿ ಪಾತ್ರಕ್ಕೆ ಮನ್ನಣೆಯನ್ನು ನೀಡಬೇಕು. ಮನೆಗೆ ಹೋದಾಗ ನಾವು ಸಾಮಾನ್ಯ ವ್ಯಕ್ತಿಯಂತೆ ಇರಬೇಕು. ಶೂಟಿಂಗ್ ಮುಗಿಸಿ ಕಾರು ಹತ್ತಿದ ಕೂಡಲೇ ನಾನು ಆ ಗ್ಲಾಮರ್ ಬದುಕಿನ ಎಲ್ಲಾ ಚಿಂತನೆಗಳನ್ನು ಬಿಟ್ಟು ಮನೆಯಲ್ಲಿ ಸಾಮಾನ್ಯ ವ್ಯಕ್ತಿಯಂತೆ ಇರುತ್ತೇನೆ ಹಾಗಿದಾಗ ಮಾತ್ರ ನಾವು ನೆಮ್ಮದಿಯ ಬದುಕನ್ನು ಜೀವಿಸಲು ಸಾಧ್ಯ. ನಾನು ಎಷ್ಟೇ ದೊಡ್ಡ ಮಟ್ಟಕ್ಕೆ ಹೋದರು ನನ್ನ ತನವನ್ನು ನಾನು ಯಾವತ್ತೂ ಬಿಟ್ಟು ಕೊಟ್ಟಿಲ್ಲ. ಒಂದು ನಟನೆಗೆ ಪರಕಾಯ ಪ್ರವೇಶ ಮಾಡಬೇಕು ಅಂದಾಗ ಅದನ್ನು ಮಾಡಿಯೇ ತೀರುತ್ತೇನೆ. ಹಾಗೆ ಬಣ್ಣದ ಲೋಕದಿಂದ ಹೊರಗೆ ಬಂದಾಗ ಸಾಮಾನ್ಯ ಮಹಿಳೆಯಂತೆ ನಾನಿರಲು ಬಯಸುತ್ತೇನೆ. ಹಾಗಾಗಿ ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು. ' ಎಲ್ಲರೊಳಗೆ ಒಂದಾಗು ಮಂಕುತಿಮ್ಮ' ಎಂಬ ಮಾತಿನಂತೆ ನಾವು ಎಲ್ಲರ ಜೊತೆ ಒಂದಾಗಿ ಬಾಳಿದಾಗ ಈ ಸಮಾಜದಲ್ಲಿ ಸಾಮರಸ್ಯವನ್ನು ಬೆಳೆಸಲು ಸಾಧ್ಯ ಎಂಬುದು ಇವರ ಅನುಭವದ ಮಾತು.

ಅಂದುಕೊಂಡಂಗಿಲ್ಲ ಹಳ್ಳಿ ಹುಡುಗಿ ಪಾರು; ಈ ಫೋಟೋಗಳನ್ನು ನೋಡಿ

ಅರಸಿನಕೋಟೆಯ ಅಖಿಲಾಡೇಶ್ವರಿ:

ಪ್ರಸ್ತುತ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರವಾಹಿಯಲ್ಲಿ ಅಖಿಲಾಡೇಶ್ವರಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ತೆಲುಗು, ಮಲಯಾಳಂ, ತುಳು ಸೇರಿದಂತೆ ಕನ್ನಡದಲ್ಲೂ ಇವರ ಚಿತ್ರಗಳು ಮುಂಬರುವ ದಿನಗಳಲ್ಲಿ ತೆರೆ ಕಾಣಲಿದೆ.

ಸುಷ್ಮಾ ಸದಾಶಿವ್ , ಪುತ್ತೂರು
 

Follow Us:
Download App:
  • android
  • ios