Asianet Suvarna News Asianet Suvarna News

ಅಭಿನಯಕ್ಕೊಂದು ಹೊಸ ಪಾಠ ಶಾಲೆ 'ಜೀ ಅಕಾಡೆಮಿ'!

ಕನ್ನಡ ಚಿತ್ರರಂಗಕ್ಕೊಂದು ಅಭಿನಯ ತರಬೇತಿ ನೀಡುವ ಪಾಠ ಶಾಲೆ ಬಾಗಿಲು ತೆರೆದಿದೆ. ಸಾಕಷ್ಟು ಹೊಸತನಗಳಿಂದ ಕೂಡಿರುವ ಈ ಪಾಠ ಶಾಲೆಯ ಹೆಸರು ‘ಜೀ ಅಕಾಡೆಮಿ’.

 

Director Deshpande opens Zee acting classes in Bangalore
Author
Bangalore, First Published Oct 18, 2019, 10:31 AM IST

ಇತ್ತೀಚೆಗಷ್ಟೆ ನಟ ಶ್ರೀಮುರಳಿ ಅವರು ಜೀ ಅಕಾಡೆಮಿಯನ್ನು ಉದ್ಘಾಟಿಸಿದರು. ಐಪಿಎಸ್ ಅಧಿಕಾರಿ ಟಿ ಸುನಿಲ್ ಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ
ಜೈರಾಜ್, ನಟಿ ತಾರಾ ಅವರು ಅತಿಥಿಗಳಾಗಿ ಬಂದಿದ್ದರು.

ನಿರ್ದೇಶಕ ಗರು ದೇಶಪಾಂಡೆ ಅವರ ಸಾರಥ್ಯದಲ್ಲಿ ಬೆಂಗಳೂರಿನ ನಾಗರಬಾವಿಯ ಮುದ್ದಿನ ಪಾಳ್ಯ ಮುಖ್ಯ ರಸ್ತೆ (ದಿಪಾ ಕಾಂಪ್ಲೆಕ್ಸ್ ಹತ್ತಿರ) ರಸ್ತೆಯಲ್ಲಿ ಈ ಜೀ ಅಕಾಡೆಮಿ ಆರಂಭಗೊಂಡಿದೆ. ‘ಹಲವು ಕನಸುಗಳನ್ನು ಕಟ್ಟಿಕೊಂಡು ಚಿತ್ರರಂಗಕ್ಕೆ ಬರುವವರಿಗೆ ಪೂರ್ವ ತಯಾರಿ ತುಂಬಾ ಅಗತ್ಯ. ನಟನೆ, ನಿರ್ದೇಶನ, ಛಾಯಾಗ್ರಹಣ, ಸಂಕಲನ, ನೃತ್ಯ ಸೇರಿದಂತೆ ಎಲ್ಲದರ ಬಗ್ಗೆಯೂ ತಿಳುವಳಿಕೆ ಇರಬೇಕು. ಮುಖ್ಯವಾಗಿ ಒಂದು ಕತೆಯನ್ನು ಸಿನಿಮಾ ಮಾಡುವ ನಿಟ್ಟಿನಲ್ಲಿ ನಡೆಯುವ ಕೆಲಸಗಳ ಬಗ್ಗೆ ಅರಿವು ಇರಬೇಕು. ಆ ನಿಟ್ಟಿನಲ್ಲಿ ಜೀ ಅಕಾಡೆಮಿ ಹುಟ್ಟಿಕೊಂಡಿದ್ದು, ಇಲ್ಲಿ ತರಬೇತಿಗೊಳ್ಳುವವರು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿ’ ಎಂದರು ನಟ ಶ್ರೀಮುರಳಿ.

'ನನ್ನ ಕಂಡರೆ ನಿಮಗೆ ಏನನಿಸುತ್ತೆ?BB ಮನೆಯಲ್ಲಿ ಶುರುವಾಯ್ತು ಲವ್ ಸ್ಟೋರಿ!

‘ನನ್ನ ಈ ಸಿನಿಮಾ ಪಯಣದಲ್ಲಿ ಚಿತ್ರರಂಗದ ಎಲ್ಲ ವಿಭಾಗಗಳಲ್ಲೂ ತರಬೇತಿ ನೀಡುವ ಸಂಸ್ಥೆ ಅಗತ್ಯ ಅನಿಸಿ ನನ್ನ ಪತ್ನಿ ಶಿಲ್ಪಾ ದೇಶಪಾಂಡೆ ಜತೆ ಸೇರಿ ಜೀ ಅಕಾಡೆಮಿ ಆರಂಭಿಸಿದ್ದೇನೆ. ಇದು ನನ್ನ ಬಹು ದಿನಗಳ ಕನಸು... ಹೀಗೆ ತಮ್ಮ ಸಿನಿಮಾ ಪಯಣದ ಜತೆಗೆ ಜೀ ಆಕಾಡೆಮಿಯನ್ನು ಆರಂಭಿಸಿದ ಹಿನ್ನೆಲೆ ಹೇಳಿಕೊಂಡರು ಗುರು ದೇಶಪಾಂಡೆ ಅವರು. ಹಿರಿಯ ನಿರ್ದೇಶಕ ಸುನಿಲ್‌ಕುಮಾರ್ ದೇಸಾಯಿ, ಸಂಕಲನಕಾರ ಸುರೇಶ್ ಅರಸ್, ಪತ್ರಕರ್ತ ಜಯಪ್ರಕಾಶ್ ಶೆಟ್ಟಿ , ಮೌನೇಶ್ ಬಡಿಗೇರ್, ಜಟ್ಟ ಗಿರಿರಾಜ್, ದಯಾಳ್ ಮುಂತಾದವರು ಜೀ ಅಕಾಡೆಮಿಯಲ್ಲಿ ತರಬೇತಿ ನೀಡಲಿದ್ದಾರೆ.

'ನನ್ನ ಕಂಡರೆ ನಿಮಗೆ ಏನನಿಸುತ್ತೆ?BB ಮನೆಯಲ್ಲಿ ಶುರುವಾಯ್ತು ಲವ್ ಸ್ಟೋರಿ!

ಈಗಾಗಲೇ ನಟನೆಗೆ 25, ನಿರ್ದೇಶನಕ್ಕೆ 15, ಸಂಕಲನಕ್ಕೆ 5 ಮಂದಿ ತಮ್ಮ ಹೆಸರುಗಳನ್ನು ನೋಂದಾಯಿಸಿಕಂಡಿದ್ದಾರೆ. ಮೊನ್ನೆ ನಡೆದ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಮುಖರಾದ ನಾಗೇಂದ್ರ ಪ್ರಸಾದ್, ಉಮೇಶ್ ಬಣಕಾರ್, ರಾಜಕಾರಣಿ ಶಿವರಾಮೇಗೌಡ, ಎಮಿಲ್, ರಮೇಶ್ ರೆಡ್ಡಿ ಸೇರಿದಂತೆ ಹಲವರು ಆಗಮಿಸಿ ಜೀ ಆಕಾಡೆಮಿಗೆ ಶುಭ ಹಾರೈಸಿದರು. ಸದ್ಯದಲ್ಲೇ ತರಗತಿಗಳು ಆರಂಭವಾಗಲಿದ್ದು, ಆಸಕ್ತರು ಮೊ.ಸಂ. 9900777222, 9900195195 ಇಲ್ಲಿಗೆ ಸಂಪರ್ಕಿಸಬಹುದು. 

Follow Us:
Download App:
  • android
  • ios