Asianet Suvarna News Asianet Suvarna News

ತುಮಕೂರು: ಹೆಲ್ಮೆಟ್ ಜಾಗೃತಿಗಾಗಿ ಪೊಲೀಸರ ಬೈಕ್ ರ‍್ಯಾಲಿ

ದ್ವಿಚಕ್ರ ವಾಹನಗಳ ಅಪಘಾತಗಳಿಂದ ಮೃತಪಟ್ಟವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊರಟಗೆರೆ ಪೊಲೀಸ್‌ ಇಲಾಖೆ ಸಹಯೋಗದಲ್ಲಿ ಹೆಲ್ಮೆಟ್ ಧರಿಸಿ ಪಟ್ಟಣದಲ್ಲಿ ಬೈಕ್‌ ರ‍್ಯಾಲಿ ಮೂಲಕ ಅರಿವು ಮೂಡಿಸಲಾಯಿತು.

police bike rally to create awareness among riders
Author
Bangalore, First Published Oct 22, 2019, 7:47 AM IST

ತುಮಕೂರು(ಅ.22): ಇತ್ತೀಚೆಗೆ ದ್ವಿಚಕ್ರ ವಾಹನಗಳಲ್ಲಿ ಅಪಘಾತಗಳಿಂದ ಮೃತಪಟ್ಟವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊರಟಗೆರೆ ಪೊಲೀಸ್‌ ಇಲಾಖೆ ಸಹಯೋಗದಲ್ಲಿ ಹೆಲ್ಮೇಟ್‌ ಧರಿಸಿ ಪಟ್ಟಣದಲ್ಲಿ ಬೈಕ್‌ ರ‍್ಯಾಲಿ ಮೂಲಕ ಅರಿವು ಮೂಡಿಸಲಾಗಿದೆ.

ತುಮಕೂರು ಪೊಲೀಸ್‌ ವರಿಷ್ಠಾಧಿಕಾರಿ ಡಾ.ವಂಶಿಕೃಷ್ಣ ಮಾರ್ಗದರ್ಶನದಲ್ಲಿ ಮಧುಗಿರಿ ಡಿವೈಎಸ್‌ಪಿ ಧರಣೇಶ್‌ ನೇತೃತ್ವದಲ್ಲಿ ತಾಲೂಕಿನ ವೃತ್ತ ನಿರೀಕ್ಷಕ ನದಾಫ್‌, ಕೊರಟಗೆರೆ ಪೊಲೀಸ್‌ ಠಾಣೆಯ ಉಪ ಆರಕ್ಷಕ ನಿರೀಕ್ಷಕ ಮಂಜುನಾಥ್‌, ಕೋಳಾಲ ಉಪ ಆರಕ್ಷಕ ನಿರೀಕ್ಷಕ ನವೀನ್‌ಕುಮಾರ್‌ ಅವರೊಂದಿಗೆ ಠಾಣೆಯ ಎಲ್ಲಾ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಫ್ರೆಂಡ್ಸ್‌ ಗ್ರೂಪ್‌ ಸೇವಾ ಸಮಿತಿ ಸಹಯೋಗದೊಂದಿಗೆ ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಧರಿಸಿ ಜಾಗೃತಿ ಹಮ್ಮಿಕೊಳ್ಳಲಾಗಿತ್ತು.

ಮಹಿಳೆಯರ ಜತೆ ಅನುಚಿತ ವರ್ತನೆ ಮಾಡ್ತಿದ್ದ ವ್ಯಕ್ತಿಗೆ ಪೇದೆಯ ಬಾಕ್ಸಿಂಗ್ ಪಂಚ್! ವಿಡಿಯೋ

ಬೈಕ್‌ ರ‍್ಯಾಲಿ ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಿಂದ, ಪ್ರವಾಸಿ ಮಂದಿರದವರೆಗೆ ಮತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರಿಗೆ ಹೆಲ್ಮೆಟ್ ಕಡ್ಡಾಯದ ಅರಿವು ಮೂಡಿಸುವ ಜಾಥಾ ಮಾಡಿದ್ದಾರೆ.

ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ನದಾಫ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನಗಳ ಅಪಘಾತ ಹೆಚ್ಚುತ್ತಿದ್ದು, ಸಾಯುತ್ತಿರುವ ಬಹುತೇಕರು ತಲೆಯ ಪೆಟ್ಟಿನಿಂದ ಮರಣ ಹೊಂದುತ್ತಿದ್ದು, ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕೇವಲ ಕಾನೂನಲ್ಲ, ಅದು ಜೀವ ಉಳಿಸುವ ಕವಚವಾಗಿದೆ. ಆದರೆ ಸಾರ್ವಜನಿಕರು ಹೆಲ್ಮೇಟ್‌ಅನ್ನು ಪೊಲೀಸರ ಒತ್ತಾಯಕ್ಕಾಗಿ ಹಾಕುವ ಮನಸ್ಥಿತಿ ಹೊಂದಿದ್ದು ಈ ಅಪಘಾತಗಳಿಂದ ಸವಾರರು ಹೆಲ್ಮೇಟ್‌ ಹಾಕದೇ ಜೀವ ಕಳೆದುಕೊಳ್ಳುವುದರೊಂದಿಗೆ ಅವರ ಕುಟುಂಬವು ಸಹ ಬೀದಿಗೆ ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದಯಮಾಡಿ ಹೆಲ್ಮೆಟ್ ಹಾಕಿ:

ಇದರಿಂದ ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರ ಮತ್ತು ಹಿಂಬಂದಿಯ ಸವಾರರಿಗೆ ಹೆಲ್ಮೇಟ್‌ ಕಡ್ಡಾಯವಾಗಿದ್ದು, ಕೊರಟಗೆರೆ ತಾಲೂಕಿನ ಪ್ರತಿಯೊಬ್ಬ ದ್ವಿಚಕ್ರ ಸವಾರನು ಸಹ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಬೇಕು. ತಪಿದಲ್ಲಿ ಕಾನೂನು ರೀತಿಯಂತೆ ದಂಡ ತೆರಲು ಸಿದ್ದರಿರಬೇಕಿದ್ದು, ದಯಮಾಡಿ ಸಾರ್ವಜನಿಕರು ಇದಕ್ಕೆ ಆಸ್ಪದ ನೀಡದೇ ಹೆಲ್ಮೆಟ್ ಧರಿಸಿ ತಮ್ಮ ಅಮೂಲ್ಯವಾದ ಜೀವವನ್ನು ಉಳಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಬಾಗಲಕೋಟೆ: ಕಾಲ ಬೆರಳೇ ಕಟ್.. ಮನೆ ಮುಂದೆ ಬೆಂಕಿ ಉಗುಳುವ ಟ್ರಾನ್ಸ್ ಫಾರ್ಮರ್

Follow Us:
Download App:
  • android
  • ios