Asianet Suvarna News Asianet Suvarna News

ತುಮಕೂರು: ಎಸಿಬಿಗೆ ಸಲ್ಲಿಕೆಯಾಗಿದ್ದು ಕೇವಲ ಒಂದೇ ದೂರು..!

ಒಂದೆಡೆ ಭ್ರಷ್ಟ ಅಧಿಕಾರಿಗಳು ಎಂದು ಜನ ಆರೋಪಿಸುತ್ತಿದ್ದರೆ, ಮತ್ತೊಂದೆಡೆ ದೂರು ದಾಖಲಿಸೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಎಸಿಬಿ ವಿಚಾರಣೆಯಲ್ಲಿ ದಾಖಲಾಗಿದ್ದು ಒಂದೇ ಒಂದು ದೂರು. ಭ್ರಷ್ಟಾಚಾರ ಎಂದು ಆರೋಪಿಸುವ ಜನರೇ ದೂರು ನೀಡಲು ಮುಂದೆ ಬರುತ್ತಿಲ್ಲ ಎಂಬುದಕ್ಕೆ ತಾಜಾ ಉದಾಹರಣೆ ಎಂಬಂತಹ ಘಟನೆ ತುಮಕೂರಲ್ಲಿ ನಡೆದಿದೆ.

only one complaint registered in acb meeting
Author
Bangalore, First Published Oct 25, 2019, 10:32 AM IST

ತುಮಕೂರು(ಅ.25): ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ ರಮೇಶ್‌ ಅವರು  ಚಿಕ್ಕನಾಯಕನಹಳ್ಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದ್ದಾರೆ.

ಈ ಸಂದರ್ಭದಲ್ಲಿ ಹೊಯ್ಸಲಕಟ್ಟೆಯ ಗಿರೀಶ್‌ ಎಂಬುವವರು ಹುಳಿಯಾರಿನ ರಾಯಗಾಲುವೆ ಬಳಿ ಈ ಹಿಂದೆ 2009ರಲ್ಲಿ 34*71 ಅಳತೆಯ ನಿವೇಶನವನ್ನು ಕೊಂಡಿದ್ದರು.

ಸುರಕ್ಷಿತ ಜಾಗದಲ್ಲಿ ಶಾಶ್ವತ ಮನೆಗಳ ನಿರ್ಮಾಣ: ಸಚಿವ ಸೋಮಣ್ಣ

ಕ್ರಯಪತ್ರದ ಪ್ರಕಾರ ಅವರಿಗೆ ಆಳತೆಯನ್ನು ಸಹ ಮಾಡಿಕೊಡಲಾಗಿತ್ತು. ಆದರೆ ಇತ್ತೀಚೆಗೆ ಅಲ್ಲಿನ ಪಂಚಾಯ್ತಿಯವರು ಸದರಿ ನಿವೇಶನದ ಅಳತೆಯನ್ನು ವ್ಯತ್ಯಾಸ ಮಾಡಿ 71 ಅಡಿ ಉದ್ದದಲ್ಲಿ ಬೇರೆಯವರಿಗೆ ಕೆಲವು ಅಡಿಗಳನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆಂದು ದೂರು ಸಲ್ಲಿಸಿದ್ದರು.

ದಾಖಲೆಗಳನ್ನು ಪರಿಶೀಲಿಸಿದ ಎಸಿಬಿ ನಿರೀಕ್ಷಕ ರಮೇಶ್‌ ಸ್ಥಳೀಯ ಪಂಚಾಯ್ತಿಯ ಅಧಿಕಾರಿ ಮಂಜುನಾಥ್‌ಗೆ ಸ್ಪಷ್ಟೀಕರಣ ಕೇಳಿದಾಗ, ಅವರು ಪ್ರಸಕ್ತ ಸಂದರ್ಭದಲ್ಲಿ ಎರಡು ಖಾತೆಯನ್ನು ವಜಾ ಮಾಡಬೇಕಾಗುತ್ತದೆ. ಕ್ರಯದಾರ ಗಿರೀಶ್‌ ಅವರು ಸಹ ತಮ್ಮ ನಿವೇಶನದ ಟೌನ್‌ ಪ್ಲಾನಿಂಗ್‌ ಮಾಡಿಸಿಲ್ಲವಾದ್ದರಿಂದ ಅವರು ಸಹ ಮಾಡಿಕೊಂಡಿರುವ ಖಾತೆ ಊರ್ಜಿವಾಗುವುದಿಲ್ಲ. ಆದ್ದರಿಂದ ಎರಡೂ ಖಾತೆಗಳನ್ನು ವಜಾ ಮಾಡಿ, ಉಭಯ ಕಡೆ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ಉತ್ತರಿಸಿದ್ದಾರೆ.

ತುಮಕೂರು: 4 ಟ್ರ್ಯಾಕ್ಟರ್‌ ಅಕ್ರಮ ಮರಳು ವಶ

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಆರ್‌.ಹನುಮಂತರಾಜು, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಸಿ.ಎಸ್‌.ಚಂದ್ರಶೇಖರ್‌, ಕ್ಷೇತ್ರಶಿಕ್ಷಣಾಧಿಕಾರಿ ಕಾತ್ಯಾಯಿನಿ, ಸಾಮಾಜಿಕ ಅರಣ್ಯಾಧಿಕಾರಿ ಸುಜಾತ, ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ, ಕೆಪಿಟಿಸಿಎಲ್‌ ಅಭಿಯಂತರ ಗವಿರಂಗಯ್ಯ ಇದ್ದರು. ಇಂದಿನ ಎಸಿಬಿ ವಿಚಾರಣೆಯಲ್ಲಿ ದಾಖಲಾಗಿದ್ದು ಮಾತ್ರ ಒಂದೇ ಒಂದು ದೂರು.

Follow Us:
Download App:
  • android
  • ios