Asianet Suvarna News Asianet Suvarna News

'IT ದಾಳಿಗೂ BJPಗೂ ಸಂಬಂಧವಿಲ್ಲ, ಸಿದ್ದು ಹೇಳಿಕೆ ಸತ್ಯಕ್ಕೆ ದೂರ'..!

ಮಾಜಿ ಡಿಸಿಎಂ ಜಿ. ಪರಮೇಶ್ವರ್ ಅವರ ಒಡೆತನದ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿರುವ ಬೆನ್ನಲ್ಲೇ ಐಟಿ ದಾಳಿಗೂ, ಬಜೆಪಿಗೂ ಸಂಬಂಧ ಇಲ್ಲ ಎಂದು ಸಂಸದ ಜಿ.ಎಸ್‌.ಬಸವರಾಜು ಸ್ಪಷ್ಪಪಡಿಸಿದ್ದಾರೆ. ಕಾಂಗ್ರೆಸ್‌ ಮುಖಂಡರನ್ನು ಗುರಿಯಾಗಿಸಿಕೊಂಡಿದ್ದಾರೆ ಎನ್ನುವ ಸಿದ್ದರಾಮಯ್ಯನವರ ಆರೋಪ ಸತ್ಯಕ್ಕೆ ದೂರ ಎಂದು ಹೇಳಿದ್ದಾರೆ.

no connection between it raid bjp
Author
Bangalore, First Published Oct 13, 2019, 8:14 AM IST

ತುಮಕೂರು(ಅ.13): ರಾಜ್ಯದ ಹಲವು ಕಡೆಗಳಲ್ಲಿ ನಡೆಯುತ್ತಿರುವ ಐಟಿ ದಾಳಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ವೈಯಕ್ತಿಕ ದ್ವೇಷದ ಮಾತು ಇಲ್ಲಿ ಬರುವಂತಿಲ್ಲ ಎಂದು ಸಂಸದ ಜಿ.ಎಸ್‌.ಬಸವರಾಜು ಸ್ಪಷ್ಪಪಡಿಸಿದ್ದಾರೆ.

ಕಾಂಗ್ರೆಸ್‌ ಮುಖಂಡರನ್ನು ಗುರಿಯಾಗಿಸಿಕೊಂಡಿದ್ದಾರೆ ಎನ್ನುವ ಸಿದ್ದರಾಮಯ್ಯನವರ ಆರೋಪ ಸತ್ಯಕ್ಕೆ ದೂರವಾದದು ಎಂದು ಸಂಸದ ಜಿ.ಎಸ್‌.ಬಸವರಾಜು ಸ್ಪಷ್ಪಪಡಿಸಿದ್ದಾರೆ.

ಐಟಿ ದಾಳಿ: ಮಾಜಿ ಡಿಸಿಎಂ ಕಾಲೇಜಿನಲ್ಲಿ ಹುಂಡಿ ಹಣ..!

ಗುಬ್ಬಿಪಟ್ಟಣದ ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ದೇವಾಲಯ ಜೀರ್ಣೊದ್ಧಾರ ಸಮಿತಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಆದಾಯ ತೆರಿಗೆ ಇಲಾಖೆ ಅದರ ಕರ್ತವ್ಯವನ್ನು ಕಾನೂನು ರೀತಿ ಮಾಡುತ್ತಿದೆ ಎಂದಿದ್ದಾರೆ.

ಪರಮೇಶ್ವರ್ ಒಡೆತನದ ಕಾಲೇಜು ಒಮ್ಮೆಯೂ ತೆರಿಗೆ ಕಟ್ಟಿಲ್ಲ..! ಕೋಟಿ ಕೋಟಿ ವಂಚನೆ

ಮೆಡಿಕಲ್‌ ಸೀಟ್‌ ಮಾರಾಟ ದಂಧೆ ನಡೆದಿರುವ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆಯುತ್ತಿದೆ. ಪರಮೇಶ್ವರ್‌ ಅವರು ನನಗೆ ಒಳ್ಳೆಯ ಸ್ನೇಹಿತ. ಅವರ ವ್ಯವಹಾರದ ಬಗ್ಗೆ ತಿಳಿದಿರಲಿಲ್ಲ. ಸೇವಾ ಕಾರ್ಯ ನಡೆಸಬೇಕಾದ ಶಿಕ್ಷಣರಂಗ ಸಂಪೂರ್ಣ ಕರ್ಮಷಿಯಲ್‌ ಆಗಿ ಕಲುಷಿತಗೊಂಡಿರುವುದು ವಿಷಾದಕರ ಸಂಗತಿ. ಪರಮೇಶ್ವರ್‌ ಆಪ್ತ ಸಹಾಯಕನ ಆತ್ಮಹತ್ಯೆ ನೋವಿನ ಘಟನೆ. ಇದರ ಹಿನ್ನೆಲೆ ತಿಳಿಯಲು ಪೊಲೀಸ್‌ ಇಲಾಖೆ ತನಿಖೆ ನಡೆಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಡಿಸೆಂಬರ್‌ ತಿಂಗಳಲ್ಲಿ ಜಿಲ್ಲೆಗೆ ಹೇಮೆ:

ಹೇಮಾವತಿ ಡಿಸೆಂಬರ್‌ ಮಾಹೆವರೆಗೆ ಜಿಲ್ಲೆಗೆ ಹರಿಯಲಿದೆ. ಗುಬ್ಬಿ ತಾಲೂಕಿನ ಎಲ್ಲಾ ಕೆರೆಗಳಿಗೂ ನೀರು ಹರಿಸಲು ಬದ್ಧನಾಗಿದ್ದೇನೆ. ಕುಡಿಯುವ ನೀರು ಒದಗಿಸುವ ಕೆಲ ಯೋಜನೆಗೆ ಕಾಯಕಲ್ಪ ನೀಡಲಾಗಿದೆ. ಈ ಜತೆಗೆ ಹೊಸ ಯೋಜನೆಗಳಿಗೂ ರೂಪುರೇಷ ಸಿದ್ಧಗೊಳಿಸಲಾಗಿದೆ. ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಗಿದೆ. ಸ್ಥಳಕ್ಕೆ ರೈಲ್ವೆ ಸಚಿವರೇ ಆಗಮಿಸಿ ಅಸ್ತು ನೀಡಲಿದ್ದಾರೆ ಎಂದು ಹೇಳಿದರು.

ತುಮಕೂರು: ಮಾಜಿ ಡಿಸಿಎಂ ಪರಮೇಶ್ವರ್ ಸಹೋದರನ ಪುತ್ರನಿಗೆ ಸಮನ್ಸ್‌..!

ಗುಬ್ಬಿ ಪಟ್ಟಣ ಪಂಚಾಯಿತಿಯ .10 ಕೋಟಿ ಹಣ ಒಂದು ವರ್ಷದಿಂದ ಬಳಕೆಯಾಗದ ಹಿನ್ನೆಲೆಯಲ್ಲಿ ಅನುದಾನ ಮರಳಿ ಸರ್ಕಾರ ಪಡೆದುಕೊಂಡಿದೆ. ಇಲ್ಲಿಯೇ ತಿಳಿಯುತ್ತದೆ ಪಪಂ ಅಭಿವೃದ್ಧಿ ಹೇಗೆ ಸಾಗಿದೆ ಎಂದು ವ್ಯಂಗ್ಯವಾಡಿದರು.

ಸಂಸದರಿಗೆ ಸನ್ಮಾನ:

ಇದೇ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ವತಿಯಿಂದ ಸಂಸದ ಜಿ.ಎಸ್‌.ಬಸವರಾಜು ಅವರಿಗೆ ರಜತ ಶಿವಲಿಂಗ ವಿಗ್ರಹ ನೀಡಿ ಪಟ್ಟಣದ ವಿವಿಧ ಸಂಘ ಸಂಸ್ಥೆಗಳು, ವಿವಿಧ ಕೋಮಿನ ಮುಖಂಡರು ಸಂಸದರಿಗೆ ಸನ್ಮಾನಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌.ಜೈರಾಜ್‌, ಜಿಪಂ ಸದಸ್ಯರಾದ ಡಾ.ನವ್ಯಾಬಾಬು, ಜಿ.ಎಚ್‌.ಜಗನ್ನಾಥ್‌, ವರ್ತಕ ಪರಮಶಿವಯ್ಯ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಕೆ.ವಿ.ಪರಮೇಶ್ವರಯ್ಯ, ಖಜಾಂಚಿ ಸಿ.ಎಂ.ಶರಶ್ಚಂದ್ರಬೋಸ್‌, ಸಹ ಕಾರ್ಯದರ್ಶಿ ಆರ್‌.ಪ್ರಸನ್ನಕುಮಾರ್‌, ದಾಸೋಹ ಸಮಿತಿ ಅಧ್ಯಕ್ಷ ನಂಜುಂಡಪ್ಪ, ಮುಖಂಡರಾದ ಜಿ.ಎನ್‌.ಬೆಟ್ಟಸ್ವಾಮಿ, ಎಸ್‌.ಡಿ.ದಿಲೀಪ್‌ಕುಮಾರ್‌, ಪಪಂ ಸದಸ್ಯರಾದ ಜಿ.ಆರ್‌.ಶಿವಕುಮಾರ್‌, ಜಿ.ಸಿ.ಕೃಷ್ಣಮೂರ್ತಿ, ಜಿ.ಎನ್‌.ಅಣ್ಣಪ್ಪಸ್ವಾಮಿ ಇದ್ದರು.

ಮಾದರಿ ಪ್ರವಾಸಿ ತಾಣ ಮಾಡಲು ಬದ್ಧ

ಧಾರ್ಮಿಕ ಕಾರ್ಯಗಳ ಬಗ್ಗೆ ಆಸಕ್ತಿ ಇರುವ ಹಿನ್ನೆಲೆಯಲ್ಲೇ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯ ನಡೆಸಲಾಯಿತು. ಈಗ ಭವ್ಯ ದೇವಾಲಯ ಪ್ರವಾಸಿಗರನ್ನು ಆಕರ್ಷಿಸಿದೆ. ಪ್ರವಾಸೋದ್ಯಮ ಇಲಾಖೆ ಮೂಲಕ ಹಲವು ಅಭಿವೃದ್ಧಿ ಕೆಲಸ ನಡೆಸಲಾಗುವುದು ಎಂದಿದ್ದಾರೆ.

ಪರಮೇಶ್ವರ್ ಖಜಾನೆ ಜಾಲಾಡಿದ IT: 100 ಕೋಟಿ ಅಘೋಷಿತ ಆಸ್ತಿ ಪತ್ತೆ

ಯಾತ್ರಿ ನಿವಾಸ ಕಟ್ಟಡ ನಿರ್ಮಾಣ ನೆನಗುದಿಗೆ ಬಿದ್ದ ಬಗ್ಗೆ ಸಾಕಷ್ಟುದೂರುಗಳಿವೆ. ಇದಕ್ಕೆ ಸಂಬಂಧಿಸಿದ .46 ಲಕ್ಷದೊಂದಿಗೆ ಸರ್ಕಾರದಿಂದ .70 ಲಕ್ಷ ಬಿಡುಗಡೆಗೊಳಿಸಿ ಸುಂದರ ಯಾತ್ರಿ ನಿವಾಸ ಇಲ್ಲಿ ನಿರ್ಮಿಸಲಾಗುವುದು. ಯಡಿಯೂರು ಮಾದರಿ ಪುಣ್ಯಕ್ಷೇತ್ರವಾಗಿ ಗುಬ್ಬಿಯನ್ನು ದೇಶದೆಲ್ಲೆಡೆ ಖ್ಯಾತಿಗೊಳಿಸಲು ಮಹಾದ್ವಾರ ಕಾರ್ಯವನ್ನು ಶೀಘ್ರದಲ್ಲಿ ಆರಂಭಿಸಲಾಗುವುದು. 108 ಅಡಿಗಳ ಉದ್ದದ ಮಹಾಗೋಪುರ ಜತೆಗೆ ರಜತರಥ ನಿರ್ಮಾಣ ಮಾಡಲಾಗುವುದು ಎಂದು ಜಿಎಸ್‌ಬಿ ತಿಳಿಸಿದ್ದಾರೆ.

Follow Us:
Download App:
  • android
  • ios