Asianet Suvarna News Asianet Suvarna News

ಅಬ್ಬಬ್ಬಾ... ಮೊಬೈಲ್ ಪ್ರಿಯರ ನಿದ್ದೆಗೆಡಿಸಿರುವ Xiaomi Redmi Note 7!

ಚೀನಾದ ಜನಪ್ರಿಯ ಮೊಬೈಲ್ ಕಂಪನಿ Xiaomi ಅಗ್ಗದ ಹಾಗೂ ಗುಣಮಟ್ಟದ ಫೋನ್‌ಗಳಿಗೆ ಹೆಸರುವಾಸಿ. Xiaomi ಬಿಡುಗಡೆ ಮಾಡಲಿರುವ ಫೋನ್‌ಗಳನ್ನು ಬಳಕೆದಾರರು ಕಾತರದಿಂದ ನಿರೀಕ್ಷಿಸುತ್ತಾರೆ. ಇದೀಗ Xiaomi ಕಂಪನಿಯ Redmi Note 7 ಮೊಬೈಲ್ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. 
 

Xiaomi Redmi Note 7 with 48MP Camera Launched
Author
Bengaluru, First Published Jan 18, 2019, 5:24 PM IST

ಕೈಗೆಟಕುವ ಸ್ಮಾರ್ಟ್‌ಫೋನ್‌ಗಳಿಗೆ ಮನೆಮಾತಾಗಿರುವ Xiaomi  ಕಳೆದ ವಾರ ಚೀನಾದಲ್ಲಿ Redmi Note 7 ಫೋನನ್ನು ಮಾರುಕಟ್ಟೆಗೆ ಬಿಡುಗಡೆಮಾಡಿದೆ. 

ಸಹಜವಾಗಿ, ಹೊಸ ಮಾದರಿ ಫೋನ್‌ನಲ್ಲಿ ನವನವೀನ ಫೀಚರ್‌ಗಳನ್ನು ಒದಗಿಸುವ Xiaomi, Redmi Note 7 ನಲ್ಲೂ ಅತ್ಯಾಧುನಿಕ ಫೀಚರ್‌ಗಳನ್ನು ನೀಡಿದೆ.

48 ಮೆಗಾಪಿಕ್ಸೆಲ್ ಕ್ಯಾಮೆರಾ Redmi Note 7ನ ಪ್ರಮುಖ ಆಕರ್ಷಣೆ.  ಹಿಂಬದಿ ಇನ್ನೊಂದು ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಇದ್ದು, ಮುಂದಿನ ಕ್ಯಾಮೆರ 13 ಮೆಗಾಪಿಕ್ಸೆಲ್ ಸಾಮರ್ಥ್ಯದ್ದಾಗಿದೆ.

ಇನ್ಯಾಕೆ ಚಿಂತೆ? ವಾಟ್ಸಪ್‌ನಿಂದ ಹೊಸ ವರ್ಷಕ್ಕೆ ಬರ್ತಿದೆ ಹೊಸ ಫೀಚರ್!

6.3 ಇಂಚು ಪರದೆ, 19.5:9 ಆ್ಯಸ್ಪೆಕ್ಟ್ ರೇಶ್ಯೋ,  ಕ್ವಾಲ್‌ಕಾಮ್ ಸ್ನ್ಯಾಪ್ ಡ್ರಾಗನ್ 660 ಪ್ರೊಸೆಸರ್, 3GB, 4GB, 6GB RAM ಹೊಂದಿದೆ.  32GB ಹಾಗೂ 64GB ಸ್ಟೋರೆಜ್ ಸಾಮರ್ಥ್ಯವಿರುವ Redmi Note 7ನ್ನು 256GB ವರೆಗೆ ವಿಸ್ತರಿಸಬಹುದು.

Redmi Note 7 ನ ಬಿಡಿಭಾಗಗಳು ಹೇಗಿವೆ? ಫೀಚರ್ಸ್‌ಗಳೇನು? ಎಂಬಿತ್ಯಾದಿ ಮಾಹಿತಿಯನ್ನು ಈ ವಿಡಿಯೋದಲ್ಲಿ ವಿವರಿಸಲಾಗಿದೆ.

ಚೀನಾದಲ್ಲಿ Redmi Note 7 ಬೆಲೆ 999 ಯಾನ್, ಅಂದರೆ ಭಾರತದ ಸರಿಸುಮಾರು 10,500 ರೂ. ಆಗಿದ್ದು ಮೊಬೈಲ್ ಪ್ರಿಯರಲ್ಲಿ ಸಂಚಲನ ಮೂಡಿಸಿದೆ.

 

ಆದರೆ Redmi Note 7 ಭಾರತದ ಮಾರುಕಟ್ಟೆಗೆ ಯಾವಾಗ ಕಾಲಿಡಲಿದೆ? ಈ ಬಗ್ಗೆ ಕಂಪನಿಯು ಯಾವುದೇ ಸುಳಿವನ್ನು ಬಿಟ್ಟು ಕೊಟ್ಟಿಲ್ಲ.

ALERT: ಪ್ಲೇಸ್ಟೋರ್‌ನಿಂದ ಮತ್ತೆ 85 ಆ್ಯಪ್‌ ಡಿಲೀಟ್! ಫೋನ್ ಎತ್ತಿ ಚೆಕ್ ಮಾಡಿ....

Follow Us:
Download App:
  • android
  • ios