Asianet Suvarna News Asianet Suvarna News

ವಿಶ್ವದ ಮೊತ್ತ ಮೊದಲ ಹಾರುವ ಕಾರು ಮಾರಾಟ ಆರಂಭ-ಬೆಲೆ ಎಷ್ಟು?

ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಇದೀಗ ಹಾರುವ ಕಾರು ಮಾರುಕಟ್ಟೆ ಪ್ರವೇಶಿಸುತ್ತಿದೆ. ರೋಡಿನಲ್ಲೂ ಪ್ರಯಾಣಿಸಬಹುದು, ಆಕಾಶದಲ್ಲೂ ಹಾರಾಡಬಹುದು. ಇದು ಈ ಕಾರಿನ ವಿಶೇಷತೆ. ಹಾಗಾದರೆ ಈ ಕಾರಿನ ಬೆಲೆ ಎಷ್ಟು? ಇಲ್ಲಿದೆ.
 

Worlds first flying car to go on sale next month
Author
Bengaluru, First Published Sep 30, 2018, 6:39 PM IST

ನ್ಯೂಯಾರ್ಕ್(ಸೆ.30): ವಿಶ್ವದ ಬೆಳವಣಿಗೆ ಹಾಗೂ ಅಭಿವೃದ್ಧಿ ನಿರೀಕ್ಷೆಗೂ ಮೀರಿದೆ. ಬೆಳೆಯುತ್ತಿರುವ ಜನಸಂಖ್ಯೆ ಹಾಗೂ ನಗರೀಕರಣದಿಂದ, ವಾಹನ ದಟ್ಟಣೆ ಸಮಸ್ಯೆಗಳು ಜನರನ್ನ ಕಾಡುತ್ತಿದೆ. ಇದಕ್ಕೆ ಪರಿಹಾರವಾಗಿ ಹುಟ್ಟಿಕೊಂಡ ಹಾರುವ ಕಾರು ಇದೀಗ ಅಂತಿಮ ಸ್ವರೂಪ ಪಡೆದುಕೊಂಡಿದೆ.

 

 

2006ರಲ್ಲಿ ಆರಂಭವಾದ ಟೆರಾಫುಗಿಯೋ ಟ್ರಾನ್ಸಿಶನ್ ಸಂಸ್ಥೆ ಹಾರುವ ಕಾರು ತಯಾರಿಕೆಗೆ ಮುಂದಾಯಿತು. ನಿರಂತರ ಪ್ರಯತ್ನ ಹಾಗೂ ಪರೀಕ್ಷೆಗಳ ಬಳಿಕ ಇದೀಗ ಟೆರಾಫುಗಿಯೋ ಕಂಪನಿ ಹಾರುವ ಕಾರನ್ನ ತಯಾರಿಸಿ ಬಿಡುಗಡೆ ಸಜ್ಜಾಗಿದೆ.

Worlds first flying car to go on sale next month

ಮುಂದಿನ ತಿಂಗಳು ಹಾರುವ ಕಾರು ಮಾರುಕಟ್ಟೆ ಪ್ರವೇಶಿಲಿದೆ. ಈ ಕಾರು ರಸ್ತೆಯಲ್ಲೂ ಪ್ರಯಾಣಿಸುತ್ತೆ, ಆಕಾಶದಲ್ಲೂ ಹಾರಾಟ ನಡೆಸುತ್ತೆ. ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಇದೀಗ ಹಾರುವ ಕಾರು ಬಿಡುಗಡೆಯಾಗಲಿದೆ. 

Worlds first flying car to go on sale next month

ಆರಂಭದಲ್ಲಿ ಕಂಪೆನಿ ಹಾರುವ ಕಾರಿಗೆ 2.02 ಕೋಟಿ ರೂಪಾಯಿ ಅಂದಾಜಿಸಲಾಗಿತ್ತು. ಆದರೆ ಇದೀಗ ಇದರ ಬೆಲೆ 2.18 ಕೋಟಿ ರೂಪಾಯಿ(ಯು.ಕೆ ಮಾರುಕಟ್ಟೆ ಬೆಲೆ). ದುಬಾರಿ ಹಾಗೂ ಲಕ್ಸುರಿ ಕಾರಿನ ಮೊರೆ ಹೋಗುವ ಗ್ರಾಹಕರು ಇದೀಗ ಹಾರುವ ಕಾರು ಕೊಳ್ಳಬಹುದು.

Worlds first flying car to go on sale next month

Worlds first flying car to go on sale next month

Follow Us:
Download App:
  • android
  • ios