Asianet Suvarna News Asianet Suvarna News

ALERT ಜ.01ರಿಂದ ಈ ಫೋನ್‌ಗಳಲ್ಲಿ ವಾಟ್ಸಪ್ ಇಲ್ಲ!

ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ಹಳೆಯ ಉಪಕರಣಗಳಿಗೆ ಸಾಫ್ಟ್‌ವೇರ್ ಸಪೋರ್ಟ್ ನೀಡುವುದು ಕಷ್ಟಸಾಧ್ಯ. WhatsAppನಂತಹ ಕಂಪನಿಗಳು ಮುಂಬರುವ ವರ್ಷ ಹಾಗೂ ಹೊಸ ತಂತ್ರಜ್ಞಾನಗಳತ್ತ ಹೆಚ್ಚು ಗಮನಹರಿಸುತ್ತವೆ. ಹಾಗಾಗಿ ಬಳಕೆದಾರರು ಕೂಡಾ ಅಪ್ಗ್ರೇಡ್ ಆಗುವುದು ಅನಿವಾರ್ಯ. 

WhatsApp To Stop Supporting Phones With Nokia S40 OS
Author
Bengaluru, First Published Dec 31, 2018, 8:42 PM IST

ಹೌದು, ನೀವು ಸರಿಯಾಗಿಯೇ ಓದಿದ್ದೀರಿ. ಕೆಲ WhatsApp ಬಳಕೆದಾರರಿಗೆ ಹೊಸ ವರ್ಷ ಆರಂಭದಲ್ಲೇ ಕಹಿಸುದ್ದಿಯನ್ನು ಹೊತ್ತು ತಂದಿದೆ. ತನ್ನ ಮೊಬೈಲ್ ಡಿವೈಸ್ ಸಪೋರ್ಟ್ ವ್ಯವಸ್ಥೆಯನ್ನು WhatsApp ಅಪ್ಡೇಡ್  ಮಾಡಿದ್ದು, ಇನ್ನು ಮುಂದೆ ಕೆಲವು ಫೋನ್‌ಗಳಲ್ಲಿ WhatsApp ಕೆಲಸ ಮಾಡುವುದಿಲ್ಲ. 

2019, ಜನವರಿ 1ರಿಂದ ಕೆಲವು ಫೋನ್‌ಗಳಿಗೆ WhatsApp ಸಪೋರ್ಟ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸೋದನ್ನು ನಿಲ್ಲಿಸಲಿದೆ. ಯಾವ ಫೋನ್‌ಗಳಲ್ಲಿ ನೋಕಿಯಾ S40 ಆಪರೇಟಿಂಗ್ ಸಿಸ್ಟಮ್ (OS) ಇದೆಯೋ ಅಂತಹ ಫೋನ್‌ಗಳಲ್ಲಿ WhatsApp ಕೆಲಸಮಾಡದು, ಎಂಬ ಮಾಹಿತಿ ಲಭ್ಯವಾಗಿದೆ. WhatsApp ಅಂತಹ ಫೋನ್‌ಗಳಿಗೆ ಫೀಚರ್ಸ್‌ಗಳನ್ನು ಅಭಿವೃದ್ಧಿಪಡಿಸುವುದನ್ನು ನಿಲ್ಲಿಸಲಿದೆ.

ಹಾಗೇನೆ, 2020 ಫೆಬ್ರವರಿ 1ರಿಂದ 2.3.7, iOS 7 ಹಾಗೂ ಇನ್ನೂ ಹಳೆಯ OS ಇರುವ ಫೋನ್‌ಗಳಲ್ಲಿ WhatsApp ಕೆಲಸಮಾಡದು ಎಂದು ಹೇಳಲಾಗಿದೆ. 

ಇದನ್ನೂ ಓದಿ: Goodbye 2018: ವಾಟ್ಸಪ್ ಅಪ್ಗ್ರೇಡ್ ಮಾಡಿಲ್ವಾ? ಈ ಸ್ಟೋರಿ ಓದಿದ ಬಳಿಕ ಮಾಡೇ ಮಾಡ್ತೀರಾ!

WhatsApp ಮುಂದಿನ 7 ವರ್ಷಗಳು ಹಾಗೂ ಆ ಅವಧಿಯಲ್ಲಿ ಮಾರುಕಟ್ಟೆಗೆ ಬರುವ ಹೊಸ ತಂತ್ರಜ್ಞಾನದ ಫೋನ್‌ಗಳ ಕಡೆ ಹೆಚ್ಚು ಗಮನಹರಿಸುತ್ತದೆ. ಆದುದರಿಂದ ಹೆಚ್ಚು ಬಳಸಲಾಗುವ ಫೋನ್‌ಗಳಿಗೆ ಸಪೋರ್ಟ್ ಅಭಿವೃದ್ಧಿಪಡಿಸುವತ್ತ ಹೆಚ್ಚು ಕಾಳಜಿವಹಿಸುತ್ತದೆ.

ಆದುದರಿಂದ ನೋಕಿಯಾ S40 ಆಪರೇಟಿಂಗ್ ಸಿಸ್ಟಮ್ ಬಳಸುವವರು, ಸಾಧ್ಯವಿದ್ದರೆ ಒಂದೋ ತಮ್ಮ OS ಅಪ್ಗ್ರೇಡ್ ಮಾಡಬೇಕು ಅಥವಾ ಹೊಸ ಮೊಬೈಲ್ ಫೋನನ್ನು ಕೊಳ್ಳಬೇಕು.

ಇದನ್ನೂ ಓದಿ: 2018ಕ್ಕೆ ಗುಡ್ ಬೈ...2019ಕ್ಕೆ ಹಾಯ್ ಹೇಳುವ ಮುನ್ನಾ...

ಕಳೆದ ವರ್ಷಾಂತ್ಯದಲ್ಲೂ ಕೂಡಾ ವಾಟ್ಸಪ್, ಬ್ಲ್ಯಾಕ್ ಬೆರಿ OS, ಬ್ಲ್ಯಾಕ್ ಬೆರಿ 10, ವಿಂಡೋಸ್ ಫೋನ್ 10 ಮತ್ತು ದಕ್ಕಿಂತ ಹಳೆಯ OS ಇರುವ ಫೋನ್ ಗಳಿಗೆ ಸಪೋರ್ಟನ್ನು ನಿಲ್ಲಿಸಿತ್ತು.  
 

Follow Us:
Download App:
  • android
  • ios