technology
By Suvarna Web Desk | 12:30 PM April 18, 2017
ಯಾವುದೇ ವೆಚ್ಚವಿಲ್ಲದೆ ಜಿಯೋ'ದಿಂದ 168 ಜಿಬಿ ಉಚಿತ ಇಂಟರ್'ನೆಟ್ ಪಡೆಯುವುದು ಹೇಗೆ ಗೊತ್ತೆ ?

Highlights

ಉಚಿತ ಇಂಟರ್'ನೆಟ್,ಕರೆ ಮುಂತಾದ ಸೌಲಭ್ಯ ನೀಡಿದ ರಿಲಯನ್ಸ್ ಜಿಯೊ ಈಗ ಗ್ರಾಹಕರಿಗೆ ಮತ್ತೊಂದು ಸುವರ್ಣವಾಕಾಶ ಕಲ್ಪಿಸಿದೆ.

ದೇಶದ ಮೊಬೈಲ್ ಗ್ರಾಹಕರಿಗೆ 6 ತಿಂಗಳಿಗೂ ಹೆಚ್ಚು ಕಾಲ ಉಚಿತ ಇಂಟರ್'ನೆಟ್,ಕರೆ ಮುಂತಾದ ಸೌಲಭ್ಯ ನೀಡಿದ ರಿಲಯನ್ಸ್ ಜಿಯೊ ಈಗ ಗ್ರಾಹಕರಿಗೆ ಮತ್ತೊಂದು ಸುವರ್ಣವಾಕಾಶ ಕಲ್ಪಿಸಿದೆ.

ಆದರೆ ವಿವೊ ಸ್ಮಾರ್ಟ್'ಫೋನ್ ಹೊಂದಿರುವವರು ಮಾತ್ರ 168ಜಿಬಿ ಉಚಿತ ಇಂಟರ್'ನೆಟ್ ಪಡೆಯಲು ಅವಕಾಶವಿದೆ. ಜಿಯೊ ಹಾಗೂ ವಿವೊ ಒಟ್ಟುಗೂಡಿ  ವಿವೊ-ಜಿಯೊ ಕ್ರಿಕೆಟ್ ಮೇನಿಯಾ ಎಂಬ ಸ್ಪರ್ಧೆ ಏರ್ಪಡಿಸಿದೆ.  ಮೇ 10 ಹಾಗೂ ಅದಕ್ಕಿಂತ ಮುಂಚೆ ಈ ಸ್ಪರ್ಧೆಯಲ್ಲಿ ನೋಂದಾಯಿತರಾಗಿ  ಐಪಿಎಲ್ 10ರಲ್ಲಿ ತಂಡಗಳಲ್ಲಿ ಯಾವ ತಂಡ ಅತ್ಯುತ್ತಮವಾಗಿ ಆಡಲಿದೆ ಎಂಬುದನ್ನು ನೀವು ಆಯ್ಕೆ ಮಾಡಿ ಅಂಕಗಳನ್ನು ನೀಡಬೇಕು.

ನೀವು ಈ ಮೇನಿಯದಲ್ಲಿ ಗೆದ್ದರೆ 3 ಅಥವಾ 4ಜಿಬಿ, ಡ್ರಾ ಮಾಡಿಕೊಂಡರೆ 2ಜಿಬಿ ಅಥವಾ ಸೋತರೆ 1 ಜಿಬಿ ಇಂಟರ್'ನೆಟ್ ಉಚಿತವಾಗಿ ಪಡೆಯಬಹುದು. ನೀವು ಆಯ್ಕೆ ಮಾಡುವ ಅತ್ಯುತ್ತಮ ತಂಡ ಒಂದಕ್ಕಿಂತ ಹೆಚ್ಚು ಬಾರಿ ಗೆದ್ದರೆ ನೀವು 4 ಜಿಬಿ ಡಾಟಾವನ್ನು  ಹೆಚ್ಚು ಬಾರಿ ಪಡೆದುಕೊಳ್ಳಬಹುದು. ಒಟ್ಟು 168 ಜಿಬಿವರೆಗೂ ಗೆಲ್ಲುವ ಅವಕಾಶವಿದೆ.

ವಿವೊ ಸ್ಮಾರ್ಟ್ ಇದ್ದವರು VJ <Space> Team Name - to 59009. ಎಸ್'ಎಂಎಸ್ ಮಾಡಿ ಸದಸ್ಯರಾಗಿ 168 ಜಿಬಿವರೆಗೂ ಇಂಟರ್'ನೆಟ್ ಉಚಿತವಾಗಿ ಪಡೆಯಿರಿ.

 

Show Full Article


Recommended


bottom right ad