Asianet Suvarna News Asianet Suvarna News

ವ್ಯಾಟ್ಸಪ್ ಡಿಲೀಟ್ ಮಾಡದೇ ಇನ್‌ವಿಸಿಬಲ್ ಮಾಡೋದು ಹೇಗೆ?

ಕೆಲವೊಮ್ಮೆ ವ್ಯಾಟ್ಸಪ್ ಹಾಗೂ ಸೋಶಿಯಲ್ ಮೀಡಿಯಾ ಕಿರಿಕಿರಿ ತಂದೊಡ್ಡುತ್ತೆ. ಇದೆಲ್ಲದರಿಂದ ಕೆಲ ಹೊತ್ತು ದೂರವಿರಲು ಬಯಸುತ್ತೇವೆ. ಆದರೆ ವ್ಯಾಟ್ಸಪ್ ಮೆಸೇಜ್, ನೋಟಿಫಿಕೇಶನ್ ಮತ್ತೆ ನಮ್ಮನ್ನ ವ್ಯಾಟ್ಸಪ್‌ನಲ್ಲಿ ಸಕ್ರಿಯರಾಗಿಸುತ್ತದೆ. ಇದಕ್ಕಾಗಿ ವಾಟ್ಸಪ್ ಡಿಲೀಟ್ ಮಾಡದೇ ಇನ್‌ವಿಸಿಬಲ್ ಮಾಡೋ ವಿಧಾನ ಇಲ್ಲಿದೆ.
 

Unique feature Invisible whats app without deleting app
Author
Bengaluru, First Published Nov 25, 2018, 6:53 PM IST

ಬೆಂಗಳೂರು(ನ.25): ಸೋಶಿಯಲ್ ಮೀಡಿಯಾಗಳು ನಮ್ಮ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಆದರೆ ಕೆಲವೊಮ್ಮೆ ಇದೇ ಸೋಶಿಯಲ್ ಮೀಡಿಯಾದಿಂದ ದೂರವಿರಬೇಕು ಅನಿಸುತ್ತದೆ. ಆದರೆ ವ್ಯಾಟ್ಸಪ್ ನೋಟಿಫಿಕೇಶನ್, ಮೆಸೇಜ್‌ಗಳು ನಮ್ಮನ್ನ ಸೋಶಿಯಲ್ ಮಿಡಿಯಾದಿಂದ ಹೊರಬರದಂತೆ ಮಾಡುತ್ತದೆ. 

ಹಾಗಂತ ವ್ಯಾಟ್ಸಪ್ ಡೀಲಿಟ್ ಮಾಡಿದರೆ ಮತ್ತೆ ಇನ್‌ಸ್ಟಾಲ್ ಮಾಡಿ ರಿಸ್ಟೋರ್ ಮಾಡೋ ಸಾಹಸ ಇನ್ನೂ ಕಿರಿಕಿರಿ. ಹೀಗಾಗಿ ನೀವು ವ್ಯಾಟ್ಸಪ್ ಡಿಲೀಟ್ ಮಾಡದೇ ಆ್ಯಪನ್ನ ಇನ್‌ವಿಸಿಬಲ್ ಮಾಡಿ ನಿಶ್ಚಿಂತೆಯಿಂದ ಕಾಲಕಳೆಯಬಹುದು. ಇದರಿಂದ ನಿಮ್ಮ ಆ್ಯಪ್ ಡಿಲೀಟ್ ಆಗೋದಿಲ್ಲ, ಬೇಕು ಅಂದ ತಕ್ಷಣ ವಿಸಿಬಲ್ ಮಾಡಿದರೆ ಮತ್ತೆ ಉಪಯೋಗಿಸಬಹುದು.

ವ್ಯಾಟ್ಸಪ್ ಇನ್‌ವಿಸಿಬಲ್ ಮಾಡಲು ಹಲವು ಸುಲಭ ವಿಧಾನಗಳಿವೆ. ಈ ಕೆಳಗೆ ಕೆಲ ವಿಧಾನಗಳನ್ನ ಪಟ್ಟಿ ಮಾಡಲಾಗಿದೆ.

1 ವ್ಯಾಟ್ಸಪ್ ಟೋನ್
ಫೋನ್ ಸೈಲೆಂಟ್ ಮಾಡೋ ಬದಲು ನಿಮ್ಮ ವ್ಯಾಟ್ಸಪ್ ಟೋನ್ ಸೈಲೆಂಟ್ ಮಾಡಲು ಸಾಧ್ಯವಿದೆ. ಸೈಲೆಂಟ್ ಟೋನ್ ಅಂತರ್ಜಾಲದಲ್ಲಿ ಲಭ್ಯವಿದೆ.  ವ್ಯಾಟ್ಸಪ್ ಸೆಟ್ಟಿಂಗ್ ಮೂಲಕ ಸೈಲೆಂಟ್ ರಿಂಗ್ ಟೋನ್ ಆರಿಸಿಕೊಳ್ಳಿ.  
>Settings>Notifications>slect silent ring tone

2 ನೋಟಿಫಿಕೇಶನ್
ಫೋನ್ ಸೆಟ್ಟಿಂಗ್ ಮೂಲಕ ನೋಟಿಫಿಕೇಶನ್ ಡಿಸೇಬಲ್ ಮಾಡಲು ಸಾಧ್ಯವಿದೆ. ಆದರೆ ಇದರಿಂದ ನಿಮಗೆ ಇತರ ಯಾವುದೇ ನೋಟಿಫಿಕೇಶನ್ ಕೂಡ ಲಭ್ಯವಾಗೋದಿಲ್ಲ. ಹೀಗಾಗಿ ಸೆಟ್ಟಿಂಗ್ ಮೂಲಕ ಟ್ಯಾಪ್ ಆನ್ ನೋಟಿಫಿಕೇಶನ್ ಹಾಗೂ ಡಿಸೇಬಲ್ ವ್ಯಾಟ್ಸಪ್ ನೋಟಿಫಿಕೇಶನ್ ಆನ್ ಮಾಡಿದರೆ ಸಾಕು
Apps> Open list of Apps> Select WhatsApp>Tap on Notification > disable all notifications for WhatsApp 

3 ನೋಟಿಫಿಕೇಶನ್ ಲೈಟ್
ಪ್ರತಿ ನೋಟಿಫಿಕೇಶನ್‌ಗೂ ನಿಮ್ಮ ಮೊಬೈಲ್ ಲೈಟ್ ಆನ್ ಆಗುತ್ತೆ. ಇದು ಕೆಲವೊಮ್ಮೆ ಕಿರಿಕಿರಿಯಾಗಬಹುದು. ಇದಕ್ಕಾಗಿ ವಾಟ್ಸಾಪ್ ಸೆಟ್ಟಿಂಗ್ ಮೂಲಕ ನೋಟಿಫಿಕೇಶನ್ ಲೈಟ್ ನನ್ ಸೆಲೆಕ್ಟ್ ಮಾಡಿದರೆ ಈ ಕಿರಿಕಿರಿ ತಪ್ಪಲಿದೆ.
WhatsApp> Settings> Notifications> Light > None

Follow Us:
Download App:
  • android
  • ios