Asianet Suvarna News Asianet Suvarna News

ಇಂದು ರಾಷ್ಟ್ರೀಯ ವಿಜ್ಞಾನ ದಿನ: ವಿಶ್ವವನ್ನು ಬದಲಾಯಿಸಿದ 7 ಭಾರತೀಯ ವಿಜ್ಞಾನಿಗಳು,ಒಬ್ಬರು ಕನ್ನಡಿಗರು

ನಮ್ಮ ಬದುಕಿಗೆ ಹಾಗೂ ರಾಷ್ಟ್ರದ ಪ್ರಗತಿಗೆ ಆಧಾರವಾದ ವಿಜ್ಞಾನದ ಅದ್ಭುತ ವ್ಯಕ್ತಿಗಳನ್ನು ಗೌರವಿಸುವುದಕ್ಕಾಗಿ ಫೆ.28ನ್ನು ಭಾರತದ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸುತ್ತೇವೆ.

Today is National Science Day Seven Indian scientists who changed the world

ನವದೆಹಲಿ(ಫೆ.28): ಪ್ರತಿಯೊಬ್ಬರ ಜೀವನದಲ್ಲೂ ವಿಜ್ಞಾನವು ತಾವು ಗಮನಿಸುವುದಕ್ಕಿಂತ ಹೆಚ್ಚು ಪ್ರಮುಖ ಪಾತ್ರವನ್ನು ವಹಿಸುತ್ತದೆ. ದಿನ ಬಳಕೆಯ ವಸ್ತುಗಳಿಂದ ಉನ್ನತ ತಂತ್ರಜ್ಞಾನದವರೆಗೆ. ವಿಜ್ಞಾನದ ನೆರವಿಲ್ಲದೆ ಒಂದು ಕ್ಷಣವೂ ಬದುಕಲು ಸಾಧ್ಯವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ನಮ್ಮ ಬದುಕಿಗೆ ಹಾಗೂ ರಾಷ್ಟ್ರದ ಪ್ರಗತಿಗೆ ಆಧಾರವಾದ ವಿಜ್ಞಾನದ ಅದ್ಭುತ ವ್ಯಕ್ತಿಗಳನ್ನು ಗೌರವಿಸುವುದಕ್ಕಾಗಿ ಫೆ.28ನ್ನು ಭಾರತದ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸುತ್ತೇವೆ. ಇನ್ನೊಂದು ಅಚ್ಚರಿಯ ವಿಷಯವೆಂದರೆ ಫೆ.28ರಂದು ಭಾರತೀಯ ಖ್ಯಾತ ಭೌತ ವಿಜ್ಞಾನಿ ಚಂದ್ರಶೇಖರ ವೆಂಕಟ ರಾಮನ್ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ರಾಮನ್ ಪರಿಣಾಮಗಳನ್ನು ಆವಷ್ಕರಿಸಿದ ದಿನ ಕೂಡ.

ಇದೇ ರೀತಿ ವಿಶ್ವದ ವಿಜ್ಞಾನ ರಂಗದಲ್ಲಿ ಪರಿಣಾಮಕಾರಿ ಪ್ರಭಾವ ಉಂಟು ಮಾಡಿದ 7 ಪ್ರಮುಖ ಭಾರತೀಯ ವಿಜ್ಞಾನಿಗಳು ಸಂಕ್ಷಿಪ್ತ ಪರಿಚಯ ಇಲ್ಲಿದೆ.

Today is National Science Day Seven Indian scientists who changed the world

ಸಿ.ವಿ. ರಾಮನ್: ತಮಿಳು'ನಾಡಿನ ತಿರುಚನಾಪಳ್ಳಿಯಲ್ಲಿ 1888 ನವೆಂಬರ್ 7 ಜನಿಸಿದ ಇವರು ವಿಶ್ವದ ಭೌತ ವಿಜ್ಞಾನದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಇವರು ಆವಿಷ್ಕರಿಸಿದ ರಾಮನ್ ಪರಿಣಾಮಗಳು -ವಾತಾವರಣದಲ್ಲಿಯ ಧೂಳಿನ ಕಣಗಳು ಬೆಳಕನ್ನು ಭಾಗಶಃ ಚದುರಿಸುವವು. ಹೀಗೆ ಬೆಳಕು ಚದುರಿದಾಗ, ಅದರ ಎಲ್ಲ ಬಣ್ಣಗಳೂ ಚದುರುವುವು. ಹೆಚ್ಚು ಚದುರದ ಕೆಂಪು ಬೆಳಕು ದಿಗಂತದ ಸಮೀಪ ಸೂರ್ಯಕಾಣುವ ಪ್ರದೇಶದಲ್ಲಿ ಪ್ರಜ್ವಲಿಸುವುದು. ಉಳಿದದ್ದು ಆಕಾಶಕ್ಕೆ ನೀಲಿ ಬಣ್ಣವನ್ನು ನೀಡುವುದು. ಬೆಳಕು ಚದುರುವಾಗ ಶಕ್ತಿಯ ಸ್ವೀಕಾರ ಅಥವಾ ದಾನ ಬೆಳಕಿನ ತರಂಗಾಂತರವನ್ನು ನಿರ್ದಿಷ್ಟವಾಗಿ ಬದಲಾಯಿಸುವ ಸಾಧ್ಯತೆ ಲಕ್ಷ್ಯದಲ್ಲೊಂದು ಮಾತ್ರ. ಎಂದರೆ ಒಂದು ಲಕ್ಷ ಬೆಳಕಿನ ಕಣಗಳು ಚದುರಿದಾಗ ಒಂದು ಮಾತ್ರ ರಾಮನ್ ಪರಿಣಾಮಕ್ಕೆ ಒಳಗಾಗುವುದು' ಇದನ್ನೆ ರಾಮನ್ ಪರಿಣಾಮಗಳು ಎನ್ನುತ್ತಾರೆ.

ಇವರ ಈ ಸಾಧನೆಗಾಗಿ 1930ರಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ 'ನೊಬೆಲ್' ಪ್ರಶಸ್ತಿ ನೀಡಿ ಗೌರವಿಸಲಾಯಿತು. 1970 ನವೆಂಬರ್ 21 ರಂದು ಬೆಂಗಳೂರಿನಲ್ಲಿಯೇ ಮೃತಪಟ್ಟರು.

Today is National Science Day Seven Indian scientists who changed the world

ಹೋಮಿ ಜೆ ಬಾಬಾ: ಮುಂಬೈ'ನಲ್ಲಿ 1909 ಅಕ್ಟೋಬರ್ 30 ರಂದು ಜನಿಸಿದ ಇವರು ಭಾರತದ ಮೊದಲ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿದ್ದರು. ದೇಶದ ಪರಮಾಣು ಶಕ್ತಿಯ ಪಿತಾಮಹ ಎಂದೇ ಖ್ಯಾತರಾಗಿದ್ದು ಇವರು ಪರಮಾಣು ಬಾಂಬ್'ಗಳ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 1966 ಜನವರಿ 24ರಂದು ವಿಮಾನ ಅಪಘಾತದಲ್ಲಿ ಇವರು ಮರಣ ಹೊಂದಿದರು.

Today is National Science Day Seven Indian scientists who changed the world

ಸರ್.ಎಂ ವಿಶ್ವೇಶ್ವರಯ್ಯ: ಭಾರತದ ಪ್ರಖ್ಯಾತ ಇಂಜಿನಿಯರ್ ಎಂದೇ ಪ್ರಸಿದ್ಧರಾದ ಇವರು ಸೆ.15 1860ರಲ್ಲಿ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಜನಿಸಿದರು.

1912ರಿಂದ 18ರ ಅವಧಿಯವರೆಗೆ ಮೈಸೂರಿನ ದಿವಾನರಾಗಿದ್ದರು. ಇವರಿಗೆ ಭಾರತದ ಅತ್ಯಂತ ನಾಗರಿಕ ಪ್ರಶಸ್ತಿಯಾದ ' ಭಾರತ ರತ್ನ' ದೊರಕಿದೆ. 'ಸ್ವಯಂಚಾಲಿತ ನೀರಿನ ಕಾಲುವೆಯ ದ್ವಾರಗಳು' ಮತ್ತು 'ಕಾಲುವೆ ನೀರಾವರಿ ವ್ಯವಸ್ಥೆ' ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇನರ ಜನ್ಮ ದಿನವನ್ನು ಭಾರತದ ಇಂಜಿನಿರ್'ಗಳ ದಿನವನ್ನಾಗಿ ಅಚರಿಸಲಾಗುತ್ತದೆ. ದೇಶದ ವಿವಿಧ ಕಡೆ ಲೋಕೋಪಯೋಗಿ ಇಲಾಖೆಯ ಅಭಿವೃದ್ಧಿಯಲ್ಲಿ ಇವರ ಕೊಡುಗೆ ಗಣನೀಯವಾದುದು. ಹೈದರಾಬಾದ್'ನಲ್ಲಿ ಪ್ರವಾಹ ರಕ್ಷಣ ವ್ಯವಸ್ಥೆ , ಕರ್ನಾಟಕದಲ್ಲಿ ಕೆಆರ್'ಎಸ್ ನಿರ್ಮಿಸಿದ ಖ್ಯಾತಿ ಇವರದು. ಏಪ್ರಿಲ್ 14 1962ರಲ್ಲಿ ತಮ್ಮ 101 ವಯಸ್ಸಿನಲ್ಲಿ ನಿಧನರಾದರು.

Today is National Science Day Seven Indian scientists who changed the world

ಎಸ್.ಚಂದ್ರಶೇಖರ್: ಬ್ರಿಟಿಷ್ ಇಂಡಿಯಾದ ಆಳ್ವಿಕೆಯಲ್ಲಿ ಲಾಹೋರ್'ನಲ್ಲಿ 1910 ಅಕ್ಟೋಬರ್ 19ರಂದು ಜನಿಸಿದ ಇವರು ಪ್ರಸಿದ್ಧ ಭೌತಶಾಸ್ತ್ರಜ್ಞ. ಭಾರತದ ಮತ್ತೋರ್ವ ಭೌತ ವಿಜ್ಞಾನಿ ಸಿ.ವಿ.ರಾಮನ್ ಅವರ ಹತ್ತಿರದ ಸಂಬಂಧಿಕರು.

ಕಪ್ಪುಕುಳಿಗಳ ಗಣಿತ ಸಿದ್ದಾಂತಕ್ಕಾಗಿ 1983ರಲ್ಲಿ ನೊಬೆಲ್ ಪ್ರಶಸ್ತಿ ದೊರಕಿದೆ. ನಕ್ಷತ್ರಗಳಿಗೆ ಸಂಬಂಧಿಸಿದಂತೆ ವಿಕಿರಣ ಶಕ್ತಿ, ವಿಶೇಷವಾಗಿ ಬಿಳಿ ಕುಬ್ಜ ನಕ್ಷತ್ರಗಳಿಗೆ ಸಂಬಂಧಿಸಿದಂತೆ ಅನೇಕ ಸಂಶೋಧನೆ ಹಾಗೂ ಪ್ರಬಂಧಗಳನ್ನು ರಚಿಸಿದ್ದಾರೆ. ಬಹುಕಾಲ ಅಮೆರಿಕಾದಲ್ಲಿ ಕಳೆದ ಇವರು ಆಗಸ್ಟ್ 21,1995ರಲ್ಲಿ  ಚಿಕಾಗೋದಲ್ಲಿ ತಮ್ಮ 82ನೇ ವಯಸ್ಸಿನಲ್ಲಿ ಮೃತಪಟ್ಟರು.

Today is National Science Day Seven Indian scientists who changed the world

ಶ್ರೀನಿವಾಸನ್ ರಾಮಾನುಜಂ: ಭಾರತದ ಗಣಿತಶಾಸ್ತ್ರದ ಅದ್ಭುತ ಪ್ರತಿಭೆ ಜನಿಸಿದ್ದು ಡಿಸೆಂಬರ್ 22, 1887 ತಮಿಳುನಾಡಿನಲ್ಲಿ.ರಾಮಾನುಜಂ ಅವರು ವಿಶ್ಲೇಷಣೆ, ಸಂಖ್ಯೆ ಸಿದ್ಧಾಂತ, ಅನಂತ ಸರಣಿ, ಮತ್ತು ಮುಂದುವರಿದ ಭಿನ್ನರಾಶಿಗಳ ಬಗ್ಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ.

ಸಣ್ಣ ವಯಸ್ಸಿಗೆ ಅಪಾರ ಸಾಧನೆ ಮಾಡಿದ ಇವರು ತಮ್ಮ 32ನೇ ವಯಸ್ಸಿನಲ್ಲಿ ಅನಾರೋಗ್ಯದ ಕಾರಣದಿಂದ ನಿಧನರಾದರು. ಇವರ ಜನ್ಮದಿನವನ್ನು  ತಮಿಳುನಾಡಿನಲ್ಲಿ  ಮಾಹಿತಿ ತಂತ್ರಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ.

Today is National Science Day Seven Indian scientists who changed the world

ಜಗದೀಶ್ ಚಂದ್ರ ಬೋಸ್: ಪಶ್ಚಿಮ ಬಂಗಾಳದಲ್ಲಿ ನ.30 1858ರಲ್ಲಿ  ಜನಿಸಿದ ಇವರು ಭೌತವಿಜ್ಞಾನಿ, ಜೀವಶಾಸ್ತ್ರಜ್ಞ, ಸಸ್ಯಶಾಸ್ತ್ರಜ್ಞ ಮತ್ತು ಪುರಾತತ್ವಶಾಸ್ತ್ರಜ್ಞ ವಿಷಯ ಜ್ಞಾನ ಪಡೆದುಕೊಂಡಿಕೊಂಡಿದ್ದರು.

ರೇಡಿಯೋ ಮತ್ತು ಮೈಕ್ರೋವೇವ್ ದೃಗ್ವಿಜ್ಞಾನದ ಅಧ್ಯಯನವನ್ನು ಪ್ರಾರಂಭಿಸಿ ಅನೇಕ ಸಂಶೋಧನೆ ಕೈಗೊಂಡಿದ್ದರು. ಸಸ್ಯಗಳಿಗೆ ಜೀವವಿದೆ ಎಂಬುದನ್ನು ಜಗತ್ತಿಗೆ ತಿಳಿಸಿಕೊಟ್ಟವರು ಜಗದೀಶ್ ಚಂದ್ರ ಬೋಸ್. ರೆಡಿಯೋ ಆವಿಷ್ಕಾರದಲ್ಲಿ ಇವರ ಕೊಡುಗೆ ಕೂಡ ಮಹತ್ವವಾದುದ್ದು.

ವಿಶ್ವದ ಹಲವು ಖ್ಯಾತ ವಿಜ್ಞಾನಿಗಳೊಂದಿಗೆ ಇವರು ಸಂಪರ್ಕ ಹೊಂದಿದ್ದರು. ಬೋಸರನ್ನು ಬಂಗಾಳಿ ಕಾಲ್ಪನಿಕ ವಿಜ್ಞಾನ ಸಾಹಿತ್ಯದ ಪಿತಾಮಹ ಎಂದು ಸಹ ಖ್ಯಾತಿ ಹೊಂದಿದ್ದಾರೆ.

Today is National Science Day Seven Indian scientists who changed the world

ಎ.ಪಿ.ಜೆ. ಅಬ್ದುಲ್ ಕಲಾಂ: ಭಾರತದ ಮಾಜಿ ರಾಷ್ಟ್ರಪತಿಗಳಾದ ಕಲಾಂ ತಮಿಳುನಾಡಿನ ರಾಮೇಶ್ವರಂ'ನಲ್ಲಿ ಅಕ್ಟೋಬರ್ 15, 1931ರಲ್ಲಿ ಜನಿಸಿದರು. ಬಾಹ್ಯಕಾಶ ವಿಜ್ಞಾನದಲ್ಲಿ ಖ್ಯಾತರಾದ ಇವರು ಡಿಆರ್'ಡಿಒ ಹಾಗೂ ಇಸ್ರೋ ಸಂಸ್ಥೆಯಲ್ಲಿ ಬಾಹ್ಯಕಾಶ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಭಾರತದ ಅಣು ವಿಜ್ಞಾನದ ಪ್ರಗತಿಯಲ್ಲಿ ಅಪಾರ ಸಾಧನೆ ಮಾಡಿದ್ದಾರೆ.

ದೇಶದ ಹಲವು ಯಶಸ್ವಿ ಕ್ಷಿಪಣಿಗಳ ಉಡಾವಣೆಯಲ್ಲಿ ಇವರ ಕೊಡುಗೆಯೂ ಅಪಾರವಾದದ್ದು. 2002ರಿಂದ 2007ರವರೆಗೆ ಭಾರತದ 11ನೇ ರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.ಅತ್ಯುನ್ನತ ಭಾರತ ರತ್ನ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ. ತಮ್ಮ 83ನೇ ವಯಸ್ಸಿನಲ್ಲಿ ಜುಲೈ 25, 2015ರಂದು ಮೃತರಾದರು.

Follow Us:
Download App:
  • android
  • ios