Asianet Suvarna News Asianet Suvarna News

ಮಂಗಳ ಹೀಗೆ ಶಬ್ಧ ಮಾಡ್ತಾನೆ: ಕಳೆದು ಹೋಗ್ತಿರಿ ಕೇಳ್ತಾನೆ!

ಮಂಗಳ ಗ್ರಹದ ಶಬ್ಧ ದಾಖಲಿಸಿದ ನಾಸಾದ ಇನ್‌ಸೈಟ್ ಲ್ಯಾಂಡರ್| ಇದೇ ಮೊದಲ ಬಾರಿಗೆ ಬೇರೊಂದು ಗ್ರಹದ ಗಾಳಿಯ ಶಬ್ಧ ದಾಖಲು | ಮಂಗಳ ಗ್ರಹದಲ್ಲಿ ಬೀಸುವ ತಂಗಾಳಿಯ ಕಂಪನ ದಾಖಲು| 
 

The First Sound From Mars Recorded  by NASA
Author
Bengaluru, First Published Dec 8, 2018, 4:30 PM IST

ವಾಷಿಂಗ್ಟನ್(ಡಿ.08): ಮನೆಗೆ ಹೋದರೆ ಹೆಂಡ್ತಿ ಕೂಗಾಡುವ, ಮನೆಯಿಂದ ಹೊರ ಹೋದರೆ ಗಂಡ ಚೀರಾಡುವ, ನೆರೆಹೊರೆಯವರ, ಊರ ಜನಗಳ, ರಾಜಕಾರಣಿಗಳ, ಸಿನಿಮಾ ನಟ ನಟಿಯರ, ಧ್ವನಿ ಕೇಳಿ ಕೇಳಿ ಬೇಜಾರಿಗಿದೆಯಾ?. ಹಿಂಸೆಯನ್ನು ವಿಜೃಂಭಿಸುವ ಭಯೋತ್ಪಾದಕರ ವಿಕೃತ ಕೂಗಾಟ ಕೇಳಿ ಸಾಕಾಗಿದೆಯಾ?.

ಹಾಗಿದ್ರೆ ಬನ್ನಿ ನಾವಿತ್ತು ನಿಮಗೆ ಈ ಭೂಮಿಯಾಚೆಗಿನ ಮತ್ತೊಂದು ಗ್ರಹದ ಹೊಸ ಶಬ್ಧವನ್ನು ಕೇಳಿಸುತ್ತೇವೆ. ಇದು ನೀವೆಂದೂ ಕೇಳಿರದ ಶಬ್ಧ. ನೀವೆಂದೂ ಊಹಿಸಿರದ ಶಬ್ಧ. ಇದೇ ಮೊದಲ ಬಾರಿಗೆ ನಾಸಾ ಲ್ಯಾಂಡರ್ ಮಂಗಳ ಗ್ರಹದ ಮೇಲಿನ ಶಬ್ದವನ್ನು ದಾಖಲಿಸಿದ್ದು, ಕೆಂಪು ಗ್ರಹದ ಮೇಲಿನ ಶಬ್ಧ ದಾಖಲಿಸಿದ ಕೀರ್ತಿಗೆ ಮಾನವ ಭಾಜನನಾಗಿದ್ದಾನೆ.

ಮಂಗಳ ಗ್ರಹದಲ್ಲಿರುವ ನಾಸಾದ ಇನ್‌ಸೈಟ್ ಲ್ಯಾಂಡರ್ ಅಲ್ಲಿ ಬೀಸುವ ತಂಗಾಳಿಯ ಕಂಪನಗಳನ್ನು ದಾಖಲಿಸಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಮಂಗಳ ಗ್ರಹದ ಮೇಲಿನ ಗಾಳಿ  10-15 ಎಂಪಿಹೆಚ್ ( ಪ್ರತಿ ಸೆಕೆಂಡ್ ಗೆ 5-7 ಮೀಟರ್) ನಲ್ಲಿ ಬೀಸುತ್ತಿರುವುದನ್ನು ನಾಸಾ ಲ್ಯಾಂಡರ್ ಸೆರೆ ಹಿಡಿದಿದೆ. 

ಇದೇ ಮೊದಲ ಬಾರಿಗೆ ಸೀಸ್ಮಾಮೀಟರ್‌ನಲ್ಲಿ15 ನಿಮಿಷಗಳ ಡಾಟಾ ಬಹಿರಂಗವಾಗಿದ್ದು, ಗಾಳಿಯಲ್ಲಿ ಧ್ವಜ ಹಾರಿದಾಗ ಕೇಳಿಸುವ ರೀತಿಯಲ್ಲಿ ಮಂಗಳ ಗ್ರಹದ ಶಬ್ಧ ಕೇಳಿಬಂದಿದೆ . ಇನ್‌ಸೈಟ್  ನೌಕೆಯನ್ನು ಮಂಗಳ ಗ್ರಹದ ಕುರಿತು ಹಿಂದಿಗಿಂತಲೂ ಭಿನ್ನವಾಗಿ ಆಂತರಿಕವಾಗಿ ಅಧ್ಯಯನ ನಡೆಸುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.

ಅಂಗಾರಕನ ಅಂಗಳಕ್ಕೆ ಮತ್ತೊಂದು ನೌಕೆ: ಮಂಗಳ ಗ್ರಹವೇ ಏಕೆ?

ಕ್ಯೂಬ್ ಸ್ಯಾಟ್ ಗೆ ಸೆರೆ ಸಿಕ್ಕ ಮಂಗಳ: ನೋಡದಿದ್ರೆ ಅಳ್ತೀರಾ ಗಳಗಳ!

ಮಂಗಳನ ಅಂಗಳ ಹಿಂಗಿದೆ: ಒಂದಲ್ಲ, 2540 ಫೋಟೋಗಳು!

Follow Us:
Download App:
  • android
  • ios