Asianet Suvarna News Asianet Suvarna News

ಮಂಗಳನಲ್ಲಿತ್ತು ಉಪ್ಪು ಸರೋವರ: ಅಂಗಾರಕ ಅದಿನ್ನೆಷ್ಟು ಕುತೂಹಲಗಳ ಆಗರ?

ಭೂಮಿಯಂತೆ ಮಂಗಳ ಗ್ರಹದ ಮೇಲೂ ಉಪ್ಪು ಸರೋವರ| 3 ಬಿಲಿಯನ್ ವರ್ಷಗಳ ಹಿಂದೆ ಮಂಗಳ ಗ್ರಹ ಉಪ್ಪು ಸರೋವರದ ಆಗರ| ಗ್ರಹದ ಮೇಲ್ಮೈ ವಾತಾವರಣದಲ್ಲಿ ಒತ್ತಡ ಕಡಿಮೆಯಾದ ಪರಿಣಾಮ ನೀರು ಆವಿ| ಟೆಕ್ಸಾಸ್ ಎ&ಎಂ ವಿವಿ ವಿವಿ ಸಂಶೋಧಕರಿಂದ ರೋಚಕ ಮಾಹಿತಿ| ಗಾಲೆ ಕ್ರೆಟರ್ ಕುಳಿಯ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಕ್ಯೂರಿಯಾಸಿಟಿ ರೋವರ್|

Researchers Says Planet Mars Once Has Salt Lake On Its Surface
Author
Bengaluru, First Published Oct 19, 2019, 6:21 PM IST

ಟೆಕ್ಸಾಸ್(ಅ.19): ಮಂಗಳ ಗ್ರಹದ ನೆಲವನ್ನು ಬಗೆದಷ್ಟೂ ರೋಚಕ ಸಂಗತಿಗಳು ಹೊರ ಬರುತ್ತಿವೆ. ಈಗಾಗಲೇ ಮಂಗಳ ಗ್ರಹದ ಕುರಿತು ಸಾಕಷ್ಟು ಮಾಹಿತಿ ಹೊಂದಿರುವ ಮಾನವ, ಗ್ರಹದ ಇಂಚಿಂಚೂ ಭೂಮಿಯನ್ನೂ ಅಧ್ಯಯನಕ್ಕೊಳಪಡಿಸುವ ತವಕದಲ್ಲಿದ್ದಾನೆ.

ಅದರಂತೆ ಮಂಗಳ ಗ್ರಹ ಹಿಂದೊಮ್ಮೆ ಉಪ್ಪು ಸರೋವರದ ಆಗರವಾಗಿತ್ತು ಎಂಬುದನ್ನು ಖಗೋಳ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಭೂಮಿಯಲ್ಲಿರುವಂತೆ ಮಂಗಳ ಗ್ರಹದಲ್ಲೂ ಉಪ್ಪು ಸರೋವರದ ಜಲರಾಶಿಯೇ ಇತ್ತು ಎಂಬುದು ಇದೀಗ ಸಿದ್ಧವಾಗಿದೆ.

ಮಂಗಳನ ಅಂಗಳದಲ್ಲಿ ಜೀವಿಗಳಿವೆ: ನಾಸಾ ವಿಜ್ಞಾನಿಯ ಅಚ್ಚರಿಯ ಘೋಷಣೆ!

ಭೂಮಿಯ ಮೇಲಿರುವಂತೆ ಮಂಗಳ ಗ್ರಹದಲ್ಲೂ ಉಪ್ಪು ನೀರಿನ ಸರೋವರ ಇದ್ದ ಕುರುಹುಗಳಿವೆ ಎಂದು ಟೆಕ್ಸಾಸ್‌ನ ಎ&ಎಂ ವಿವಿ ಸಂಶೋಧಕರು ತಿಳಿಸಿದ್ದಾರೆ. ಆದರೆ ಕಾಲಾನಂತರದಲ್ಲಿ ಗ್ರಹದ ವಾತಾವರಣದಲ್ಲಾದ ಬದಲಾವಣೆ ಪರಿಣಾಮ ನೀರು ಆವಿಯಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಮಂಗಳ ಗ್ರಹದಲ್ಲಿ ಭೀಕರ ಕೊಲೆ: Opportunity ಕಳೆದುಕೊಂಡ ಅಂಗಾರಕ!

ಸುಮಾರು 3 ಬಿಲಿಯನ್ ವರ್ಷಗಳ ಹಿಂದೆ ಗ್ರಹದ ವಾತಾವರಣ ತೆಳುವಾಗುವ ಪ್ರಕ್ರಿಯೆ ಆರಂಭವಾದ ಬಳಿಕ ಗ್ರಹದ ಮೇಲ್ಮೈ ವಾತಾವರಣದಲ್ಲಿ ಒತ್ತಡ ಕಡಿಮೆಯಾಗುತ್ತಾ ಬಂದಿದ್ದು, ಇದರಿಂದ ಗ್ರಹದ ಮೇಲ್ಮೈಯಲ್ಲಿದ್ದ ನೀರು ಆವಿಯಾಗಿರಬಹುದು ಎಂದು ಸಂಶೋಧಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕೆಂಪು ಗ್ರಹಕ್ಕೆ ಹೋಗಿ ಬರಲು ಎಷ್ಟು ಖರ್ಚು?: ಆಸ್ತಿ ಮಾರಿ ಅಂತಾರೆ ಮಸ್ಕ್!

ಮಂಗಳ ಗ್ರಹದ ಮೇಲಿರುವ 95 ಮೈಲು ಅಗಲದ ಗಾಲೆ ಕ್ರೆಟರ್ ಕುಳಿಯ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಕ್ಯೂರಿಯಾಸಿಟಿ ರೋವರ್, ಸರೋವರ ಬತ್ತಿರ ಹೋದ ಕುರಿತು ಸಾಕಷ್ಟು ಮಾಹಿತಿ ಒದಗಿಸಿದೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.

ಮಂಗಳ ಗ್ರಹದಲ್ಲಿದೆ ಹಿಮಗಡ್ಡೆ ಕೊಳ

Follow Us:
Download App:
  • android
  • ios