Asianet Suvarna News Asianet Suvarna News

ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕಲ್ ಕಾರು-ಒಂದು ಬಾರಿ ಚಾರ್ಜ್‌ಗೆ 250 ಕಿ.ಮೀ ಪ್ರಯಾಣ!

ರೆನಾಲ್ಟ್ ಕ್ವಿಡ್ ಸಣ್ಣ ಕಾರು ಭಾರತದಲ್ಲಿ ಗ್ರಾಹಕರನ್ನ ಮೋಡಿ ಮಾಡಿದೆ. ಇದೀಗ ರೆನಾಲ್ಟ್ ಸಂಸ್ಥೆ ಕ್ವಿಡ್ ಎಲೆಕ್ಟ್ರಿಕಲ್ ಕಾರನ್ನ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದರ ವಿಶೇಷತೆ ಏನು? ಬೆಲೆ ಎಷ್ಟು? ಇಲ್ಲಿದೆ ಮಾಹಿತಿ.

Renault Kwid Electric car unveiled at Paris Motor Show
Author
Bengaluru, First Published Oct 2, 2018, 3:04 PM IST

ನವದೆಹಲಿ(ಅ.02): ಮಾರುತಿ ಸುಜುಕಿ ಸಂಸ್ಥೆ ಭಾರತದಲ್ಲಿ 2020ರ ವೇಳೆಗೆ ಎಲೆಕ್ಟ್ರಿಕಲ್ ಕಾರನ್ನ ಬಿಡುಗಡೆ ಮಾಡಲು ಸಿದ್ದತೆ ನಡೆಸುತ್ತಿದೆ. ಇದೀಗ ಮಾರುತಿಗೆ ಪೈಪೋಟಿ ನೀಡಲು ರೆನಾಲ್ಟ್ ಸಂಸ್ಥೆ ಇದೀಗ ಎಲೆಕ್ಟ್ರಿಕಲ್ ಕಾರು ಬಿಡುಗಡೆಗೆ ಸಜ್ಜಾಗಿದೆ.

Renault Kwid Electric car unveiled at Paris Motor Show

ರೆನಾಲ್ಟ್ ಕಾರು ತಯಾರಿಕಾ ಸಂಸ್ಥೆಯ ಪ್ರಖ್ಯಾತ ಸಣ್ಣ ಕ್ವಿಡ್ ಕಾರ ಇದೀಗ ಎಲೆಕ್ಟ್ರಿಕಲ್ ಕಾರಾಗಿ ಬದಲಾಗಲಿದೆ. 2018ರ ಪ್ಯಾರಿಸ್ ಮೋಟಾರ್ ಶೋನಲ್ಲಿ ರೆನಾಲ್ಟ್ ನೂತನ ಕ್ವಿಡ್ K-ZE ಕಾರನ್ನ ಪರಚಿಯಿಸಿದೆ.

Renault Kwid Electric car unveiled at Paris Motor Show

ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕಲ್ ಕಾರು ಅತ್ಯಾಕರ್ಷಕ ಲುಕ್ ಜನರನ್ನ ಮೋಡಿ ಮಾಡಲಿದೆ. ಇಷ್ಟೇ ಅಲ್ಲ ಒಂದು ಬಾರಿ ಚಾರ್ಜ್ ಮಾಡಿದರೆ 250 ಕಿ.ಮೀ ಪ್ರಯಾಣಿಸಬಹುದಾಗಿದೆ. ಜೊತೆಗೆ ಎರಡು ಚಾರ್ಜಿಂಗ್ ವ್ಯವಸ್ಥೆ ಮಾಡಲಾಗಿದೆ. ಒಂದು ಮನೆಯಲ್ಲೇ ಚಾರ್ಜ್ ಮಾಡಬಹುದಾಗ ಪ್ಲಗ್, ಇನ್ನೊಂದು ಹೊರಗಡೆ ಚಾರ್ಜ್ ಪಾಯಿಂಟ್‌ಗಳಲ್ಲಿ ಚಾರ್ಜ್ ಮಾಡಬಹುದಾದ ಪ್ಲಗ್ ಪಾಯಿಂಟ್.

Renault Kwid Electric car unveiled at Paris Motor Show

2020ರ ವೇಳೆಗೆ ಮಾರುತಿ ಸುಜುಕಿ ವ್ಯಾಗನ್ ಆರ್  ಎಲೆಕ್ಟ್ರಿಕಲ್ ಕಾರನ್ನ ಬಿಡುಗಡೆ ಮಾಡಲು ಸಜ್ಜಾಗಿದೆ. ಇದೀಗ ರೆನಾಲ್ಟ್ ಇದಕ್ಕಿಂತಲೂ ಮುಂಚೆ ರೆನಾಲ್ಟ್ ಕ್ವಿಡ್ ಕಾರನ್ನ ಬಿಡುಗಡೆ ಮಾಡಲಿದೆ. ಮೊದಲು ರೆನಾಲ್ಟ್ ಎಲೆಕ್ಟ್ರಿಕಲ್ ಕ್ವಿಡ್ ಕಾರು ಚೈನಾದಲ್ಲಿ ಬಿಡುಗಡೆಯಾಗಲಿದೆ. ಬಳಿಕ ಭಾರತದ ರಸ್ತೆಗಳಿಯಲಿದೆ.

Renault Kwid Electric car unveiled at Paris Motor Show

ನೂತನ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕಲ್ ಕಾರಿನ ಬೆಲೆ ಹಾಗೂ ಇತರ ಮಾಹಿತಿಯನ್ನ ಕಂಪೆನಿ ಬಹಿರಂಗ ಪಡಿಸಿಲ್ಲ. ಆದರೆ ಕಡಿಮೆ ಬೆಲೆ ಹಾಗೂ ಮಧ್ಯಮ ವರ್ಗದ ಜನರ ಕೈಗೆಟುವಂತೆ ಬೆಲೆ ನಿಗಧಿಪಡಿಸಲಾಗುವುದು ಎಂದು ರೆನಾಲ್ಟ್ ಹೇಳಿದೆ.

Renault Kwid Electric car unveiled at Paris Motor Show
 

Follow Us:
Download App:
  • android
  • ios