Asianet Suvarna News Asianet Suvarna News

ಇತಿಹಾಸ ಸೃಷ್ಟಿಸಿದ ಇಸ್ರೋ: ಎರಡು ಉಪಗ್ರಹ ಎತ್ತರದ ಕಕ್ಷೆಗೆ!

ಪಿಎಸ್‌ಎಲ್‌ವಿ- ಸಿ44 ರಾಕೆಟ್ ಮೂಲಕ ಮಿಲಿಟರಿ ಉಪಯೋಗಕ್ಕಾಗಿ ನಿರ್ಮಿಸಲಾದ ಮೈಕ್ರೋಸ್ಯಾಟ್ ಹಾಗೂ ವಿದ್ಯಾರ್ಥಿಗಳು ನಿರ್ಮಿಸಿರುವ ಆರ್ ಕಲಾಂ ಸ್ಯಾಟ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ.

PSLV-C44 carrying Two Satellite Successfully Lifts Off
Author
Bengaluru, First Published Jan 25, 2019, 12:14 PM IST

ಶ್ರೀಹರಿಕೋಟಾ(ಜ.25): ಬಾಹ್ಯಾಕಾಶ ಕ್ಷೇತ್ರದಲ್ಲಿ ಹಂತ ಹಂತವಾಗಿ ಸಾಧನೆಯ ಮೆಟ್ಟಿಲುಗಳನ್ನು ಏರುತ್ತಿರುವ ಇಸ್ರೋ, ಇದೀಗ ಮತ್ತೊಂದು ಗರಿಯನ್ನು ಮುಡಿಗೇರಿಸಿಕೊಂಡಿದೆ.

ಪಿಎಸ್‌ಎಲ್‌ವಿ- ಸಿ44 ರಾಕೆಟ್ ಮೂಲಕ ಮಿಲಿಟರಿ ಉಪಯೋಗಕ್ಕಾಗಿ ನಿರ್ಮಿಸಲಾದ ಮೈಕ್ರೋಸ್ಯಾಟ್ ಹಾಗೂ ವಿದ್ಯಾರ್ಥಿಗಳು ನಿರ್ಮಿಸಿರುವ ಆರ್ ಕಲಾಂ ಸ್ಯಾಟ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ.

ಸತೀಶ್ ಧವನ್  ಬಾಹ್ಯಾಕಾಶ ಕೇಂದ್ರದಿಂದ ಗುರುವಾರ ರಾತ್ರಿ 11-37 ರ ವೇಳೆಗೆ ಪಿಎಸ್‌ಎಲ್‌ವಿ- ಸಿ44 ಯಶಸ್ವಿಯಾಗಿ ನಭಕ್ಕೆ ಚಿಮ್ಮಿತು. ಇನ್ನು ಈ ಯಶಸ್ವಿ ಉಡಾವಣೆ ಮೂಲಕ ಇಸ್ರೋ ಮತ್ತೊಂದು ಸಾಧನೆ ಮಾಡಿದ್ದು, ಇದೇ ಮೊದಲ ಬಾರಿಗೆ ಉಪಗ್ರಹಗಳನ್ನು ಅತ್ಯಂತ ಎತ್ತರದ ಕಕ್ಷೆಗೆ ಸೇರಿಸಲಾಗಿದೆ.

ಪಿಎಸ್‌ಎಲ್‌ವಿ- ಸಿ44 ರಾಕೆಟ್ 740 ಕೆಜಿ ತೂಕದ ಮೈಕ್ರೋಸ್ಯಾಟ್ -ಆರ್ ಉಪಗ್ರಹವನ್ನು 13 ನಿಮಿಷ ಮತ್ತು 30 ಸೆಕೆಂಡ್ ಗಳಲ್ಲಿ ಕಕ್ಷೆಗೆ ಸೇರಿಸಿತು. ಇದು ಕಕ್ಷೆ ಸೇರುತ್ತಿದ್ದಂತೆ ನಿಯಂತ್ರಣ ಸೆಂಟರ್‌ನಲ್ಲಿದ್ದ ಇಸ್ರೋ ವಿಜ್ಞಾನಿಗಳು ಸಂಭ್ರಮದಿಂದ ಕುಪ್ಪಳಿಸಿದರು.

Follow Us:
Download App:
  • android
  • ios