Asianet Suvarna News Asianet Suvarna News

ಭಾರೀ ಕಳ್ಳಾಟ: ಫೇಸ್‌ಬುಕ್ ಮೆಸೆಜ್ 10 ಸೆಂಟ್‌ಗೆ ಮಾರಾಟ!

ಫೇಸ್‌ಬುಕ್‌ನಲ್ಲಿ ಕಳ್ಳಾಟ ಆಡ್ತಿದ್ದಾರೆ ಹ್ಯಾಕರ್‌ಗಳು! ಫೇಸ್‌ಬುಕ್‌ ಗ್ರಾಹಕರಿಗೆ ಭಾರೀ ಶಾಕಿಂಗ್ ಸುದ್ದಿ! 120 ಮಿಲಿಯನ್ ಫೇಸ್‌ಬುಕ್ ಖಾತೆಗಳ ಖಾಸಗಿ ಮೆಸೇಜ್‌ಗಳ ಮಾರಾಟ! ಉಕ್ರೇನ್, ರಷ್ಯಾ, ಅಮೆರಿಕ, ಬ್ರಿಟನ್ ನಲ್ಲಿನ ಫೇಸ್‌ಬುಕ್ ಬಳಕೆದಾರರ ಮಾಹಿತಿ ಹ್ಯಾಕ್! ಪ್ರತಿ ಖಾತೆಯ ಮೆಸೇಜ್‌ಗೆ 10 ಸೆಂಟ್‌ಗಳಂತೆ ಮಾರಾಟ

Private Messages Of Facebook Users Leaked Online
Author
Bengaluru, First Published Nov 3, 2018, 8:48 PM IST

ಲಂಡನ್(ನ.3): ಫೇಸ್‌ಬುಕ್ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದಿದೆ.  ಹ್ಯಾಕರ್‌ಗಳ ಕೈಗೆ ಸುಮಾರು 120 ಮಿಲಿಯನ್ ಫೇಸ್‌ಬುಕ್ ಖಾತೆಗಳ ಖಾಸಗಿ ಮೆಸೇಜ್‌ಗಳನ್ನು ಮಾರಾಟ ಮಾಡಿದ್ದಾರೆ ಎಂದು ಬಿಬಿಸಿ ವರದಿ ಪ್ರಕಟಿಸಿದೆ. 

ಉಕ್ರೇನ್, ರಷ್ಯಾ, ಅಮೆರಿಕ, ಬ್ರಿಟನ್‌ನಲ್ಲಿನ ಫೇಸ್‌ಬುಕ್ ಬಳಕೆದಾರರ ಫೇಸ್‌ಬುಕ್ ಖಾಸಗಿ ಮೆಸೇಜ್‌ಗಳನ್ನು, ಹ್ಯಾಕರ್‌ಗಳು ಪ್ರತಿ ಖಾತೆಯ ಮೆಸೇಜ್‌ಗೆ 10 ಸೆಂಟ್ ಗಳಂತೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಈ ರೀತಿಯ ಒಟ್ಟು 81,000 ಖಾತೆಗಳ ಮೆಸೇಜ್‌ಗಳನ್ನು ಈಗಗಾಲೇ ಪ್ರಕಟ ಮಾಡಲಾಗಿದೆ.

ಸೆಪ್ಟೆಂಬರ್‌ನಲ್ಲಿ ಮೆಸೇಜ್‌ಗಳು ಹ್ಯಾಕ್ ಆಗಿರುವುದು ಬಹಿರಂಗವಾಗಿದ್ದು, ಫೇಸ್‌ಬುಕ್ ಮಾತ್ರ ಇದನ್ನು ನಿರಾಕರಿಸಿದೆ. ತನ್ನ ವ್ಯವಸ್ಥೆಯಲ್ಲಿ ಯಾವುದೇ ಲೋಪದೋಷಗಳೂ ಉಂಟಾಗಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. 

ಇದೇ ವೇಳೆ ಬ್ರೌಸರ್‌ಗಳಿಗೂ ಅನುಮಾನಾಸ್ಪದ ಎಕ್ಸ್ಟೆನ್ಷನ್‌ಗಳನ್ನು ತೆಗೆದುಹಾಕುವಂತೆ ಮನವಿ ಮಾಡಲಾಗಿದೆ ಎಂದು ಫೇಸ್‌ಬುಕ್ ಹೇಳಿದೆ. 

Follow Us:
Download App:
  • android
  • ios