Asianet Suvarna News Asianet Suvarna News

ಅಡುಗೆ ಮನೆಗೆ ಪ್ರೆಸ್ಟೀಜ್‌ ಬಲ; ಇದು ಹೊಸ ಮೋಷನ್‌ ಸೆನ್ಸಾರ್‌ ಕಾಲ!

  • ಅಡುಗೆ ಮನೆಯಿಂದ ಹೊಗೆ ಹೊರ ಹೋಗಲು ಹೊಸ ತಂತ್ರಜ್ಞಾನ
  • ಒಮ್ಮೆ ಕೈಯನ್ನು ಅತ್ತಿಂದಿತ್ತ ಚಲಿಸಿದರೆ ಸಾಕು, ಹೊಗೆ ಕ್ಲಿಯರ್
  • ಪ್ರೆಸ್ಟೀಜ್‌ ಕಂಪನಿಯು ಮೋಷನ್‌ ಸೆನ್ಸಾರ್‌ನ ಹೊಸ ಸಾಧನ
     
Prestige Introduces New Motion Censors For Kitchens
Author
Bengaluru, First Published Sep 21, 2019, 6:23 PM IST

ಅಡುಗೆ ಮಾಡುವಾಗ ಯಾವುದಾದರೂ ಪದಾರ್ಥ ತಳ ಹಿಡಿದರೆ ಹೊಗೆ ಮನೆ ತುಂಬಾ ಆವರಿಸಿಬಿಡುತ್ತೆ. ಹೊಗೆ ಹೊರ ಹೋಗಲು ಸಾಧ್ಯವಾಗದಂಥಾ ಸ್ಥಿತಿ ಅದು. 

ಇದರಿಂದ ಹೊರಬರಲು ಪ್ರೆಸ್ಟೀಜ್‌ ಕಂಪನಿಯು ಮೋಷನ್‌ ಸೆನ್ಸಾರ್‌ನ ಹೊಸ ಸಾಧನವನ್ನು ಪರಿಚಯಿಸಿದೆ. 

ಹೊಗೆ ತುಂಬಿದ ಅಡುಗೆ ಮನೆಯಲ್ಲಿ ಒಮ್ಮೆ ಕೈಯನ್ನು ಅತ್ತಿಂದಿತ್ತ ಚಲಿಸಿದರೆ ಸಾಕು. ಚಲನೆಯನ್ನು ಗ್ರಹಿಸಿ ತುಂಬಿದ್ದ ಹೊಗೆಯೆಲ್ಲಾ ಕ್ಲಿಯರ್‌ ಮಾಡುತ್ತೆ. 

ಇದನ್ನೂ ಓದಿ: ಮಾರುಕಟ್ಟೆಗೆ ಡೈಕಿನ್‌ನ ಹೊಸ ಏರ್‌ಕಂಡೀಶನರ್‌

ಕೋನೀಯ ಹೀರುವಿಕೆ ತಂತ್ರಜ್ಞಾನ, ಪದಾರ್ಥಗಳ ಹೊಗೆ, ಹಬೆ, ಘಾಟುಗಳನ್ನು ನೇರವಾಗಿ ಹೊರಗೆ ಹಾಕುತ್ತೆ. 

ಈ ಕಾರ್ಯಾಚರಣೆಗಾಗಿ ಇದರಲ್ಲಿ 1100ಎಂ3 ಸಾಮರ್ಥ್ಯದೊಂದಿಗೆ ಸ್ವಯಂಚಾಲಿತ ಶುದ್ಧೀಕರಣ ತಂತ್ರಜ್ಞಾನ, ಶಾಖ ನಿರೋಧಕ ಟ್ಯಾಂಪರ್ಡ್‌ ಗ್ಲಾಸ್‌, ಸದ್ದು ರಹಿತ ಕೆಲಸ ಮಾಡುವ ಉಪಕರಣ ಇದಾಗಿದೆ. ಜೀವಿತಾವಧಿ ವಾರಂಟಿ ಇದೆ.

ಆರಂಭಿಕ ಬೆಲೆ 31,995 ರು.

Follow Us:
Download App:
  • android
  • ios