Asianet Suvarna News Asianet Suvarna News

ಬೆಂಗಳೂರು ಒನ್, ಕರ್ನಾಟಕ ಒನ್‌ಗಳಲ್ಲಿ ಪೇಟಿಎಂ ಪಾವತಿ-ಪಡೆಯಿರಿ ಕ್ಯಾಶ್‌ಬ್ಯಾಕ್!

ಇನ್ಮುಂದೆ ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್‌ಗಳಲ್ಲಿ ಪೇಟಿಎಂ ಮೂಲಕ ಬಿಲ್ ಪಾವತಿಸಲು ಸಾಧ್ಯವಿದೆ. ಇಷ್ಟೇ ಅಲ್ಲ ಶೇಕಡಾ 10 ರಷ್ಟು ಹಣವನ್ನ ಕ್ಯಾಶ್ ಬ್ಯಾಕ್ ಪಡೆಯುವ ಆಫರ್ ಕೂಡ ಇದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
 

Paytm ties up with 2 Bengaluru One and Karnataka One in Karnataka
Author
Bengaluru, First Published Nov 10, 2018, 6:23 PM IST

ಬೆಂಗಳೂರು(ನ.10): ಬೆಂಗಳೂರು ಮಹಾನಗರದ ಮತ್ತು ರಾಜ್ಯದ 17 ನಗರಗಳ ಬಳಕೆದಾರರು ಇನ್ನುಮುಂದೆ ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ಪೇಟಿಎಂ ಮೂಲಕ ತಮ್ಮ ಪಾವತಿಗಳನ್ನು ಮಾಡಬಹುದು. 

ಕನಿಷ್ಠ 200 ರೂ.ಗಳನ್ನು ಪಾವತಿಸುವ ಗ್ರಾಹಕರಿಗೆ ಆರಂಭಿಕ ಆಕರ್ಷಣೆಯಾಗಿ ಶೇ.10ರಷ್ಟು ಹಣವನ್ನು ಪೇಟಿಎಂ ಹಿಂದಿರುಗಿಸಲಿದೆ(ಕ್ಯಾಶ್ ಬ್ಯಾಕ್). ಇದಕ್ಕಾಗಿ ಪೇಟಿಎಂನ ಮಾಲೀಕತ್ವವನ್ನು ಹೊಂದಿರುವ ಒನ್97 ಕಮ್ಯುನಿಕೇಷನ್ಸ್ ಲಿಮಿಟೆಡ್ ಸಂಸ್ಥೆಯು ಕರ್ನಾಟಕ ಸರಕಾರದ ಅಂಗಸಂಸ್ಥೆಗಳಾದ ಇಡಿಸಿಎಸ್ ಮತ್ತು ಡಿಪಿಎಆರ್ (ಇ-ಆಡಳಿತ) ಜತೆ ಒಡಂಬಡಿಕೆ ಮಾಡಿಕೊಂಡಿದೆ.

ರಾಜ್ಯ ಸರಕಾರವು ಸಾರ್ವಜನಿಕರಿಗೆ ಒಂದೇ ಸ್ಥಳದಲ್ಲಿ ಅನೇಕ ಸೇವೆಗಳು ಸುಲಭವಾಗಿ ಸಿಗಬೇಕು ಎನ್ನುವ ಆಶಯದಿಂದ ಬೆಂಗಳೂರಿನ ಅನೇಕ ಕಡೆಗಳಲ್ಲಿ `ಬೆಂಗಳೂರು ಒನ್' ಕೇಂದ್ರಗಳನ್ನು ಮತ್ತು ರಾಜ್ಯದ 17 ನಗರಗಳಲ್ಲಿ ಒಟ್ಟು 197 `ಕರ್ನಾಟಕ ಒನ್' ಕೇಂದ್ರಗಳನ್ನು ತೆರೆದಿದೆ.

ಇಡಿಸಿಎಸ್ ಮತ್ತು ಡಿಪಿಎಆರ್ ಜತೆಗಿನ ಈ ಒಪ್ಪಂದದಿಂದ ನಮಗೆ ಸಂತೋಷವಾಗಿದೆ. ನಾವು ನಮ್ಮ ಗ್ರಾಹಕರಿಗೆ ವಿಶ್ವ ದರ್ಜೆಯ ಸೇವೆಗಳನ್ನು ಒದಗಿಸಲಿದ್ದೇವೆ ಎಂದು ಪೇಟಿಎಂ ಸಂಸ್ಥೆಯ ಸಿಒಒ ಕಿರಣ್ ವಸಿರೆಡ್ಡಿ ಹೇಳಿದ್ದಾರೆ.  ಈ ಸಹಭಾಗಿತ್ವವು ಡಿಜಿಟಲ್ ಇಂಡಿಯಾದ ಗುರಿಗೆ ಪೂರಕವಾಗಿದೆ. ಡಿಜಿಟಲ್ ಪಾವತಿಗಳ ಮೂಲಕ ಜನರನ್ನು ಸಬಲೀಕರಣಗೊಳಿಸಲಾಗುವುದು ಎಂದು  ಇಡಿಸಿಎಸ್ ನಿರ್ದೇಶಕ ಡಾ.ಸುನೀಲ್ ಪವಾರ್  ಹೇಳಿದ್ದಾರೆ.
 

Follow Us:
Download App:
  • android
  • ios