Asianet Suvarna News Asianet Suvarna News

ಮೊಬೈಲ್ ಬಳಿಕ ಟಿವಿ ಕ್ಷೇತ್ರಕ್ಕೆ Oneplus, 55 ಇಂಚಿನ 4K QLED TV ಮಾರುಕಟ್ಟೆಗೆ

ಮೊಬೈಲ್ ಕ್ಷೇತ್ರದಲ್ಲಿ ತನ್ನದೇ ಆದ ಮಾರುಕಟ್ಟೆ ಹೊಂದಿರುವ Oneplus ಕಂಪನಿಯು ಇದೀಗ ಟಿವಿ ಮಾರುಕಟ್ಟೆಗೂ ಲಗ್ಗೆಯಿಟ್ಟಿದೆ. Oneplus Q1 ಮತ್ತು Oneplus Q1 Pro ಎಂಬ ಎರಡು ವಿಧದ ಟೀವಿಗಳು ಬಿಡುಗಡೆಯಾಗಿದ್ದು ಈ ಟಿವಿಯ ವಿಶೇಷತೆಗಳೇನು..? ಬೆಲೆ ಎಷ್ಟು..? ಎಂಬೆಲ್ಲಾ ಕುತೂಹಲಗಳಿಗೆ ಇಲ್ಲಿದೆ ನೋಡಿ ಉತ್ತರ...

Oneplus launched 55 inches 4K QLED TV in India
Author
New Delhi, First Published Sep 27, 2019, 3:57 PM IST

ನವದೆಹಲಿ[ಸೆ.27] ಇತ್ತೀಚೆಗೆ ಸ್ಮಾರ್ಟ್‌ಫೋನ್‌ ಮತ್ತು ಟಿವಿಗಳ ನಡುವೆ ಗಾತ್ರದ ಹೊರತಾಗಿ ಹೆಚ್ಚಿನ ವ್ಯತ್ಯಾಸವಿಲ್ಲ. ಮೊಬೈಲ್ ಫೋನ್ ಕಂಪನಿಗಳು ಈಗ ಟಿವಿ ಮಾರುಕಟ್ಟೆಗೆ ಕಾಲಿಟ್ಟಿವೆ. ಪ್ರೀಮಿಯರ್ ಮೊಬೈಲ್ ಫೋನ್ ಗಳಿಗೆ ಪ್ರಸಿದ್ಧವಾಗಿರುವ Oneplus ತನ್ನ ಮೊತ್ತಮೊದಲ ಟಿವಿಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ನವದೆಹಲಿಯಲ್ಲಿ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 2 ನಮೂನೆಯ ಟಿವಿಗಳನ್ನು ಕಂಪನಿಯು ಬಿಡುಗಡೆ ಮಾಡಿತು. ಪಿಕ್ಚರ್ ಕ್ವಾಲಿಟಿ, ಸೌಂಡ್ ಕ್ವಾಲಿಟಿ ಮತ್ತು ವಿಭಿನ್ನ ವಿನ್ಯಾಸವುಳ್ಳ, ಯೂಸರ್ ಫ್ರೆಂಡ್ಲಿ ನೇವಿಗೇಶನ್ ಇರುವ Oneplus Q1 ಮತ್ತು Oneplus Q1 Pro  ಎಂಬ ಎರಡು ವಿಧದ ಟಿವಿಗಳು ಬಿಡುಗಡೆಯಾಗಿವೆ.

ಭಾರತೀಯ ಬಳಕೆದಾರರಿಗೆ ಸುಗ್ಗಿ, ಆಕರ್ಷಕ ಫೀಚರ್‌ಗಳುಳ್ಳ Oneplus 7T ಬಿಡುಗಡೆ!

ಸುತ್ತಮುತ್ತಲು ಬೆಳಕು ಹೇಗೇ ಇದ್ದರೂ, ಲೇಟೆಸ್ಟ್ ಡಿಸ್ಪ್ಲೇ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಲಾದ ಈ ಟಿವಿ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಲ್ಲ. ಪ್ರತಿ ಸೆಕೆಂಡ್‌ಗೆ 60 ಫ್ರೇಮ್‌ಗಳನ್ನು ಇದು ಹೊಂದಿದೆ.

ಡಾಲ್ಬಿ ವಿಶುವಲ್ ತಂತ್ರಜ್ಞಾನದ ಜೊತೆಗೆ ಉತ್ತಮ ಸೌಂಡ್ ಅನುಭವ ನಿಡುವಂತಾಗಲು ಒಟ್ಟು ಎಂಟು ಸ್ಪೀಕರ್‌ಗಳನ್ನು ಹೊಂದಿರುವ ಸ್ಲೈಡಿಂಗ್ ಸೌಂಡ್‌ಬೋರ್ಡ್ ಇದರ ಪ್ರಮುಖ ಆಕರ್ಷಣೆ.  ಆ್ಯಂಡ್ರಾಯಿಡ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ಟಿವಿಗಳು ಗೇಮಿಂಗ್‌ಗಾಗಿಯೂ ಸೈ.

ಒನ್‌ಪ್ಲಸ್ ಮೊಬೈಲ್ ಖರೀದಿಸುವುದು ಇನ್ಮುಂದೆ ಸುಲಭ; ಇಲ್ಲಿಗೆ ಹೋದರೆ ಇನ್ನೂ ಲಾಭ!

ರಿಮೋಟ್ ಎಂಬ ಮಾಯೆ!

ಒನ್‌ಪ್ಲಸ್ ಕಂಪನಿಯು ರಿಮೋಟ್‌ ಕಂಟ್ರೋಲ್‌ಗೆ ಹೊಸ ಭಾಷ್ಯ ಬರೆದಿದೆ ಎಂದರೆ ತಪ್ಪಾಗಲಾರದು. ಇತರ ಸಾಂಪ್ರದಾಯಿಕ ರಿಮೋಟ್‌ಗಳಿಗೆ ಗುಡ್ ಬೈ ಹೇಳಿದೆ. ಹೊಸ ಸ್ಮಾರ್ಟ್‌ ರಿಮೋಟ್ ಕಂಟ್ರೋಲ್. ನೋಡಲು ಸಣ್ಣದಾಗಿರುವ, ಬ್ಯಾಟರಿ ಅವಶ್ಯಕತೆ ಇಲ್ಲದ, ನೊಡಲು ಬಹಳ ಸುಂದರವಾಗಿರುವ ರಿಮೋಟ್ ಪ್ರಮುಖ ಆಕರ್ಷಣೆ.

ವಾಟ್ಸಪ್‌ನಿಂದ 4 ಹೊಸ ಫೀಚರ್; ಬಳಕೆದಾರರಿಗೆ ಯಾವುದಕ್ಕೂ ಇನ್ನಿಲ್ಲ ಬೇಜಾರ್!

ಮೊಬೈಲ್‌ನಲ್ಲಿ ಒನ್‌ಪ್ಲಸ್ ಕನೆಕ್ಟ್ ಇದ್ದರೆ ಸಾಕು, ಮೊಬೈಲ್‌ ಫೋನೇ ರಿಮೋಟ್ ಆಗುತ್ತೆ. ಅದರ ಮೂಲಕವೇ ಎಲ್ಲವನ್ನೂ ನಿಯಂತ್ರಿಸಬಹುದು. ಗೂಗಲ್ ಅಸಿಸ್ಟೆಂಟ್, ಅಲೆಕ್ಸಾ, ಇತರ  ಆ್ಯಪ್ ಗಳಿಗೆ ಕ್ವಿಕ್ ಆ್ಯಕ್ಸೆಸ್, ಮೊಬೈಲ್ ಗೆ ಕರೆ ಬಂದರೆ ಸ್ವಯಂ ಮೌನಕ್ಕೆ ಜಾರುವ ಟಿವಿ, ಮೊಬೈಲ್‌ ನಲ್ಲೇ ಟಿವಿಯ ಸ್ಕ್ರೀನ್‌ ಶಾಟ್ ತೆಗೆಯುವ ಸೌಲಭ್ಯ ವಿಶೇಷ ಆಕರ್ಷಣೆಗಳು.

55  ಇಂಚಿನ Oneplus Q1 ಟಿವಿ ಬೆಲೆ 69,900 ರೂ. ಮತ್ತು Oneplus Q1 Pro  ಟಿವಿ ಬೆಲೆ 99,900  ರೂ. ಆಗಿದೆ. ಅಮೆಜಾನ್‌ನಲ್ಲಿ ಸೆ. 28 ರಿಂದ ಲಭ್ಯವಿದೆ.

Follow Us:
Download App:
  • android
  • ios