Asianet Suvarna News Asianet Suvarna News

ಮಂಗಳ ಗ್ರಹಕ್ಕೆ ಕಾಲಿಡಲು 1 ಲಕ್ಷಕ್ಕೂ ಹೆಚ್ಚು ಭಾರತೀಯರ ನೋಂದಣಿ

ಮೊದಲ ಸ್ಥಾನದಲ್ಲಿ ಅಮೆರಿಕಾದ 6,76,773 ಮಂದಿ, 2ನೇ ಸ್ಥಾನದಲ್ಲಿ ಚೀನಾದ ದೇಶದವರಿದ್ದು ಒಟ್ಟು 2,62,752 ಪ್ರವಾಸಿಗರಿದ್ದಾರೆ.

One lakh Indians book ticket for Mars

ಮುಂಬೈ(ನ.09): ನಾಸಾ ಸಂಸ್ಥೆ ಆಯೋಜಿಸಿರುವ ಮಂಗಳನ ಗ್ರಹ ಅಂತರಿಕ್ಷ ಪ್ರವಾಸಕ್ಕೆ ಭಾರತದಿಂದ 1,38,889 ಮಂದಿ ನೋಂದಾಯಿಸಿದ್ದಾರೆ. ಅಮೆರಿಕಾದ ಅಂತರಿಕ್ಷ ಸಂಸ್ಥೆ ಆಯೋಜಿಸಿರುವ ಮಂಗಳಗ್ರಹ ಪ್ರವಾಸ 2018, ಮೇ 5 ರಂದು ಉದ್ಘಾಟನೆಗೊಳ್ಳಲಿದ್ದು, ಪ್ರವಾಸಕ್ಕೆ ನೋಂದಾಯಿಸಿರುವವರಿಗೆ ಬೋರ್ಡಿ'ಗ್ ಪಾಸ್'ಗಳನ್ನು ಆನ್'ಲೈನ್ ಮೂಲಕ ವಿತರಿಸುತ್ತದೆ.

ಮಂಗಳ ಪ್ರವಾಸಕ್ಕೆ ತೆರಳುವವರಲ್ಲಿ ಭಾರತೀಯರು 3ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಅಮೆರಿಕಾದ 6,76,773 ಮಂದಿ, 2ನೇ ಸ್ಥಾನದಲ್ಲಿ ಚೀನಾದ ದೇಶದವರಿದ್ದು ಒಟ್ಟು 2,62,752 ಪ್ರವಾಸಿಗರಿದ್ದಾರೆ. ಈ ಯಾನಕ್ಕೆ ವಿಶ್ವಾದಾದ್ಯಂತ 24,29,807 ಮಂದಿ ನೋಂದಾಯಿಸಿದ್ದಾರೆ. ಒಟ್ಟು 720 ದಿನಗಳ ಯೋಜನೆಯಾಗಿದ್ದು, ಅಂತರಿಕ್ಷ ಯಾನಿಗಳು ಮಂಗಳ ಗ್ರಹದ ಬಳಿ ನವೆಂಬರ್ 26, 2018 ರಂದು ಇಳಿಯುವ ಸಾಧ್ಯತೆಯಿದೆ.

ನಾಸಾ ಈ ಯೋಜನೆಗಾಗಿ ಇನ್‌ಸೈಟ್ (ಇಂಟೀರಿಯರ್ ಎಕ್ಸ್‌ಪ್ಲೋರೇಷನ್ ಯೂಸಿಂಗ್ ಸಿಸ್ಮಿಕ್ ಇನ್ವೆಸ್ಟಿಗೇಷನ್, ಜಿಯೋಡೆಸಿ ಆ್ಯಂಡ್ ಹೀಟ್ ಟ್ರಾನ್ಸ್‌ಪೋರ್ಟ್) ವಿಶೇಷ ವಿಮಾನದ ಮೂಲಕ ಪ್ರಯಾಣಿಕರನ್ನು ಮಂಗಳನತ್ತ ರವಾನಿಸುತ್ತದೆ.  ಈ ಯೋಜನೆಗೆ ಹೆಸರು ನೊಂದಾಯಿಸುವ ಪ್ರಕ್ರಿಯೆ ಕಳೆದ ವಾರ ಮುಕ್ತಾಯವಾಗಿದ್ದು, ಕೊನೆಯ ದಿನಾಂಕದಂದು ಬರುವ ಪ್ರಸ್ತಾವಗಳನ್ನು ತಿರಸ್ಕರಿಸಲಾಗುತ್ತದೆ ಎಂದು ನಾಸಾ ತಿಳಿಸಿದೆ. ಪ್ರವಾಸದಲ್ಲಿ ಏಕೈಕ ಕೆಂಪು ಗ್ರಹವಾದ ಮಂಗಳದ ವಿವಿಧ ಅಂಶಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ.

Follow Us:
Download App:
  • android
  • ios