Asianet Suvarna News Asianet Suvarna News

ಮಂಗಳನ ಅಂಗಳದಲ್ಲಿ ಜೀವಿಗಳಿವೆ: ನಾಸಾ ವಿಜ್ಞಾನಿಯ ಅಚ್ಚರಿಯ ಘೋಷಣೆ!

ಮಂಗಳ ಗ್ರಹದಲ್ಲಿ ಜೀವಿಗಳಿವೆ ಎಂದ ನಾಸಾ ಮಾಜಿ ವಿಜ್ಞಾನಿ| ‘ಸೂಕ್ಷ್ಮಾಣು ಜೀವಿಗಳ ಇರುವಿಕೆ ಪತ್ತೆ ಹಚ್ಚಿದ್ದ ವೈಕಿಂಗ್ ನೌಕೆ’| ‘ಗ್ರಹದ ಜೈವಿಕ ರಚನೆಯ ಕುರಿತಾದ ಸಂಶೋಧನೆ ವೇಳೆ  ಸೂಕ್ಷ್ಮಾಣು ಜೀವಿಗಳು ಪತ್ತೆ’| ‘ಪ್ರಯೋಗದಲ್ಲಿ ಜೈವಿಕ ಅಂಶಗಳ ಪ್ರಸ್ತುತತೆಯ ಕುರಿತು ಸಕಾರಾತ್ಮಕ ಫಲಿತಾಂಶ’| ನಾಸಾ ಮಾಜಿ ವಿಜ್ಞಾನಿ ಡಾ. ಗಿಲ್ಬರ್ಟ್ ಲಿವಿನ್ ಸ್ಫೋಟಕ ಮಾಹಿತಿ|

NASA Scientist Makes Stunning Claims Life  Found on Mars
Author
benga, First Published Oct 17, 2019, 7:24 PM IST

ವಾಷಿಂಗ್ಟನ್(ಅ.17): ಮಂಗಳ ಗ್ರಹ ಜೀವಿಗಳ ಆವಾಸ ಸ್ಥಾನವಾಗಿದ್ದು, ನಾಸಾ ಉದ್ದೇಶಪೂರ್ವಕವಾಗಿ ಈ ಸತ್ಯವನ್ನು ,ಮುಚ್ಚಿಟ್ಟಿದೆ ಎಂದು ನಾಸಾದ ಮಾಜಿ ವಿಜ್ಷಾನಿ ಡಾ. ಗಿಲ್ಬರ್ಟ್ ಲಿವಿನ್ ಹೇಳಿದ್ದಾರೆ.

1970ರಲ್ಲಿ ನಾಸಾದ ವೈಕಿಂಗ್ ಮಾರ್ಸ್ ಆರ್ಬಿಟರ್ ನೌಕೆ ಮಂಗಳ ಗ್ರಹದ ಅಧ್ಯಯನ ನಡೆಸಿದಾಗ, ಮಂಗಳ ಗ್ರಹದಲ್ಲಿ ಸೂಕ್ಷ್ಮಾಣು ಜೀವಿಗಳು ಪತ್ತೆಯಾಗಿದ್ದು ನಿಜ ಎಂದು ಡಾ. ಗಿಲ್ಬರ್ಟ್ ಹೇಳಿದ್ದಾರೆ.

ಈ ಕುರಿತು ಅಮೆರಿಕನ್ ಸೈಂಟಿಫಿಕ್ ಪೋಸ್ಟ್’ಗೆ ಬ್ಲಾಗ್ ಬರೆದಿರುವ ಗಿಲ್ಬರ್ಟ್, ಗ್ರಹದ ಜೈವಿಕ ರಚನೆಯ ಕುರಿತಾದ ಸಂಶೋಧನೆ ವೇಳೆ ಸೂಕ್ಷ್ಮಾಣು ಜೀವಿಗಳ ಇರುವಿಕೆ ಕುರಿತು ಸಕಾರಾತ್ಮಕ ಫಲಿತಾಂಶ ಬಂದಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

ಮಂಗಳ ಗ್ರಹದ ಮಣ್ಣಿನ ಪ್ರಯೋಗ ನಡೆಸಿದ ವೈಕಿಂಗ್ ನಾಲ್ಕು ಬಾರಿ ಜೈವಿಕ ಅಂಶಗಳ ಪ್ರಸ್ತುತತೆಯ ಕುರಿತು ಸಕಾರಾತ್ಮಕ ಫಲಿತಾಂಶ ಹೊರ ಬಂದಿದೆ ಎಂದು ಗಿಲ್ಬರ್ಟ್ ತಿಳಿಸಿದ್ದಾರೆ.

ನಾಸಾದ ವೈಕಿಂಗ್ ಸರಣಿ ನೌಕೆ 1970-76ರವೆರೆಗೆ ಮಂಗಳ ಗ್ರಹದ ಅಧ್ಯಯನ ನಡೆಸಿದ್ದು, ಅದಾದ ಮೇಲೂ ನಾಸಾದ ಹಲವು ನೌಕೆಗಳು ಮಂಗಳನ ಅಂಗಳ ಮುಟ್ಟಿವೆ.  ಆದರೆ ವೈಕಿಂಗ್ ಸಮಯದಲ್ಲೇ ಮಂಗಳ ಗ್ರಹ ಸೂಕ್ಷ್ಮಾಣು ಜೀವಿಗಳ ಆವಾಸ ಸ್ಥಾನ ಎಂಬ ಸತ್ಯವನ್ನು ನಾಸಾ ತಿಳಿದಿತ್ತು ಎಂಬುದು ಡಾ. ಗಿಲ್ಬರ್ಟ್ ವಾದವಾಗಿದೆ.

Follow Us:
Download App:
  • android
  • ios