Asianet Suvarna News Asianet Suvarna News

ಮೋದಿ ಸರ್ಕಾರದ ಹೊಸ ಯೋಜನೆ- ವಾಹನಗಳಿಗೆ ಹಸಿರು ನಂಬರ್ ಪ್ಲೇಟ್!

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಾಹನಗಳಿಗೆ ಹೊಸ ನಂಬರ್ ಪ್ಲೇಟ್‌ ನಿಯಮ ಜಾರಿಗೆ ತಂದಿದೆ. ನೂತನ ಯೋಜನೆ ಪ್ರಕಾರ ಇನ್ಮುಂದೆ ಹಸಿರು ಬಣ್ಣದ ನಂಬರ್ ಪ್ಲೇಟ್ ಅಳವಡಿಸಲಾಗುತ್ತೆ. ಯಾವ ವಾಹನಗಳಿಗೆ ಹಸಿರು ನಂಬರ್ ಪ್ಲೇಟ್ ಅಳವಡಿಸಲಾಗುತ್ತೆ? ಇಲ್ಲಿದೆ ವಿವರ.

Modi Government introduced Green Number plate for Electrical Vehicle
Author
Bengaluru, First Published Sep 13, 2018, 4:06 PM IST

ನವದೆಹಲಿ(ಸೆ.13): ತೈಲ ಬೆಲೆ ಏರಿಕೆ, ಪರಿಸರ ಮಾಲಿನ್ಯ ಸೇರಿದಂತೆ ಹಲವು ಸಮಸ್ಯೆಗಳಿಗೆ ಮುಕ್ತಿ ಹಾಡಲು ಕೇಂದ್ರ ಸರ್ಕಾರ ಎಲೆಕ್ಟ್ರಿಕಲ್ ವಾಹನಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೋಲ್- ಡೀಸೆಲ್ ವಾಹನಗಳ ಬದಲಾಗಿ ಎಲೆಕ್ಟ್ರಿಕಲ್ ಕಾರು ಹಾಗೂ ಬೈಕ್‌ಗಳ ಬಳಕೆ ಹೆಚ್ಚಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ.

Modi Government introduced Green Number plate for Electrical Vehicle

ಭಾರತದ ಎಲೆಕ್ಟ್ರಿಕಲ್ ವಾಹನಗಳಿಗೆ ಹಸಿರು ನಂಬರ್ ಪ್ಲೇಟ್ ನಿಯಮ ಜಾರಿಗೆ ತರಲಾಗಿದೆ. ಸದ್ಯ ಖಾಸಗಿ ಕಾರು ಹಾಗೂ ಬೈಕ್ ಬಳಿ ಹಾಗೂ ಕಮರ್ಶಿಯಲ್ ವಾಹನಗಳಿಗೆ ಹಳದಿ ನಂಬರ್ ಪ್ಲೇಟ್ ಜಾರಿಯಲ್ಲಿದೆ. ಆದರೆ ಇದೀಗ ಎಲೆಕ್ಟ್ರಿಕಲ್ ವಾಹನಗಳಿಗೆ ಹಸಿರು ನಂಬರ್ ಪ್ಲೇಟ್ ನಿಯಮವನ್ನ ಕೇಂದ್ರ ಸರ್ಕಾರ ಜಾರಿಗೆ ತಂದಿದೆ.

 

Modi Government introduced Green Number plate for Electrical Vehicle

ಕೇಂದ್ರ ಸರ್ಕಾರ ನೂತನ ಯೋಜನೆ ಪ್ರಕಾರ ಮಹೀಂದ್ರ ತನ್ನ ವೆರಿಟೋ ಎಲೆಕ್ಟ್ರಿಕಲ್ ವಾಹನಗಳಿಗೆ ಹಸಿರು ನಂಬರ್ ಪ್ಲೇಟ್ ಅಳವಡಿಸಿದೆ.  ಹಸಿರು ಬಣ್ಣ ಪರಿಸರಕ್ಕೆ ಪೂರಕ ಹಾಗೂ ಮಾಲಿನ್ಯ ರಹಿತದ ಸಂಕೇತ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ ಗಡ್ಕರಿ ಹೇಳಿದ್ದಾರೆ.

Modi Government introduced Green Number plate for Electrical Vehicle

ವಿಶೇಷ ಅಂದರೆ ನೂತನ ಎಲೆಕ್ಟ್ರಿಕಲ್ ವಾಹನಗಳಾದ ಕ್ಯಾಬ್, ಆಟೋ ರಿಕ್ಷಾ, ಬಸ್ ಸೇರಿದಂತೆ ಎಲ್ಲಾ ವಾಣಿಜ್ಯ ವ್ಯವಹಾರಕ್ಕೆ ಉಪಯೋಗಿಸುವ ವಾಹನಗಳಿಗೆ ಉಚಿತ ಪರವಾನಗಿ ನೀಡಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರ ಎಲೆಕ್ಟ್ರಿಕಲ್ ವಾಹನಗಳನ್ನ ಉತ್ತೇಜನ ನೀಡುತ್ತಿದೆ.

ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಕಡಿಮೆ ಬೆಲೆಯ ಟಾಟಾ ಟಿಯಾಗೋ JTP ಬಿಡುಗಡೆ!

Follow Us:
Download App:
  • android
  • ios