Asianet Suvarna News Asianet Suvarna News

ಲಾವಾ ಆಗುತ್ತಿದೆ ನಂ 1 ಮೇಡ್ ಇನ್ ಇಂಡಿಯಾ ಫೋನ್

ಕತ್ತಲಿನಲ್ಲೂ ಚಿತ್ರಗಳು ಹೆಚ್ಚು ಸ್ಪಷ್ಟವಾಗಿರುತ್ತವೆ. ವೃತ್ತಿಪರ ಕ್ಯಾಮರಾಗಳಲ್ಲಿ ಕ್ಲಿಕ್ಕಿಸಿದರೆ ಸಿಗುವ ಬೊಕೆ ಎಫೆಕ್ಟ್ ಈ ಮೊಬೈಲ್‌ನಲ್ಲಿ ಇರುವುದು ವಿಶೇಷ. ಈ ಫೀಚರ್, ಐಫೋನ್ 8, ಒನ್‌ಪ್ಲಸ್ ಫೈವ್‌ನಂಥ ಹೈ ಎಂಡ್ ಮೊಬೈಲ್‌ಗಳಲ್ಲಿ ಸದ್ಯ ಲಭ್ಯ. ಅಲ್ಲದೇ, ಇದಕ್ಕಿಂತ ತುಸು ಕಡಿಮೆ ಬೆಲೆಯ ಝಡ್ ಶ್ರೇಣಿ ಲಾವಾ ಫೋನುಗಳಲ್ಲಿ ಡ್ಯುಯಲ್ ಕ್ಯಾಮರಾ ಇಲ್ಲದಿದ್ದರೂ ಇದೇ ಬೊಕೆ ಎಫೆಕ್ಟ್ ನೀಡುವ ಸಾಫ್ಟ್'ವೇರ್ ಅಳವಡಿಸಲಾಗಿದೆ. ಬಹುತೇಕ ಹೈಎಂಡ್ ಫೋನುಗಳಲ್ಲಿ ಮಾತ್ರ ಬೆರಳಚ್ಚು ತಂತ್ರಜ್ಞಾನ ಇರುತ್ತದೆ. ಆದರೆ, ಲಾವಾ ತನ್ನ ಹೊಸ ಶ್ರೇಣಿಯ ಫೋನುಗಳಲ್ಲಿ ಕಡಿಮೆ ಬೆಲೆಗೆ ಅದನ್ನು ನೀಡುತ್ತಿದೆ.

Lava No 1 Made in india mobile

ಭಾರತ ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಮೊಬೈಲ್ ಫೋನ್ ಮಾರುಕಟ್ಟೆ. ಈ ಮಾರುಕಟ್ಟೆ ಇನ್ನಷ್ಟು ಹಿಗ್ಗುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ವಿಶ್ವದ ನಂ.1 ಮೊಬೈಲ್ ಮಾರುಕಟ್ಟೆ ಆಗಲಿದೆ ನಮ್ಮ ದೇಶ. ಮೇರಾ ದೇಶ್ ಮಹಾನ್!

ಆದರೆ, ನಮ್ಮ ಮಹಾನ್ ದೇಶದಲ್ಲಿ ಹೆಚ್ಚು ಚಲಾವಣೆ ಆಗುತ್ತಿರುವ ಮೊಬೈಲುಗಳು ಚೀನಾ ಮಾಲು ಎನ್ನುವುದೇ ವಿಪರ್ಯಾಸ. ದುಡ್ಡು ಇರುವವರು ದುಬಾರಿ ಐಫೋನ್, ಸ್ಯಾಮ್‌ಸಂಗ್ ಕೊಂಡರೆ 10000 ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಕೊಳ್ಳುವವರ ಚಿತ್ತ ಚೀನಾ ಫೋನುಗಳತ್ತ. ಆದರೆ, ಈ ಫೋನುಗಳು ಸುರಕ್ಷಿತ ಅಲ್ಲ. ಬ್ಯಾಟರಿ ಸ್ಫೋಟವಾಗುತ್ತದೆ. ಈ ಫೋನುಗಳ ಡೇಟಾ ಸೆಂಟರ್ ಇರುವುದು ಚೀನಾದಲ್ಲಿ. ಈ ಮೂಲಕ ಚೀನಾ ಭಾರತದ ಮಾಹಿತಿ ಕಣಜದ ಮೇಲೆ ಕಣ್ಣಿಟ್ಟಿರುತ್ತದೆ ಎಂಬಿತ್ಯಾದಿ ಆರೋಪಗಳ ನಡುವೆ ಭಾರತೀಯ ಗ್ರಾಹಕರ ಕಣ್ಣು ಇದೀಗ ಭಾರತೀಯ ಮೊಬೈಲ್ ಕಂಪನಿಗಳತ್ತ ಹೊರಳಿದೆ. ಮೈಕ್ರೋಮ್ಯಾಕ್ಸ್ ಬಿಟ್ಟರೆ ಅತಿ ಹೆಚ್ಚು ಜನಮೆಚ್ಚುಗೆ ಗಳಿಸುತ್ತಿರುವ ಭಾರತೀಯ ಮೊಬೈಲ್ ಬ್ರಾಂಡ್ ‘ಲಾವಾ’.

ಧೋನಿ ಬ್ರಾಂಡ್ ಅಂಬಾಸಡರ್ ಆಗಿರುವ ಈ ಲಾವಾ ಮೊಬೈಲ್‌ಗಳು ಈಗಾಗಲೇ, ತಮಿಳುನಾಡು, ಗುಜರಾತ್, ರಾಜಸ್ಥಾನ್ ಮತ್ತು ಜಮ್ಮು-ಕಾಶ್ಮೀರದಲ್ಲಿ ಬಹು ಜನಪ್ರಿಯ. ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಲಾವಾ ಅತಿ ಹೆಚ್ಚು ಮಾರಾಟವಾಗುವ ಸ್ಮಾರ್ಟ್ ಫೋನ್‌ಗಳು. ಇದೀಗ ನಾಲ್ಕು ಹೊಚ್ಚ ಹೊಸ ಝಡ್ ಶ್ರೇಣಿಯ ಫೋನ್‌ಗಳನ್ನು ಲಾವಾ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಇವು ಹೈ-ಎಂಡ್ ಸ್ಮಾರ್ಟ್ ಫೋನುಗಳಲ್ಲಿರುವ ಬಹುತೇಕ ಎಲ್ಲ ಅನುಕೂಲಗಳನ್ನೂ ಹೊಂದಿವೆ. ಗುಣಮಟ್ಟದಲ್ಲಿ ಭಾರತೀಯ ಮೊಬೈಲ್‌ಗಳಲ್ಲೇ ಇದು ಶ್ರೇಷ್ಠ ಎಂದು ಲಾವಾ ಹೇಳಿಕೊಂಡಿದೆ. ಲಾವಾ ತನ್ನ ಉತ್ಪನ್ನದ ಗುಣಮಟ್ಟದ ಬಗ್ಗೆ ಎಷ್ಟು ಆತ್ಮ ವಿಶ್ವಾಸ ಹೊಂದಿದೆ ಎಂದರೆ - ಮನಿಬ್ಯಾಕ್ ಚಾಲೆಂಜ್ ಯೋಜನೆಯನ್ನು ಘೋಷಿಸಿದೆ. ಒಂದುವೇಳೆ ನೀವು ಕೊಂಡ ಲಾವಾ ಫೋನುಗಳ ಗುಣಮಟ್ಟ ನಿಮಗೆ ಇಷ್ಟವಾಗಲಿಲ್ಲ ಎಂದರೆ ಪೈಸಾ ವಾಪಸ್! ಝಡ್‌90 ಶ್ರೇಣಿಯ ಮೊಬೈಲ್‌ಗಳಂತೂ ಎರಡು ಕ್ಯಾಮರಾಗಳ ತಂತ್ರಜ್ಞಾನ ಹೊಂದಿದೆ.

ಹಲವು ಫೀಚರ್'ಗಳು

ಇದರಿಂದ ಫೋಟೋ ಗುಣಮಟ್ಟ ಉತ್ಕೃಷ್ಟವಾಗಿರುತ್ತದೆ. ಕತ್ತಲಿನಲ್ಲೂ ಚಿತ್ರಗಳು ಹೆಚ್ಚು ಸ್ಪಷ್ಟವಾಗಿರುತ್ತವೆ. ವೃತ್ತಿಪರ ಕ್ಯಾಮರಾಗಳಲ್ಲಿ ಕ್ಲಿಕ್ಕಿಸಿದರೆ ಸಿಗುವ ಬೊಕೆ ಎಫೆಕ್ಟ್ ಈ ಮೊಬೈಲ್‌ನಲ್ಲಿ ಇರುವುದು ವಿಶೇಷ. ಈ ಫೀಚರ್, ಐಫೋನ್ 8, ಒನ್‌ಪ್ಲಸ್ ಫೈವ್‌ನಂಥ ಹೈ ಎಂಡ್ ಮೊಬೈಲ್‌ಗಳಲ್ಲಿ ಸದ್ಯ ಲಭ್ಯ. ಅಲ್ಲದೇ, ಇದಕ್ಕಿಂತ ತುಸು ಕಡಿಮೆ ಬೆಲೆಯ ಝಡ್ ಶ್ರೇಣಿ ಲಾವಾ ಫೋನುಗಳಲ್ಲಿ ಡ್ಯುಯಲ್ ಕ್ಯಾಮರಾ ಇಲ್ಲದಿದ್ದರೂ ಇದೇ ಬೊಕೆ ಎಫೆಕ್ಟ್ ನೀಡುವ ಸಾಫ್ಟ್'ವೇರ್ ಅಳವಡಿಸಲಾಗಿದೆ. ಬಹುತೇಕ ಹೈಎಂಡ್ ಫೋನುಗಳಲ್ಲಿ ಮಾತ್ರ ಬೆರಳಚ್ಚು ತಂತ್ರಜ್ಞಾನ ಇರುತ್ತದೆ. ಆದರೆ, ಲಾವಾ ತನ್ನ ಹೊಸ ಶ್ರೇಣಿಯ ಫೋನುಗಳಲ್ಲಿ ಕಡಿಮೆ ಬೆಲೆಗೆ ಅದನ್ನು ನೀಡುತ್ತಿದೆ.

ಬೆಲೆ ಕಡಿಮೆಯಾದರೂ ಗುಣಮಟ್ಟ ಕಡಿಮೆಯಿಲ್ಲ ಎನ್ನುತ್ತಾರೆ ಕಂಪನಿಯ ಪ್ರಧಾನ ಮಾರುಕಟ್ಟೆ ಅಧಿಕಾರಿ ಸುನೀಲ್ ರೈನಾ. ಇದನ್ನು ಬರೀ ಬಾಯಿ ಮಾತಿನಲ್ಲಿ ಹೇಳುವುದಲ್ಲ ಅವರು ಚೀನಾದ ಶೆಂಝೆನ್‌ನಲ್ಲಿರುವ ತಮ್ಮ ಮೊಬೈಲ್ ವಿನ್ಯಾಸ ಹಾಗೂ ಅಭಿವೃದ್ಧಿ ಪ್ರಯೋಗಾಲಯದಲ್ಲಿ ಸಾಕ್ಷಾತ್ ದರ್ಶನ ಮಾಡಿಸುತ್ತಾರೆ. ಶೆಂಝೆನ್, ಚೀನಾದ ಅತಿ ದೊಡ್ಡ ನಗರಗಳಲ್ಲಿ ಒಂದು ಹಾಗೂ ಮೊಬೈಲ್ ಕಂಪನಿಗಳ ತವರೂರು. ಇಲ್ಲಿ ಯಾವ ದೊಡ್ಡ ಮೊಬೈಲ್ ಕಂಪನಿಯ ಉತ್ಪಾದನಾ ಘಟಕ ಇಲ್ಲ ಹೇಳಿ! ಭಾರತದಲ್ಲಿ ಹೆಚ್ಚು ಮಾರಾಟವಾಗುವ ಓಪ್ಪೋ, ವೀವೋ, ಒನ್‌ಪ್ಲಸ್ ಮುಂತಾದ ಚೀನಾ ಮೊಬೈಲ್‌ಗಳಿಂದ ಹಿಡಿದು ಇನ್ನೂ ಹತ್ತಾರು ಬ್ರಾಂಡ್‌ಗಳ ಉತ್ಪಾದನಾ ಘಟಕಗಳಿರುವುದೆಲ್ಲ ಇಲ್ಲೇ. ಹಾಗಾಗಿ, ಇಲ್ಲಿ ಮೊಬೈಲ್ ಸಾಧನಗಳ ವಿನ್ಯಾಸ, ಪ್ರಯೋಗ, ಅಭಿವೃದ್ಧಿ ಹಾಗೂ ಉತ್ಪಾದನೆಗೆ ಬೇಕಾದ ಔದ್ಯೋಗಿಕ ಪರಿಸರವಿದೆ. ಎಲೆಕ್ಟ್ರಾನಿಕ್ ಪರಿಕರಗಳ ಸರಬರಾಜುದಾರರೂ ಇಲ್ಲಿ ಸಾಕಷ್ಟು ಇದ್ದಾರೆ. ಬಹುತೇಕ ಚೀನಾ ಹಾಗೂ ಭಾರತೀಯ ಮೊಬೈಲ್ ಕಂಪನಿಗಳು ಕೇವಲ ಜೋಡಣಾ ಘಟಕಗಳನ್ನು ಮಾತ್ರ ಹೊಂದಿರುತ್ತವೆ.

ತನ್ನದೆ ಸಾಫ್ಟ್'ವೇರ್ ಘಟಕ

ಅಂದರೆ, ಯಾವುದೋ ಚೀನಾ ಕಂಪನಿ ಉತ್ಪಾದಿಸುವ ಬಿಡಿ ಭಾಗಗಳನ್ನು ಸಗಟಿನಲ್ಲಿ ಖರೀದಿಸಿ ಅವುಗಳನ್ನು ಭಾರತಕ್ಕೆ ತಂದು ಜೋಡಿಸಿ ಅದಕ್ಕೊಂದು ಬ್ರಾಂಡ್ ಅಂಟಿಸಿ ಮಾರಾಟ ಮಾಡುತ್ತವೆ. ಆದರೆ, ಮೊಬೈಲ್

ಸಿಟಿ ಶೆಂಝೆನ್‌ನಲ್ಲಿ ಲಾವಾ ತನ್ನ ಪ್ರತ್ಯೇಕ ಉತ್ಪನ್ನ ವಿನ್ಯಾಸ ಹಾಗೂ ಪ್ರಯೋಗಾಲಯವನ್ನು ಹೊಂದಿದೆ. ಇಲ್ಲಿ, ತನ್ನದೇ ಸಾಫ್ಟವೇರ್ ಘಟಕವನ್ನೂ ಹೊಂದಿದೆ. ಇಂಥ ಸಾಫ್ಟ್‌ವೇರ್ ಘಟಕ ಹೊಂದಿರುವ ಮೊಬೈಲ್ ಕಂಪನಿಗಳು ಬೆರಳೆಣಿಕೆಯಷ್ಟು ಮಾತ್ರ. ಈ ಆರ್‌ಎನ್‌ಡಿ ಸೆಂಟರ್‌ನಲ್ಲಿ ಲಾವಾ ಮೊಬೈಲ್‌ಗಳ ಸಂಪೂರ್ಣ ಅಭಿವೃದ್ಧಿ ಹಾಗೂ ಗುಣಮಟ್ಟ ಪರೀಕ್ಷೆಯೂ ನಡೆಯುತ್ತದೆ. ಈ ಪ್ರಯೋಗಾಲಯದಲ್ಲಿ ಪಾಸಾಗುವ ಮಾದರಿಗಳನ್ನು ಮಾತ್ರ ಲಾವಾ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ.

ಉದಾಹರಣೆಗೆ, ಈ ಪ್ರಯೋಗಾಲಯದಲ್ಲಿ ಒಂದು ಯಂತ್ರ ಕೀಪ್ಯಾಡ್‌ನ ಬಟನ್‌ಗಳ ಒತ್ತು ಪರೀಕ್ಷೆ ಮಾಡುತ್ತಿರುತ್ತದೆ. ನಾವು ಬೆರಳಿನಲ್ಲಿ ಬಟನ್ ಒತ್ತುವಂತೆ ಈ ಯಂತ್ರ ಹತ್ತಾರು ಲಕ್ಷ ಬಾರಿ ಕೀಬೋರ್ಡ್‌ನ ಬಟನ್‌ಗಳನ್ನು ಒತ್ತುತ್ತಿರುತ್ತದೆ. ಒಂದುವೇಳೆ ಮಿಲಿಯನ್‌ಗಟ್ಟಲೆ ಒತ್ತುವಿಕೆಯನ್ನು ಈ ಬಟನ್‌ಗಳನ್ನು ತಾಳಿಕೊಳ್ಳದಿದ್ದರೆ ಆ ಕೀಪ್ಯಾಡನ್ನು ಲಾವಾ ಬಳಸುವುದಿಲ್ಲ. ಅದೇ ರೀತಿ ಇನ್ನೊಂದು ಯಂತ್ರ ಮೊಬೈಲನ್ನು ಮೂರಡಿ ಹಾಗೂ ಆರಡಿ ಎತ್ತರದಿಂದ ಬೀಳಿಸುವ ಪರೀಕ್ಷೆ ಮಾಡುತ್ತಿರುತ್ತದೆ. ಕೆಲ ಸಾವಿರ ಏಟುಗಳನ್ನು ಆ ಮೊಬೈಲ್ ತಡೆದುಕೊಳ್ಳದಿದ್ದರೆ ಆ ಮಾದರಿ ಫೇಲ್. ಮೊಬೈಲ್ ಪರದೆ ಮೇಲೆ ಗೀರು ಬೀಳುವ ಪರೀಕ್ಷೆ, ಒತ್ತಡ ಪರೀಕ್ಷೆ, ಇಯರ್ ಫೋನ್ ಜಾಕ್ ಪರೀಕ್ಷೆ, ಬ್ಯಾಟರಿ ಪರೀಕ್ಷೆ ಹೀಗೆ ಎರಡು ಡಝನ್ ಪರೀಕ್ಷೆಗಳು ನಡೆದು ಫಲಿತಾಂಶ ಉತ್ತಮ ಇದ್ದರೆ ಮಾತ್ರ ಆ ಫೋನ್ ಮಾದರಿ ಮಾರುಕಟ್ಟೆಗೆ ಬರತ್ತದೆ. ಇಂಥಹ ಗುಣಮಟ್ಟ

ಪರೀಕ್ಷಾ ಘಟಕಗಳೇ ಎಷ್ಟೋ ಮೊಬೈಲ್ ಕಂಪನಿಗಳಲ್ಲಿ ಇರುವುದಿಲ್ಲ.

2009ರಲ್ಲಿ ಪ್ರಾರಂಭ

2009ರಲ್ಲಿ ಹರಿ ಓಂ ರೈ ಮತ್ತಿತರರು ಸೇರಿ ಪ್ರಾರಂಭಿಸಿದ ಈ ಲಾವಾ ಮೊಬೈಲ್ ಕಂಪನಿ ಇದೀಗ ಪ್ರಧಾನ ಮಂತ್ರಿಯವರ ಮೇಕ್ ಇನ್ ಇಂಡಿಯಾ ಯೋಜನೆಯನ್ವಯ ಭಾರತದಲ್ಲೇ ಮೊಬೈಲ್‌ಗಳನ್ನು ಉತ್ಪಾದಿಸುತ್ತಿದೆ. ದೆಹಲಿ ಬಳಿಯ ನೊಯ್ಡಾದಲ್ಲಿ ಕೇಂದ್ರ ಕಚೇರಿ ಹಾಗೂ ಮೂಲ ಉತ್ಪಾದನಾ ಘಟಕ ಇದ್ದರೂ ಈಗ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ನೊಯ್ಡಾದಲ್ಲಿ ಎರಡನೇ ಘಟಕವನ್ನೂ ಆರಂಭಿಸಿದೆ ಹಾಗೂ ಶೀಘ್ರ ದಕ್ಷಿಣ ಭಾರತದಲ್ಲಿ ಇನ್ನೊಂದು ಘಟಕವನ್ನೂ ಆರಂಭಿಸುತ್ತಿದೆ. ಮೊಬೈಲ್ ಡಿಸೈನಿಂಗ್ ಘಟಕವನ್ನೂ ಲಾವಾ ಸದ್ಯವೇ ಭಾರತದಲ್ಲಿ ಕಾರ್ಯಾರಂಭ ಮಾಡಲಿದೆ.

ಇನ್ನು ಕೆಲವೇ ವರ್ಷಗಳಲ್ಲಿ ಭಾರತವು ಜಗತ್ತಿನ ಮೊಬೈಲ್ ತಂತ್ರಜ್ಞಾನದ ತವರೂರಾಗಲಿದೆ ಎನ್ನುತ್ತಾರೆ ಸಿಎಂಒ ಸುನೀಲ್ ರೈನಾ. 1970ರಲ್ಲಿ ಅಮೆರಿಕಾವು ಜಗತ್ತಿನ ಇಲೆಕ್ಟ್ರಾನಿಕ್ ತಂತ್ರಜ್ಞಾನದ ತವರೂರಾಗಿತ್ತು. ನಂತರ 1980ರ ಹೊತ್ತಿಗೆ ಜಪಾನ್‌ಗೆ ವಿದ್ಯುನ್ಮಾನ ತಂತ್ರಜ್ಞಾನದ ತವರೂರು ವರ್ಗವಾಯಿತು. 2000ನೇ ಇಸ್ವಿಯ ಹೊತ್ತಿಗೆ ವಿದ್ಯುನ್ಮಾನ ತವವರೂರು  ಎಂಬ ಪಟ್ಟ ಕೊರಿಯಾಗೆ ಹೋಯಿತು. ೨೦೦೫ರಲ್ಲಿ ತೈವಾನ್ ಈ ಪಟ್ಟ ಪಡೆದುಕೊಂಡರೆ 2010ರಲ್ಲಿ ಚೀನಾ ಜಗತ್ತಿನ ಎಲೆಕ್ಟ್ರಾನಿಕ್ ಹಬ್ ಆಗಿ ಅಭಿವೃದ್ಧಿಯಾಯಿತು. ಇದೀಗ ಭಾರತದ ಸರದಿ... ಜಗತ್ತಿನ ವಿದ್ಯುನ್ಮಾನ ವಿನ್ಯಾಸ ಹಾಗೂ ಉತ್ಪಾದನಾ ಕೇಂದ್ರವಾಗಿ ಭಾರತ ಪ್ರವರ್ಧಮಾನಕ್ಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಲಾವಾ ಭಾರತದಲ್ಲಿ ತನ್ನ ಮೊಬೈಲ್ ಹಾಗೂ ಇತರ ಇಲೆಕ್ಟ್ರಾನಿಕ್ ತಂತ್ರಜ್ಞಾನ ಘಟಕಗಳನ್ನು ಇನ್ನಷ್ಟು ವಿಸ್ತರಿಸಲಿದೆ ಎನ್ನುತ್ತಾರೆ ಅವರು.

ಆರಂಭದಲ್ಲಿ 1000 ವಿತರಕರು ಮಾತ್ರ

2009ರಲ್ಲಿ ಲಾವಾ ಮೊಬೈಲ್ ಅಂಕುರಗೊಂಡು 2013ರಲ್ಲಿ ಕೇವಲ 1000 ವಿತರಕರನ್ನು ಹೊಂದಿತ್ತು. ಇಂದು ಲಕ್ಷಾಂತರ ವಿತರಕರನ್ನು ಹೊಂದಿದೆ ಹಾಗೂ ಭಾರತದ ಕೆಲವು ರಾಜ್ಯಗಳಲ್ಲಿ ಲಾವಾ ದೇಸೀ ಬ್ರಾಂಡ್ ಮೊಬೈಲ್‌ಗಳ ಮಾರ್ಕೆಟ್ ಲೀಡರ್. ನಮ್ಮ ನೊಯ್ಡಾ ಹಾಗೂ ಯಮುನಾ ಎಕ್ಸ್‌ಪ್ರೆಸ್ ಕಾರಿಡಾರ್‌ನ ಎರಡು ಘಟಕಗಳಲ್ಲಿ ತಲಾ 3.6 ಕೋಟಿ ಮೊಬೈಲ್ ಸೆಟ್‌ಗಳನ್ನು ಉತ್ಪಾದಿಸುತ್ತೇವೆ. ನಮ್ಮ ಮೊಬೈಲ್‌ಗಳಲ್ಲಿ ಅತ್ಯುತ್ತಮ ಸೌಂಡ್ (ಧ್ವನಿ), ಸೈಟ್ (ನೋಟ) ಹಾಗೂ ಟಚ್ (ಸ್ಪರ್ಶ)ವೇ ಮೂಲಮಂತ್ರ. ಈ ಮೂರು ಅಂಶಗಳನ್ನು ಚೆನ್ನಾಗಿದ್ದರೆ ಮಾತ್ರ ಗ್ರಾಹಕರಿಗೆ ಮೊಬೈಲ್ ಫೋನ್ ಇಷ್ಟವಾಗುತ್ತದೆ. ಹಾಗಾಗಿ, ನಾವು ಈ ಮೂರು ಅಂಶಗಳಿಗೆ ಹೆಚ್ಚು ಆದ್ಯತೆ ನೀಡುತ್ತೇವೆ. ಅದಕ್ಕಾಗಿಯೇ ಶೆಂಝೆನ್‌ನಲ್ಲಿ ನಾವು 700 ಜನರ ತಂತ್ರಜ್ಞರ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯವನ್ನ ನಡೆಸುತ್ತಿದ್ದೇವೆ. ನಮ್ಮದು ಸಂಪೂರ್ಣ ಸ್ವದೇಶೀ ಕಂಪನಿ.

ಆದರೆ, ಮೊಬೈಲ್ ತಂತ್ರಜ್ಞಾನ ಅಭಿವೃದ್ಧಿಗೆ ಚಿನಾನ ಶೆಂಝೆನ್‌ಲ್ಲಿ ಪೂರಕ ಪೂರಕ ಔದ್ಯೋಗಿಕ ಪರಿಸರವಿದೆ. ಹಾಗಾಗಿ, ಜಗತ್ತಿನ ಇನ್ನಿತರ ಪ್ರಮುಖ ಬ್ರಾಂಡ್‌ಗಳ ರೀತಿಯೇ ನಾವೂ ಅಲ್ಲಿ ಒಂದು ಕೇಂದ್ರ ಹೊಂದಿದ್ದೇವೆ. ಇದೀಗ ಭಾರತದಲ್ಲೂ ವಿನ್ಯಾಸ ಕೇಂದ್ರ ಆರಂಭಿಸಲಾಗಿದ್ದು 2017ರಲ್ಲಿ ಭಾರತದಲ್ಲೇ ವಿನ್ಯಾಸಗೊಂಡ ಮೊಬೈಲ್ ಫೋನ್‌ಗಳೂ ಮಾರುಕಟ್ಟೆಗೆ ಬಿಡಗಡೆಯಾಗಲಿವೆ ಎಂದು ತಮ್ಮ ಮೇಕ್ ಇನ್ ಇಂಡಿಯಾ ಯೋಜನೆಯನ್ನು ವಿವರಿಸುತ್ತಾರೆ ಲಾವಾ ಉತ್ಪಾದನಾ ವಿಭಾಗದ ಉಪಾಧ್ಯಕ್ಷ ಗೌರವ್ ನಿಗಮ್.

(ಪ್ರೇಷಿತ ಪ್ರತಿನಿಧಿಯಿಂದ)

Follow Us:
Download App:
  • android
  • ios