technology
By Suvarna Web Desk | 02:50 PM January 11, 2018
ಸರಿಸಾಟಿಯಿಲ್ಲದ ಜಿ ಸ್ಯಾಟ್-11 ಶೀಘ್ರದಲ್ಲೇ ನಭಕ್ಕೆ

Highlights

ಭಾರತೀಯ ಉಪಗ್ರಹ ಇತಿಹಾಸದಲ್ಲಿ ಹೊಸದೊಂದು ದಾಖಲೆ ಸೃಷ್ಟಿಯಾಗುತ್ತಿದೆ. ಈವರೆಗಿನ ಉಪಗ್ರಹ ಪಯಣದಲ್ಲೇ ಅತ್ಯಂತ ಭಾರದ ರಾಕೆಟ್ ಉಡ್ಡಯನಕ್ಕೆ ಇಸ್ರೋ ಸಜ್ಜಾಗಿದ್ದು, ಮುಂದಿನ ಜೂನ್ನಲ್ಲಿ ಭಾರತದ ದೂರ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಗೆ ‘ಜಿಸ್ಯಾಟ್-11 ಉಪಗ್ರಹವನ್ನು ಭಾರತ ಫ್ರಾನ್ಸ್ನ ಕೌರು ಉಡ್ಡಯನ ನೆಲೆಯಿಂದ ಉಡಾವಣೆ ಮಾಡಲು ನಿರ್ಧರಿಸಿದೆ.

ಬೆಂಗಳೂರು (ಜ.11): ಭಾರತೀಯ ಉಪಗ್ರಹ ಇತಿಹಾಸದಲ್ಲಿ ಹೊಸದೊಂದು ದಾಖಲೆ ಸೃಷ್ಟಿಯಾಗುತ್ತಿದೆ. ಈವರೆಗಿನ ಉಪಗ್ರಹ ಪಯಣದಲ್ಲೇ ಅತ್ಯಂತ ಭಾರದ ರಾಕೆಟ್ ಉಡ್ಡಯನಕ್ಕೆ ಇಸ್ರೋ ಸಜ್ಜಾಗಿದ್ದು, ಮುಂದಿನ ಜೂನ್ನಲ್ಲಿ ಭಾರತದ ದೂರ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಗೆ ‘ಜಿಸ್ಯಾಟ್-೧೧’ ಉಪಗ್ರಹವನ್ನು ಭಾರತ ಫ್ರಾನ್ಸ್ನ ಕೌರು ಉಡ್ಡಯನ ನೆಲೆಯಿಂದ ಉಡಾವಣೆ ಮಾಡಲು ನಿರ್ಧರಿಸಿದೆ.

ಐದು ಟನ್ ಭಾರ:

5725 ಕೆ.ಜಿ ತೂಕದ ಉಪಗ್ರಹವಿದು. ಈ ಉಪಗ್ರಹ ಕೆಯು ಬ್ಯಾಂಡ್ ಹಾಗೂ ಕೆಎ ಬ್ಯಾಂಡ್ನ 40 ಟ್ರಾನ್ಸ್'ಪಾಂಡರ್'ಗಳನ್ನು ನಭೋಮಂಡಲಕ್ಕೆ ಹೊತ್ತೊಯ್ಯಲಿದೆ. ಈ ಟ್ರಾನ್ಸ್ ಪಾಂಡರ್ಗಳು ಈಗ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸಂವಹನ ಉಪಗ್ರಹಗಳಿಗಿಂತ 3 ರಿಂದ 6 ಪಟ್ಟು ಹೆಚ್ಚಿನ ಸಾಮರ್ಥ್ಯ ಹೊಂದಿವೆ. ಈ ಮೂಲಕ ಮುಂದಿನ ದಿನಗಳಲ್ಲಿ ಭಾರತದಲ್ಲಿ ಸೆಕೆಂಡ್ಗೆ 10 ರಿಂದ 14 ಜಿಬಿ ವೇಗದ ಇಂಟರ್ನೆಟ್ ಸಂಪರ್ಕ ಹೊಂದಲು ಸಾಧ್ಯವಾಗಲಿದೆ. ಇದು ಗ್ರಾಮೀಣ ಭಾರತದಲ್ಲಿ ಅಂತರ್ಜಾಲ ಸಂಪರ್ಕದಲ್ಲಿ ಕ್ರಾಂತಿ ಉಂಟು ಮಾಡಲಿದ್ದು, ಉಪಗ್ರಹ ಆಧಾರಿತ ಅಂತರ್ಜಾಲ ಕ್ರಾಂತಿ ಟೆಲಿಕಾಂ ವಲಯದ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡುವುದು ನಿಚ್ಚಳ.

ಜಿಸ್ಯಾಟ್-11 ರ ಇತಿಹಾಸ

2009 ರ ಜುಲೈಯಲ್ಲಿ ಭಾರತ ಸರಕಾರ ಜಿಸ್ಯಾಟ್ 11 ಯೋಜನೆಯನ್ನು ಅಂಗೀಕರಿಸಿತು. ಸುಮಾರು 5000 ಕೋಟಿ ರೂ. ವೆಚ್ಚದ ಪ್ರಾಜೆಕ್ಟ್ ಅದೇ ಜುಲೈನಲ್ಲಿ ಆರಂಭಗೊಂಡಿತು. ಈ ಉಪಗ್ರಹವನ್ನು ಈ ಹಿಂದೆ, 2011 ರ ಮಧ್ಯಭಾಗದಲ್ಲಿ ಕಕ್ಷೆಗೆ ಕಳುಹಿಸಲು ಉದ್ದೇಶಿಸಲಾಗಿತ್ತು. ಆದರೆ ಲಾಂಚರ್ ಅಭಿವೃದ್ಧಿ ಕಾರ್ಯದ ವಿಳಂಬದಿಂದ ಸಾಧ್ಯವಾಗಲಿಲ್ಲ. ಈ ಹಿಂದೆ ಭಾರತ ಉಡಾವಣೆ ಮಾಡಿದ ಅತಿ ಭಾರದ ಉಪಗ್ರಹ ಜಿಸ್ಯಾಟ್ 10 ಇದನ್ನು 2012 ರಲ್ಲಿ ಏರಿಯೇನ್ ರಾಕೆಟ್ ಬಳಸಿ ಉಡಾವಣೆ ಮಾಡಲಾಗಿತ್ತು. ಅದರ ಭಾರ 3.4  ಟನ್ ಆಗಿತ್ತು. ಜಿಸ್ಯಾಟ್ 11 ರಲ್ಲಿ ಅಳವಡಿಸಿದ ಕೆಎ/ಕೆಯು ಬ್ಯಾಂಡ್ ಟ್ರಾನ್ಸ್ಪಾಂಡರ್ಗಳು ಇಡೀ ದೇಶವನ್ನು ತಲಪುವ ಸಾಮರ್ಥ್ಯ ಹೊಂದಿವೆ. ಅಂಡಮಾನ್ ನಿಕೋಬಾರ್ ದ್ವೀಪ ಸಮೂಹವನ್ನೂ ಇದರ ಮೂಲಕ ತಲುಪಬಹುದು. ಡಿಟಿಎಚ್ ಸೇರಿದಂತೆ ಸಂವಹನ ಮತ್ತು ಪ್ರಸಾರ ಸೇವೆಯಲ್ಲಿ ಸಹಕಾರಿ. 14  ಕಿಲೋವಾಟ್ ವಿದ್ಯುತ್ ಉತ್ಪಾದಿಸುವ ಸೋಲಾರ್ ಪ್ಯಾನೆಲ್ಗಳನ್ನು ಉಪಗ್ರಹ ಹೊಂದಿದೆ.

ಫ್ರೆಂಚ್ ಗಯಾನದಿಂದ ಉಡಾವಣೆ

ಜಿಸ್ಯಾಟ್ 11 ಉಪಗ್ರಹವನ್ನು ಶೀಘ್ರದಲ್ಲೇ ದಕ್ಷಿಣ ಅಮೆರಿಕಾದ ಫ್ರೆಂಚ್ ಗಯಾನಾದ ಕೌರುವಿಗೆ ಕೊಂಡೊಯ್ಯಲು ಸಿದ್ಧತೆ ನಡೆದಿದೆ. ಅಲ್ಲಿ ಫ್ರೆಂಚ್ ಏರಿಯೇನ್ 5 ರಾಕೆಟ್ನ್ನು ಈ ಉಪಗ್ರಹ ಉಡ್ಡಯನ ಉದ್ದೇಶಕ್ಕೆ ಭಾರತ ಬಾಡಿಗೆಗೆ ಪಡೆಯಲಿದೆ. ಅಂದಾಜು 500 ಕೋಟಿ ರು. ವೆಚ್ಚದಲ್ಲಿ ಉಪಗ್ರಹ ಅಭಿವೃದ್ಧಿಯಾಗಿದೆ. ಈ ತನಕ ಅಂತರಿಕ್ಷ ಕಕ್ಷೆಗೆ ಹಾರಿಬಿಡಲಾದ ಅಷ್ಟೂ ಸಂವಹನ ಉಪಗ್ರಹಗಳ ಶಕ್ತಿಗೆ ಜಿಸ್ಯಾಟ್ 11 ಸರಿಸಮಾನ ಎನ್ನಲಾಗಿದೆ. 6 ಟನ್ ತೂಕದ ಉಪಗ್ರಹ ಹಾರಿಬಿಡುವ ಸಾಮರ್ಥ ಇಸ್ರೋಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿದ್ಧಿಸಿಲ್ಲ. ಜಿಸ್ಯಾಟ್ 11 ಇಸ್ರೋವು ಫ್ರೆಂಚ್ ಕಂಪನಿ ಮೂಲಕ ಉಡ್ಡಯನ ನಡೆಸುತ್ತಿರುವ 21 ನೇ ಉಪಗ್ರಹ. ಇಸ್ರೋ ಅಭಿವೃದ್ಧಿಪಡಿಸಿದ ಇತ್ತೀಚಿನ ಮೀಡಿಯಂ ಲಿಫ್ಟ್ ಲಾಂಚರ್ ವಾಹಕವು 2,000 ಕೆ.ಜಿ ಭಾರದವರೆಗಿನ ಉಪಗ್ರಹಗಳನ್ನಷ್ಟೇ ನಭೋಮಂಡಲಕ್ಕೆ ಸಾಗಿಸಬಲ್ಲುದು. ಹೀಗಾಗಿ ಫ್ರಾನ್ಸ್'ನ ಏರಿಯಾನ್-5 ರಾಕೆಟ್ ಮೂಲಕ ಮುಂದಿನ ಜೂನ್ನಲ್ಲಿವ ಹಾರಿಬಿಡಲಾಗುವುದು. ಈ ಉಪಗ್ರಹ ಮೊದಲ ಬಾರಿ ಗ್ರಾಮೀಣ ಭಾರತದಲ್ಲಿ ಸ್ಯಾಟಲೈಟ್ ಆಧಾರಿತ ಇಂಟರ್ನೆಟ್ ಸೇವೆಗಳನ್ನು ಒದಗಿಸಲಿದೆ. 

ಜಿಸ್ಯಾಟ್ ಅಂದ್ರೇನು?

‘ಜಿಸ್ಯಾಟ್’ ಭಾರತದ ಸ್ವದೇಶಿ ನಿರ್ಮಿತ ತಂತ್ರಜ್ಞಾನವನ್ನು ಹೊಂದಿದ ಸಂಹವನ ಉಪಗ್ರಹಗಳು. ಇವನ್ನು ಡಿಜಿಟಲ್ ಆಡಿಯೋ, ಡೇಟಾ ಹಾಗೂ ವಿಡಿಯೋ ಬ್ರಾಡ್ಕಾಸ್ಟಿಂಗ್ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಇಸ್ರೋ 2015 ರ ನವೆಂಬರ್ ತನಕ 13 ಜಿಸ್ಯಾಟ್ ಉಪಗ್ರಹಗಳ ಉಡಾವಣೆ ನಡೆಸಿದೆ. ಪ್ರಸಾರ ಸೇವೆಯಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸುವ ಉದ್ದೇಶದಿಂದ ಇಸ್ರೋ ಜಿಸ್ಯಾಟ್ ಸರಣಿಯ ಉಪಗ್ರಹಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಉಪಗ್ರಹಗಳಲ್ಲಿ ಅಳವಡಿಸಲಾಗಿರುವ ಟ್ರಾನ್ಸ್ ಪಾಂಡರ್ಗಳು ಟೆಲಿಕಮ್ಯೂನಿಕೇಶನ್, ಟೆಲಿವಿಶನ್ ಪ್ರಸಾರ, ಹವಾಮಾನ ಮುನ್ಸೂಚನೆ, ದುರಂತಗಳ ಮುನ್ಸೂಚನೆ, ರಕ್ಷಣಾ ಉದ್ದೇಶಗಳಿಗೆ ಬಳಕೆಯಾಗುತ್ತಿವೆ. 

ಲೇಖನ: ಕೃಷ್ಣಮೋಹನ ತಲೆಂಗಳ  

Show Full Article


Recommended


bottom right ad