Asianet Suvarna News Asianet Suvarna News

ಸ್ಪೀಡಾಗಿದೆ ಜಮಾನ; ನಮ್ ಇಂಟರ್'ನೆಟ್ ಮಾತ್ರ ನಿಧಾನ!

ಮೊಬೈಲ್ ನೆಟ್‌'ವರ್ಕ್ ವ್ಯಾಪಿಸಿದ ದೃಷ್ಟಿಯಿಂದ ಭಾರತ ವಿಶ್ವದ ಇತರ ದೇಶಗಳಿಗಿಂತ ಸಾಕಷ್ಟು ಮುಂಚೂಣಿಯಲ್ಲೇ ಇದೆ. ಆದರೆ ಡೌನ್‌ಲೋಡಿಂಗ್ ವೇಗದಲ್ಲಿ ಮಾತ್ರ ಇನ್ನೂ ಅಭಿವೃದ್ಧಿಶೀಲ ದೇಶವಾಗಿಯೇ ಉಳಿದಿದೆ!

India Internet Speed is low compare to other countries

ಬೆಂಗಳೂರು (ಫೆ.01):  ಮೊಬೈಲ್ ನೆಟ್‌ವರ್ಕ್ ವ್ಯಾಪಿಸಿದ ದೃಷ್ಟಿಯಿಂದ ಭಾರತ ವಿಶ್ವದ ಇತರ ದೇಶಗಳಿಗಿಂತ ಸಾಕಷ್ಟು ಮುಂಚೂಣಿಯಲ್ಲೇ ಇದೆ. ಆದರೆ ಡೌನ್‌ಲೋಡಿಂಗ್ ವೇಗದಲ್ಲಿ ಮಾತ್ರ ಇನ್ನೂ ಅಭಿವೃದ್ಧಿಶೀಲ ದೇಶವಾಗಿಯೇ ಉಳಿದಿದೆ!

ಭಾರತದ ವಿವಿಧ ಮೊಬೈಲ್ ಸೇವಾ ಪೂರೈಕೆದಾರರ ನೆಟ್‌ವರ್ಕ್ ಸಾಮರ್ಥ್ಯವನ್ನು ಟ್ರಾಯ್ ವಿವಿಧ ಸರ್ಕಲ್‌ಗಳಲ್ಲಿ  ಪರೀಕ್ಷಿಸಿ ನೋಡಿದಾಗ  ಓಪನ್ ಸಿಗ್ನಲ್ ಸಂಸ್ಥೆಯವರು ವಿಶ್ವದ 77 ದೇಶಗಳಲ್ಲಿ ಸಮೀಕ್ಷೆ ನಡೆಸಿದ್ದು, ಕಳೆದ ಡಿಸೆಂಬರ್‌ನಲ್ಲಿ ಈ ವರದಿ ಪ್ರಕಟಿಸಿದ್ದಾರೆ. ಆಗ, ಕವರೇಜ್ ದೃಷ್ಟಿಯಿಂದ ಜಾಗತಿಕವಾಗಿ ಭಾರತ 11 ನೇ ಸ್ಥಾನದಲ್ಲಿರುವುದು ಕಂಡುಬಂದಿದೆ. ವೇಗದ ವಿಚಾರಕ್ಕೆ ಬಂದರೆ 109 ನೇ ಸ್ಥಾನದಲ್ಲಿದೆ.

ಹೇಗಿದೆ ನಮ್ ದೇಶ, ಹೇಗಿದೆ ನಮ್ ನೆಟ್ಟು?

ಸಮೀಕ್ಷೆಯ ಪ್ರಕಾರ ದೇಶದ 84 ಶೇ. ಭೂಭಾಗ 4 ಜಿ ಎಲ್‌'ಟಿಇ ಸಂಪರ್ಕ ಪಡೆದಿದ್ದರೆ, ನೆಟ್ ಸಂಪರ್ಕದ ವೇಗದ ದೃಷ್ಟಿಯಿಂದ ನೋಡಿದಾಗ ಭಾರತ ಪಟ್ಟಿಯ ತಳಭಾಗದಲ್ಲಿ ಚಡಪಡಿಸುತ್ತಿದೆ. ದೇಶದ ಇತರ ಟೆಲಿಕಾಂ ಸೇವಾ ಪೂರೈಕೆದಾರರಿಗೆ ಹೋಲಿಸಿದರೆ ರಿಲಯನ್ಸ್ ಜಿಯೋ ಸಂಸ್ಥೆ ರಾಷ್ಟ್ರ ವ್ಯಾಪಿ ಹೆಚ್ಚಿನ ಕವರೇಜ್ ಸಾಮರ್ಥ್ಯ ಹೊಂದಿದೆ. ಸರ್ವೇ ಹೇಳುವಂತೆ ದೇಶದ 95 ಶೇ. ಭೂಭಾಗದಲ್ಲಿ ಜಿಯೋ 4 ಜಿ ಎಲ್‌'ಟಿಇ ಸಂಪರ್ಕ ಸಾಧ್ಯವಾಗಿದೆ.

2016 ಕ್ಕೆ ಹೋಲಿಸಿದರೆ, 2017 ರಲ್ಲಿ ಭಾರತದ ಶೇ.10 ರಷ್ಟು ಹೆಚ್ಚಿನ ಭೂಭಾಗಕ್ಕೆ 4 ಜಿ ಸಂಪರ್ಕ ದೊರಕಿದೆ. ಸ್ವೀಡನ್, ಥೈವಾನ್, ಸ್ವಿಡ್ಜರ್ಲೆಂಡ್, ಯುಕೆ ಮತ್ತಿತರ ದೇಶಗಳಿಗಿಂತ ಭಾರತ 4 ಜಿ  ಸಂಪರ್ಕ ಸಾಮರ್ಥ್ಯದಲ್ಲಿ ಮುಂದೆ ಇದೆ. ಉಚಿತ ಕೊಡುಗೆಗಳು, ರಿಯಾಯಿತಿಯ ಆಫರ್‌ಗಳು, ವಿಶಾಲವಾದ ನೆಟ್‌ವರ್ಕ್ ತಂತ್ರಜ್ಞಾನದಿಂದ ಜಿಯೋ ೪ಜಿ ವಿಎಲ್‌ಟಿಇ ರಂಗದಲ್ಲಿ ದೊಡ್ಡ ಕ್ರಾಂತಿ ಮಾಡಿ ದೇಶದ 100 ಮಿಲಿಯನ್‌ಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಇಂಟರ್‌ನೆಟ್ ಸಂಪರ್ಕ ವೇಗವನ್ನು 3 ಜಿ ಮತ್ತು 4 ಜಿ ಎಲ್‌ಟಿಇಯನ್ನು ಒಟ್ಟಿಗೇ ಪರಿಗಣಿಸಿದರೆ ವಿಶ್ವದಲ್ಲಿ ಭಾರತ 109 ನೇ ಸ್ಥಾನದಲ್ಲಿದೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಅಂತರ್ಜಾಲ ಸಂಪರ್ಕ ವೇಗದ ವಿಚಾರದಲ್ಲಿ ಭಾರತ ಸಾಧಿಸುವುದಕ್ಕೆ ತುಂಬಾ ಇದೆ. ‘ಓಪನ್ ಸಿಗ್ನಲ್’ನ ಅಧ್ಯಯನ ಪ್ರಕಾರ ವಿಶ್ವದ ಸರಾಸರಿ ಡೌನ್‌ಲೋಡ್ ವೇಗ ಸೆಕೆಂಡಿಗೆ 16.6 ಎಂಬಿ. ಈ ವೇಗ ಯಾವುದೇ ದೇಶದಲ್ಲಿ ಸೆಕೆಂಡಿಗೆ 50 ಎಂಬಿ ದಾಟಿಲ್ಲ ಎನ್ನಲಾಗಿದೆ. ನೆಟ್‌ವರ್ಕ್ ತಲಪುವಿಕೆಯಲ್ಲಿ ದಕ್ಷಿಣ ಕೊರಿಯಾ ಹಾಗೂ ಇಂಟರ್‌ನೆಟ್ ವೇಗದ ವಿಚಾರದಲ್ಲಿ ಸಿಂಗಾಪುರ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಇಂಟರ್'ನೆಟ್ ತಲಪುವಿಕೆ ದೃಷ್ಟಿಯಿಂದ ನೋಡಿದಾಗ ಭಾರತದಲ್ಲಿ ಶೇ.32 ಪಾಯಿಂಟ್‌ಗಳೊಂದಿಗೆ ಜಿಯೋ ಅಗ್ರಸ್ಥಾನದಲ್ಲಿದೆ. ಟ್ರಾಯ್ ಅಂಕಿ ಅಂಶ ನೀಡುವ ‘ಮೈಸ್ಪೀಡ್ ಡೇಟಾ’ ಹಲವು ಆಸಕ್ತಿಕರ ಮಾಹಿತಿ ಒದಗಿಸಿದೆ.

ಮುಂಬೈಯ ಜಿಯೋ ಗ್ರಾಹಕರು ಅತಿ ಹೆಚ್ಚಿನ ೪ಜಿಎಲ್‌ಟಿಇ ಡೌನ್‌ಲೋಡ್ ವೇಗ ಅಂದರೆ ಸೆಕೆಂಡಿಗೆ  40.4 ಎಂಬಿ ವೇಗದ ಅಂತರ್ಜಾಲ ವೇಗದ ಸುಖ ಅನುಭವಿಸುತ್ತಿದ್ದಾರೆ, ಇದು ವಿಶ್ವದ ಸರಾಸರಿಗಿಂತಲೂ ಹೆಚ್ಚು! ದೇಶದ ಸರಾಸರಿ ೩ಜಿ ಡೌನ್‌ಲೋಡ್ ವೇಗ ಸೆಕೆಂಡಿಗೆ 2 ಎಂಬಿಯಷ್ಟು ಇದ್ದರೆ, ಒರಿಸ್ಸಾದ ಗ್ರಾಹಕರಿಗೆ ವೋಡಾಫೋನ್ 6.1 ಎಂಬಿಪಿಎಸ್ ಡೌನ್‌ಲೋಡ್ ವೇಗ ಕಲ್ಪಿಸಿದೆ. ಅಲ್ಲಿನ ಅಪ್‌ಲೋಡ್  ವೇಗ 2.8  ಎಂಬಿಪಿಎಸ್ ಇದೆ, ಇದು ದೇಶದಲ್ಲೇ ಅತಿ ಹೆಚ್ಚಿನ 3 ಜಿ ವೇಗ ಎನ್ನಲಾಗಿದೆ. ಗುಜರಾತ್‌'ನ ಐಡಿಯಾ ಗ್ರಾಹಕರು ಅತಿ ಹೆಚ್ಚಿನ ೪ಜಿ ಎಲ್‌ಟಿಇ ಅಪ್‌ಲೋಡ್ ವೇಗ ಅಂದರೆ ಸೆಕೆಂಡಿಗೆ 10.2 ಎಂಬಿಯಷ್ಟು ಹೊಂದಿದಾರೆ. ಪಶ್ಚಿಮ ಬಂಗಾಳ ಅತ್ಯುತ್ತಮ 4 ಜಿ ಎಲ್‌ಟಿಇ ಕಾರ್ಯಜಾಲ ಹೊಂದಿದ್ದರೆ, ಹರಿಯಾಣ ಅತ್ಯುತ್ತಮ 3 ಜಿ ಸಂಪರ್ಕ ಕಾರ್ಯಜಾಲ ಹೊಂದಿದೆ ಎನ್ನುತ್ತದೆ ಅಧ್ಯಯನ.

ಲೇಖನ: ಕೃಷ್ಣ ಮೋಹನ ತಲೆಂಗಳ

  

Follow Us:
Download App:
  • android
  • ios