Asianet Suvarna News Asianet Suvarna News

ಆಗಸದ ವಿಸ್ಮಯ: ಏನಿದು? ಭೂಮಿಗೆ ಮಾತ್ರ ಬೇಡವಿದು!

ನಾಸಾ ತೆರೆದಿಟ್ಟ ಆಗಸದ ವಿಸ್ಮಯವನ್ನೊಮ್ಮೆ ನೋಡಿ| ಭೂಮಿಗೆ ಅತ್ಯಂತ ಸಮೀಪ ಹಾದು ಹೋದ ಕ್ಷುದ್ರಗ್ರಹವಿದು| ಭುಮಿಯಿಂದ ಕೇವಲ 2.9 ಮಿಲಿಯನ್ ಕಿ.ಮೀ ದೂರದಲ್ಲಿ ಹಾದು ಹೋದ 2003 SD220 ಕ್ಷುದ್ರಗ್ರಹ| 1.6 ಕಿ.ಮೀ ಉದ್ದದ 2003 SD220 ಕ್ಷುದ್ರಗ್ರಹ| ರೆಡಾರ್ ಫೋಟೋಗಳನ್ನು ಬಿಡುಗಡೆ ಮಾಡಿದ ನಾಸಾ

Holiday Asteroid Imaged with NASA Radar
Author
Bengaluru, First Published Jan 23, 2019, 2:56 PM IST

ವಾಷಿಂಗ್ಟನ್(ಜ.23): ಇತ್ತೀಚಿಗಷ್ಟೇ ಭೂಮಿಗೆ ಅತ್ಯಂತ ಸಮೀಪದಲ್ಲಿ ಮೂರು ಕ್ಷುದ್ರಗ್ರಹಗಳು ಹಾದು ಹೋಗಿ ನಾಸಾದ ನಿದ್ದೆಗೆಡೆಸಿತ್ತು. ಅದರಂತೆ ಕಳೆದ ಡಿಸೆಂಬರ್‌ನಲ್ಲಿ ಮತ್ತೊಂದು ಭಾರೀ ಗಾತ್ರದ ಕ್ಷುದ್ರಗ್ರಹ ಭೂಮಿಯ ಸಮೀಪ ಹಾದು ಹೋಗಿದೆ.

2003 SD220 ಎಂಬ ಹೆಸರಿನ ಈ ಕ್ಷುದ್ರಗ್ರಹ  ಕಳೆದ ಡಿ.18 ಮತ್ತು 19ರಂದು ಭೂಮಿಗೆ ಅತ್ಯಂತ ಸಮೀಪ ಬಂದಿದ್ದು, ನಾಸಾ ಎಚ್ಚರಿಕೆಯ ಕರೆಗಂಟೆ ಮೊಳಗಿಸಿತ್ತು. ಆದರೆ ಡಿ.22 ರಂದು ಈ ಕ್ಷುದ್ರಗ್ರಹ ಸುಮಾರು 2.9 ಮಿಲಿಯನ್ ಕಿ.ಮೀ ದೂರದಿಂದ ಭೂಮಿಯನ್ನು ದಾಟಿ ಹೋಗಿದೆ.

Holiday Asteroid Imaged with NASA Radar

ಕಳೆದ 400 ವರ್ಷಗಳ ಇತಿಹಾಸದಲ್ಲೇ 2003 SD220 ಭೂಮಿಯ ಅತ್ಯಂತ ಸಮೀಪಕ್ಕೆ ಬಂದ ಕ್ಷುದ್ರಗ್ರಹ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು,2070ರಲ್ಲಿ ಮತ್ತೆ ಈ ಕ್ಷುದ್ರಗ್ರಹ ಇದಕ್ಕಿಂತ ಸಮೀಪ ಬರಲಿದೆ ಎಂದು ಅಂದಾಜಿಸಲಾಗಿದೆ.

2003 SD220 ಕ್ಷುದ್ರಗ್ರಹದ ರೆಡಾರ್ ಫೋಟೋಗಳನ್ನು ಸೆರೆ ಹಿಡಿಯಲಾಗಿದ್ದು, ಇದು ಸುಮಾರು 1.6 ಕಿ.ಮೀ ಉದ್ದವಿದೆ. ಇಷ್ಟು ದೊಡ್ಡ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೆ ಭಾರೀ ವಿನಾಶ ಖಚಿತ ಎಂಬುದು ಖಗೋಳ ವಿಜ್ಞಾನಿಗಳ ಅಂಬೋಣ.

ಭೂಮಿಯತ್ತ ಒಂದಲ್ಲ ಮೂರು ಆಸ್ಟ್ರಾಯ್ಡ್: ನಾಸಾ ‘Near Earth’ ಎಚ್ಚರಿಕೆ!

Follow Us:
Download App:
  • android
  • ios