Asianet Suvarna News Asianet Suvarna News

ದೋಷದ ಮೊಬೈಲ್‌ ಬೇಡವೆಂದ ಗ್ರಾಹಕನಿಗೆ 10 ಪಿಕ್ಸಲ್ ಪೋನ್ ಕೊಟ್ಟ ಗೂಗಲ್‌!

ದೋಷದ ಮೊಬೈಲ್‌ ಬೇಡವೆಂದ ಗ್ರಾಹಕನಿಗೆ 10 ಫೋನ್‌ ಕಾಣಿಕೆ ಕೊಟ್ಟ ಗೂಗಲ್‌ ಪಿಕ್ಸಲ್‌ ಸಂಸ್ಥೆ

Google Pixel 3 User Asks For Refund Gets 10 Phones Instead Worth 9000 Dollars
Author
Bangalore, First Published Apr 20, 2019, 8:37 AM IST

ನ್ಯೂಯಾರ್ಕ್[ಏ.20]: ದೋಷದಿಂದ ಕೂಡಿದ ಮೊಬೈಲ್‌ ಅನ್ನು ವಾಪಸ್‌ ಪಡೆದು ತನ್ನ ಹಣ ಹಿಂದಿರುಗಿಸುವಂತೆ ಕೇಳಿಕೊಂಡ ಗ್ರಾಹಕರೊಬ್ಬರಿಗೆ ಗೂಗಲ್‌ ಸಂಸ್ಥೆ ಸುಮಾರು 6,20,000 ಮೌಲ್ಯದ ಪಿಕ್ಸಲ್‌-3ಯ 10 ಮೊಬೈಲ್‌ಗಳನ್ನು ಕಾಣಿಕೆಯಾಗಿ ನೀಡಿದ ಅಪರೂಪದ ಸಂಗತಿ ಅಮೆರಿಕದಲ್ಲಿ ನಡೆದಿದೆ.

ರೆಡ್ಡಿಟ್‌ ವೆಬ್‌ಸೈಟ್‌ ಮೂಲಕ ಇಲ್ಲಿನ ಚೀಟೋಜ್‌ ಎಂಬ ಗ್ರಾಹಕ ಬಿಳಿ ಬಣ್ಣದ ಪಿಕ್ಸಲ್‌-3 ಮೊಬೈಲ್‌ ಅನ್ನು ಖರೀದಿಸಿದ್ದರು. ಆದರೆ, ಅದರಲ್ಲಿ ದೋಷ ಕಂಡು ಬಂದ ಕಾರಣಕ್ಕೆ ಮೊಬೈಲ್‌ ವಾಪಸ್‌ ಪಡೆದು ತನ್ನ ಹಣ ವಾಪಸ್‌ ನೀಡುವಂತೆ ಕೋರಿದ್ದರು. ಈ ಪ್ರಕಾರ ಗ್ರಾಹಕಗೆ 5500 ರು. ಮರುಪಾವತಿ ಮಾಡಲಾಗುವುದು ಎಂದು ತಿಳಿಸಲಾಗಿತ್ತು.

ಆದರೆ, ಪಿಕ್ಸಲ್‌ ಸಂಸ್ಥೆ ತನಗೆ ಹಣ ಮರುಪಾವತಿ ಮಾಡಿಲ್ಲ. ಬದಲಿಗೆ ಪಿಕ್ಸಲ್‌-3ಯ 10 ಮೊಬೈಲ್‌ಗಳನ್ನು ಕಳುಹಿಸಿಕೊಟ್ಟಿದೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios