Asianet Suvarna News Asianet Suvarna News

ಕಾಂಗ್ರೆಸ್ ಆಯ್ತು ಈಗ ‘ನಮೋ ಆ್ಯಪ್​​’ ಪೇಜ್ ಗಳ ಮೇಲೆ Facebook ಸರ್ಜಿಕಲ್​ ಸ್ಟ್ರೈಕ್

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಫೇಸ್ ಬುಕ್,  ಕಾಂಗ್ರೆಸ್​​​ ಖಾತೆಗಳ ಮೇಲೆ ಸರ್ಜಿಕಲ್​ ಸ್ಟ್ರೈಕ್ ನಡೆಸಿದ ಬೆನ್ನಲ್ಲೇ ಇದೀಗ  ಪ್ರಧಾನಿ ನರೇಂದ್ರ ಮೋದಿ ಅವರ ‘ನಮೋ ಆ್ಯಪ್​​’ಗೆ ಸಂಬಂಧಿಸಿದ ಪೇಜ್ ಗಳನ್ನ ಫಿನಿಶ್ ಮಾಡಿದೆ.

Facebook removes 15 pages linked to IT firm managing NaMo app
Author
Bengaluru, First Published Apr 1, 2019, 9:25 PM IST

ನವದೆಹಲಿ, [ಏ01]: ದೇಶದಲ್ಲಿ ಲೋಕಸಭೆ ಚುನಾವಣೆಯ ಬಿಸಿ ಜೋರಾಗಿದೆ. ಅದರಲ್ಲೂ ಫೇಸ್​ಬುಕ್​, ಟ್ವಿಟರ್​, ವಾಟ್ಸಾಪ್​​ನಲ್ಲಿ ಚುನಾವಣದ ಕಾವು ದಿನದಿಂದ ದಿನಕ್ಕೆ ರಂಗೇರಿದೆ. 

ಬಹುಮಖ್ಯವಾಗಿ ಸಾಮಾಜಿಕ ಜಾಲತಾಣಗಳ ಪ್ರಮುಖ ವೇದಿಕೆಯಾಗಿರುವ ಫೇಸ್​​ಬುಕ್​​ನಲ್ಲಿ ಪ್ರಚಾರದ ಅಬ್ಬರ, ಆರೋಪ, ಪ್ರತ್ಯಾರೋಪಗಳ ಭರಾಟೆ ಜೋರಾಗಿದೆ.  ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ವಿರುದ್ಧ ಟೀಕಾಪ್ರಹಾರ ಮಾಡುವುದಕ್ಕೆ ಫೇಸ್​ಬುಕ್​ ಕೆಲವು ಖಾತೆಗಳ ಮೇಲೆ ಸರ್ಜಿಕಲ್​ ಸ್ಟ್ರೈಕ್​ ನಡೆಸಿದೆ.

ಕಾಂಗ್ರೆಸ್’ನ 687 ಪೇಜ್ ಡಿಲೀಟ್ ಮಾಡಿದ ಫೇಸ್’ಬುಕ್!

ಕಾಂಗ್ರೆಸ್’ನ ಐಟಿ ಸೆಲ್’ನೊಂದಿಗೆ ಗುರುತಿಸಿಕೊಂಡಿದ್ದ 687 ಪೇಜ್ ಹಾಗೂ ಖಾತೆಗಳನ್ನು ಫಿನಿಶ್ ಮಾಡಿರುವ ಬೆನ್ನಲ್ಲೇ  ಪ್ರಧಾನಿ ನರೇಂದ್ರ ಮೋದಿ ಅವರ ‘ನಮೋ ಆ್ಯಪ್​​’ಗೆ ಸಂಬಂಧಿಸಿದ ಒಟ್ಟು 15 ಫೇಸ್​ಬುಕ್​ ಪೇಜ್​​ಗಳಿಗೆ ಕತ್ತರಿ ಬಿದ್ದಿದೆ.

ಫೇಸ್​ಬುಕ್​ ಮೊದಲು ಪಾಕಿಸ್ತಾನ ಸೇನೆಗೆ ಸಂಬಂಧಿಸಿದ ಕೆಲ ಖಾತೆಗಳನ್ನೂ ರಿಮೂವ್ ಮಾಡಿತ್ತು. ಇದೀಗ ನಮೋ ಆ್ಯಪ್​ ಮೇಲೆ ಕಣ್ಣಿಟ್ಟಿರುವ ಫೇಸ್​ಬುಕ್​​, ಸಿಲ್ವರ್​ ಐಟಿ ಸಂಸ್ಥೆಗೆ ಸಂಬಂಧಿಸಿದ 15 ಫೇಸ್​ಬುಕ್​ ಪೇಜ್​ಗಳನ್ನ ಡಿಲೀಟ್ ಮಾಡಿದೆ. 

Follow Us:
Download App:
  • android
  • ios