Asianet Suvarna News Asianet Suvarna News

ನೋಡ್ದ್ಯಾ ಚಿನ್ನು?: ಒಂದೇ ಫ್ರೇಮ್‌ನಲ್ಲಿ ಭೂಮಿ, ಚಂದ್ರ ಮತ್ತು ಬೆನ್ನು!

ನಾಸಾದಿಂದ ಅಪರೂಪದಲ್ಲೇ ಅಪರೂಪದ ಫೋಟೋ| ಬೆನ್ನು ಕ್ಷುದ್ರಗ್ರಹ ಅಧ್ಯಯನದಲ್ಲಿ ನಿರತವಾಗಿರುವ OSIRIS-REx ನೌಕೆ| ಭೂಮಿ, ಚಂದ್ರ ಮತ್ತು ಬೆನ್ನು ಒಂದೇ ಫ್ರೇಮ್ ನಲ್ಲಿ| ಬೆನ್ನು ಕ್ಷುದ್ರಗ್ರಹದಿಂದ ಕೇವಲ 43 ಕಿ.ಮೀ. ದೂರದಲ್ಲಿ OSIRIS-REx| ಬೆನ್ನು ಕ್ಷುದ್ರಗ್ರಹ ಭೂಮಿಯಿಂದ 114 ಮಿಲಿಯನ್ ಕಿ.ಮೀ. ದೂರ

Earth, Moon and Asteroid Bennu in a Single Photo
Author
Bengaluru, First Published Jan 12, 2019, 2:43 PM IST

ವಾಷಿಂಗ್ಟನ್(ಜ.12): ಇದು ನಾಸಾದ ಅಪರೂಪದಲ್ಲೇ ಅಪರೂಪದ ಚಿತ್ರಗಳಲ್ಲಿ ಒಂದು ಎಂದರೆ ಖಂಡಿತ ತಪ್ಪಾಗಲಾರದು. ಬೆನ್ನು ಕ್ಷುದ್ರಗ್ರಹದ ಅಧ್ಯಯನದಲ್ಲಿ ನಿರತವಾಗಿರುವ OSIRIS-REx ನೌಕೆ ಈ ಅಪರೂಪದ ಫೋಟೋ ಸೆರೆ ಹಿಡಿದಿದೆ.

OSIRIS-REx ನೌಕೆಯಿಂದ ಕ್ಲಿಕ್ಕಿಸಿದ ಈ ಫೋಟೋದಲ್ಲಿ ಭೂಮಿ, ಚಂದ್ರ ಮತ್ತು ಬೆನ್ನು ಕ್ಷುದ್ರಗ್ರಹ ಒಂದೇ ಫ್ರೇಮ್ ನಲ್ಲಿ ಸೆರೆಯಾಗಿದೆ.

OSIRIS-REx ನೌಕೆ ಬೆನ್ನು ಕ್ಷುದ್ರಗ್ರಹದಿಂದ ಕೇವಲ 43 ಕಿ.ಮೀ. ದೂರ ಇದ್ದು, ಇದೇ ವೇಳೆ ಕಳೆದ ಡಿ.03 ರಂದು OSIRIS-REx ನೌಕೆ ಬೆನ್ನು ಕ್ಷುದ್ರಗ್ರಹದ ಕೇಂದ್ರದಿಂದ ಕೇವಲ 1.6 ಕಿ.ಮೀ. ದೂರದಲ್ಲಿ ಹಾದು ಹೋಗುವ ಮೂಲಕ, ಮಾನವ ನಿರ್ಮಿತ ನೌಕೆಯೊಂದು ಯಾವುದೇ ಖಗೋಳೀಯ ವಸ್ತುವಿಗೆ ಇಷ್ಟು ಸಮೀಪ ಹೋದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅದರಂತೆ 2020ರಲ್ಲಿ OSIRIS-REx ನೌಕೆ ಬೆನ್ನು ಕ್ಷುದ್ರಗ್ರಹದ ಮಾದರಿ ತುಣುಕೊಂದನ್ನು ಸಂಗ್ರಹಿಸಲಿದ್ದು, ಇದರ ಅಧ್ಯಯನಕ್ಕೆ ಸಹಾಯಕಾರಿಯಾಗಲಿದೆ.

ಇನ್ನು OSIRIS-REx ನೌಕೆ ಈ ಫೋಟೋ ಕ್ಲಿಕ್ಕಿಸುವಾಗ ಬೆನ್ನು ಕ್ಷುದ್ರಗ್ರಹ ಭೂಮಿಯಿಂದ 114 ಮಿಲಿಯನ್ ಕಿ.ಮೀ. ದೂರ ಇತ್ತು ಎಂದು ನಾಸಾ ತಿಳಿಸಿದೆ.

ಭೂಮಿಗೆ ಅಪ್ಪಳಿಸಲಿದೆ ‘ಬೆನ್ನು’: ನಾಸಾ ಬಿದ್ದಿದೆ ಇದರ ಬೆನ್ನು!

Follow Us:
Download App:
  • android
  • ios