technology
By Suvarna Web Desk | 08:58 AM April 10, 2017
BSNL ಗ್ರಾಹಕರಿಗೆ ಸಿಹಿಸುದ್ದಿ!: ಕೇವಲ 249 ರೂಪಾಯಿಗೆ 300 ಜಿಬಿ ಡೇಟಾ ಹಾಗೂ ಉಚಿತ ಕರೆಗಳು!

Highlights

BSNL ಇದೀಗ ತನ್ನ ಗ್ರಾಹಕರಿಗೆ 249 ರೂ. ಬೆಲೆಗೆ 2Mbps ಸ್ಪೀಡ್ ಹೊಂದಿರುವ 300 ಜಿಬಿ ಇಂಟರ್'ನೆಟ್ ಡೇಟಾ ನೀಡುತ್ತಿದೆ. ಈಗಾಗಲೇ ದೇಶದಾದ್ಯಂತ ಟೆಲಿಕಾಂ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಿರುವ ಜಿಯೋಗೆ ಸೆಟ್ಟು ಹೊಡೆಯಲು BSNL ಇಂತಹುದ್ದೊಂದು ಆಫರ್ ಪ್ರಸ್ತುತಪಡಿಸುತ್ತಿದೆ. ಇದರಿಂದ ಗ್ರಾಹಕರ ಮುಖದಲ್ಲಿ ನಗು ಚಿಮ್ಮಿದೆ.

ನವದೆಹಲಿ(ಎ.10): BSNL ಇದೀಗ ತನ್ನ ಗ್ರಾಹಕರಿಗೆ 249 ರೂ. ಬೆಲೆಗೆ 2Mbps ಸ್ಪೀಡ್ ಹೊಂದಿರುವ 300 ಜಿಬಿ ಇಂಟರ್'ನೆಟ್ ಡೇಟಾ ನೀಡುತ್ತಿದೆ. ಈಗಾಗಲೇ ದೇಶದಾದ್ಯಂತ ಟೆಲಿಕಾಂ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಿರುವ ಜಿಯೋಗೆ ಸೆಟ್ಟು ಹೊಡೆಯಲು BSNL ಇಂತಹುದ್ದೊಂದು ಆಫರ್ ಪ್ರಸ್ತುತಪಡಿಸುತ್ತಿದೆ. ಇದರಿಂದ ಗ್ರಾಹಕರ ಮುಖದಲ್ಲಿ ನಗು ಚಿಮ್ಮಿದೆ.

ಬಿಬಿ ಅನ್'ಲಿಮಿಟೆಡ್ 249 ಎಂಬ ಹೆಸರಿನಿಂದ ಆಫರ್'ನ್ನು BSNL ಪರಿಚಯಿಸುತ್ತಿದೆ. ಈ ಮೂಲಕ ತಿಂಗಳೊಂದಕ್ಕೆ 249 ರೂಪಾಯಿ ರೀಚಾರ್ಜ್ ಮಾಡಿಸಿಕೊಂಡು ಅನಿಯಮಿತ ಡೇಟಾ ಪಡೆಯಬಹುದಾಗಿದೆ. ಸದ್ಯ ಈ ಪ್ಲಾನ್ ಅನ್ವಯ ಒಂದು ದಿನಕ್ಕೆ 10 ಜಿಬಿ ಡೇಟಾವನ್ನು 2Mbps ಸ್ಪೀಡ್'ನಲ್ಲಿ ಬಳಸಬಹುದಾಗಿದ್ದು, ಿದಕ್ಕೂ ಹೆಚ್ಚು ಡೇಟಾ ಬಳಸುವುದಾದರೆ ಸ್ಪೀಡ್ 1Mbps ಗೆ ಇಳಿಯಲಿದೆ.

ಇನ್ನು ತಿಂಗಳೊಂದಕ್ಕೆ 300 ಜಿಬಿ ಡೇಟಾ ಮಾತ್ರ ಬಳಸುವ ಅವಕಾಶವಿದೆ. ಒಂದು ವೇಳೆ ದಿನವೊಂದರಲ್ಲಿ 10 ಜಿಬಿ ಡೇಟಾ ಬಳಸಲು ನಿಮ್ಮಿಂದ ಸಾಧ್ಯವಾಗಿಲ್ಲವೆಂದಾದರೆ ಉಳಿದ ಡೇಟಾ ನೀವು ಮರುದಿನ ಬಳಸಬಹುದು. ಉದಾಹರಣೆಗೆ ಒಂದು ದಿನ ನೀವು ಕೇವಲ 2 ಜಿಬಿ ಬಳಸಿದ್ದೀರೆಂದಾದರೆ, ಮರುದಿನ ನೀವು ಉಪಯೋಗಿಸಬಹುದಾದ ಡೇಟಾ 10+8 ಜಿಬಿ ಆಗುತ್ತದೆ.

ಒಂದು ತಿಂಗಳ ಸೆಕ್ಯುರಿಟಿ ಡೆಪಾಸಿಟ್ ಮಾಡಿ ಈ ಪ್ಲಾನ್ ನೀವು ಆ್ಯಕ್ಟಿವೇಟ್ ಮಾಡಬಹುದಾಗಿದೆ. ಇನ್ನು BSNL ವೆಬ್'ಸೈಟ್'ನಲ್ಲಿ ಈ ಕುರಿತಾಗಿ ಮಾಹಿತಿ ನೀಡಲಾಗಿದ್ದು, ಈ ಪ್ಲಾನ್ ಆ್ಯಕ್ಟಿವೇಟ್ ಮಾಡಿಕೊಂಡು ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ಅನಿಯಮಿತ ಉಚಿತ ಕರೆ ಮಾಡುವ ಸೌಲಭ್ಯವೂ ಸಿಗಲಿದೆ. ಈ ಪ್ಲಾನ್ ಜಮ್ಮು ಕಾಶ್ಮೀರ ಹಾಗೂ ಅಂಡಮಾನ್ ನಿಕೋಬಾರ್ ಪ್ರದೇಶವನದನು ಹೊರತುಪಡಿಸಿ ಉಳಿದೆಲ್ಲರಿಗೂ ಸಿಗಲಿದೆ. ಪ್ರತಿ ತಿಂಗಳು 249 ರೂಪಾಯಿ ರೀಚಾರ್ಜ್ ಮಾಡಿ ಮೊದಲ ಆರು ತಿಂಗಳು ಈ ಸೇವೆಯನ್ನು ಪಡೆಯಬಹುದು, ಬಳಿಕ 'BBG Combo ULD 499' ಪ್ಲಾನ್ ಆಗಿ ಇದನ್ನು ಬದಲಾಯಿಸಲಾಗುತ್ತದೆ.

ಕೃಪೆ: NDTv

Show Full Article


Recommended


bottom right ad