Asianet Suvarna News Asianet Suvarna News

ನಾವೂ ಯಾರಿಗೂ ಕಮ್ಮಿಯಿಲ್ಲ; ಜಿಯೋಗೆ ಬಿಎಸ್‌ಎನ್‌ಎಲ್ ಸೆಡ್ಡು!

ಇಂದಿನ ಯುವಜನರಿಗೆ ಇಂಟರ್ನೆಟ್ ಇದ್ದರೆ ಸಾಲದು, ಇಂಟರ್ನೆಟ್ ಸ್ಪೀಡ್ ಇರ್ಬೇಕು. ಕಣ್ಣು ಮುಚ್ಚಿ ತೆರೆಯುವಲ್ಲಿ ಫೈಲ್‌ಗಳು ಡೌನ್‌ಲೋಡ್ ಆಗಿರಬೇಕು, ಹಾಗೇನೆ, ದರ ಕೂಡಾ ಕೈಗೆಟಕುವಂತಿರಬೇಕು. 
 

BSNL Introduces Bharat Fiber Internet Service in India
Author
Bengaluru, First Published Jan 22, 2019, 7:46 PM IST

ಇಂಟರ್ನೆಟ್ ಇಲ್ಲದೆ ಏನೂ ಇಲ್ಲ ಎಂಬಂತಾಗಿದೆ ಇಂದಿನ ಸ್ಥಿತಿ. ತಂತ್ರಜ್ಞಾನ ಅಭಿವೃದ್ಧಿಯಾದಂತೆ, ಮಾರುಕಟ್ಟೆ ವಿಸ್ತರಿಸುತ್ತಿದೆ. ಟೆಲಿಕಾಂ ಹಾಗೂ ಇಂಟರ್ನೆಟ್ ಕ್ಷೇತ್ರದಲ್ಲಿಯೂ ಕೂಡಾ ಪೈಪೋಟಿ ಹೆಚ್ಚಿದೆ. ಇದೀಗ, ಸರ್ಕಾರಿ ಸ್ವಾಮ್ಯದ BSNL ಕೂಡಾ ಹೊಸ ಸೇವೆಯನ್ನು ಆರಂಭಿಸಿದ್ದು, ರಿಲಯನ್ಸ್‌ಗೆ ಸೆಡ್ಡು ಹೊಡೆಯಲು ಮುಂದಾಗಿದೆ.

BSNL ಇದೀಗ ಭಾರತದಾದ್ಯಂತ ‘ಭಾರತ್ ಫೈಬರ್’ ಎಂಬ ಹೆಸರಿನಲ್ಲಿ Fibre-To-The-Home (FTTH) ಇಂಟರ್ನೆಟ್ ಸೇವೆಯನ್ನು ಆರಂಭಿಸಿದ್ದು, ರಿಲಯನ್ಸ್‌ನ Jio GigaFiberಗೆ ಪ್ರತಿಸ್ಪರ್ಧೆ ನೀಡುತ್ತಿದೆ.

BSNLನ ಈ ಹೊಸ ಸೇವೆ ಕರ್ನಾಟಕ ಸೇರಿದಂತೆ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಭ್ಯವಿದೆ.

ಅಬ್ಬಬ್ಬಾ... ಮೊಬೈಲ್ ಪ್ರಿಯರ ನಿದ್ದೆಗೆಡಿಸಿರುವ Xiaomi Redmi Note 7!

ಸಂಪರ್ಕ ಪಡೆಯುವುದು ಹೇಗೆ?

ಸಂಪರ್ಕ ಪಡೆಯಲಿಚ್ಛಿಸುವವರು ₹500 ರಿಫಂಡೇಬಲ್ ಸೆಕ್ಯೂರಿಟಿ ಡಿಪಾಸಿಟ್ ಪಾವತಿಸಬೇಕು. ಬಳಿಕ ಪ್ರತಿ ತಿಂಗಳ ಶುಲ್ಕ ₹90 ಅಥವಾ ವಾರ್ಷಿಕ ₹1080ವನ್ನು ಪಾವತಿಸಬೇಕಾಗುತ್ತದೆ. 

ADSL WiFi ಮಾಡೆಮ್ ಜೊತೆ ಈ ಸೇವೆ ಪಡೆಯುವವರು ಅದಕ್ಕೆ ಹೆಚ್ಚುವರಿ ಶುಲ್ಕ ಮಾಸಿಕ ₹200 ಅಥವಾ ವಾರ್ಷಿಕ ₹1500 ಬಾಡಿಗೆಯನ್ನು ಪಾವತಿಸಬೇಕು. 

ಏನೇನು ಪ್ಲಾನ್‌ಗಳಿವೆ?

ಇವುಗಳ ಜೊತೆಗೆ BSNL ವಿವಿಧ ಮಾಸಿಕ ಪ್ಲಾನ್‌ಗಳನ್ನು ಪ್ರಕಟಿಸಿದೆ. 

ಅವುಗಳ ಪೈಕಿ Fibro Combo ULD 777 ಅತೀ ಅಗ್ಗದ ಮಾಸಿಕ ಪ್ಲಾನ್ ಆಗಿದ್ದು, ₹777 ಪಾವತಿಸಿ, 50 Mbps ಡೌನ್‌ಲೋಡ್ ಸ್ಪೀಡ್‌ನೊಂದಿಗೆ 500GB ಡೇಟಾವನ್ನು ಬಳಸಬಹುದು. ಈ ಲಿಮಿಟ್ ಮುಗಿದ ಬಳಿಕ ಸ್ಪೀಡ್ 2Mbpsಗೆ ಸೀಮಿತವಾಗಲಿದೆ. ಈ ಆಫರ್ ಜತೆಗೆ 1GB ಅಕೌಂಟ್ ಸ್ಪೇಸ್ ಇರುವ ಒಂದು ಉಚಿತ ಈಮೇಲ್ ಐಡಿಯು ಸಿಗಲಿದೆ.

Samsungನಿಂದ ಅಗ್ಗದ ಗ್ಯಾಲಕ್ಸಿ ಫೋನ್‌ಗಳು! ನೀವು ಬೆಲೆ ನಂಬೋದೆ ಕಷ್ಟ!

ULD1277 ಪ್ಲಾನ್‌ನಲ್ಲಿ, ಪ್ರತಿ ತಿಂಗಳು ₹1277 ಪಾವತಿಸಿದರೆ, 100Mbps ಸ್ಪೀಡ್‌ನೊಂದಿಗೆ 750GB ಡೇಟಾ ಬಳಸಬಹುದು. ಬಳಕೆ ಮಿತಿ ಮೀರಿದ್ದಲ್ಲಿ, 2Mbps ವೇಗದಲ್ಲಿ ಇಂಟರ್ನೆಟ್ ಬಳಸಬೇಕಾಗುತ್ತದೆ. ಈ ಆಫರ್ ಜತೆಗೂ 1GB ಅಕೌಂಟ್ ಸ್ಪೇಸ್ ಇರುವ ಒಂದು ಉಚಿತ ಈಮೇಲ್ ಐಡಿಯು ಸಿಗಲಿದೆ.

Fibro Combo ULD 3999 ಪ್ಲಾನ್‌ನಲ್ಲಿ 60Mbps ಸ್ಪೀಡ್‌ನಲ್ಲಿ 750GB ಡೇಟಾ ಹಾಗೂ ULD 5999ರಲ್ಲಿ 70Mbps ಸ್ಪೀಡ್‌ನಲ್ಲಿ 1250GB ಡೇಟಾ ಸಿಗುತ್ತದೆ.

ಪ್ಲಾನ್‌ಗಳ ಕಥೆ ಇಲ್ಲಿಗೆ ಮುಗಿದಿಲ್ಲ. BSNL ಬಳಿ ULD 9999 ಮತ್ತು ULD 6999 ಪ್ಲಾನ್‌ಗಳೂ ಇವೆ! ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 100Mbps ಸ್ಪೀಡ್‌ನಲ್ಲಿ 2200GB ಹಾಗೂ 3500GB ಡೇಟಾ ಪಡೆಯಬಹುದು.  

 

Follow Us:
Download App:
  • android
  • ios