Asianet Suvarna News Asianet Suvarna News

‘ಲೋಕಸಮರ’ಕ್ಕೂ ಮುನ್ನಾ ಕಾಂಗ್ರೆಸ್-ಬಿಜೆಪಿ ಸೋಶಿಯಲ್ ಮೀಡಿಯಾ ಸಮರ ಹೀಗಿದೆ...

ಲೋಕಸಭೆ ಚುನಾವಣೆಗೆ ಭಾರತ ಸಿದ್ಧವಾಗುತ್ತಿದೆ. ಇನ್ನು ಒಂದೆರಡು ತಿಂಗಳುಗಳಲ್ಲಿ ಲೋಕಸಭಾ ಚುನಾವಣಾ ಅಖಾಡ ರಂಗೇರಲಿದೆ. ಚುನಾವಣೆ ಸಂದರ್ಭದಲ್ಲಿ ಮತದಾರರ ಒಲೈಕೆಗಾಗಿ ರ್ಯಾಲಿ, ಪೋಸ್ಟರ್, ಹ್ಯಾಂಡ್ ಬಿಲ್ಸ್, ಮುಂತಾದ ಸಾಂಪ್ರದಾಯಿಕ ವಿಧಾನಗಳೊಂದಿಗೆ, ರಾಜಕೀಯ ಪಕ್ಷಗಳು ಆಧುನಿಕ ತಂತ್ರಜ್ಞಾನ ಬಳಸುವಲ್ಲಿ ಹಿಂದೆ ಬಿದ್ದಿಲ್ಲ. 
 

Ahead of Lok Sabha Elections Parties Gearing up For Social Media Battle
Author
Bengaluru, First Published Dec 21, 2018, 1:28 PM IST

ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಶಿಯಲ್ ಮೀಡಿಯಾ ಬಹಳ ಪ್ರಭಾವ ಬೀರಿತ್ತು. ಕೇವಲ ಭಾರತದಲ್ಲೇ ಅಲ್ಲ ಅಂತರಾಷ್ಟ್ರೀಯ ಮಟ್ಟದಲ್ಲೂ ಸೋಶಿಯಲ್ ಮೀಡಿಯಾ, ವಿಶೇಷವಾಗಿ ಫೇಸ್ಬುಕ್, ಟ್ವಿಟರ್ ಮತ್ತು ವಾಟ್ಸಪ್ ಮತದಾರರನ್ನು ಒಲೈಸುವಲ್ಲಿ ಬಳಕೆಯಾಗುತ್ತಿದೆ.

ಭಾರತದಲ್ಲಿ ಸುಮಾರು 900 ಮಿಲಿಯನ್ ಮತದಾರರಿದ್ದಾರೆ, ಹಾಗೂ ಅರ್ಧ ಬಿಲಿಯನ್ ಮಂದಿಗೆ ಇಂಟರ್ನೆಟ್ ಸಂಪರ್ಕವಿದೆ. ಭಾರತದಲ್ಲಿ ಸುಮಾರು 300 ಮಿಲಿಯನ್ ಫೇಸ್ಬುಕ್ ಬಳಕೆದಾರರಿದ್ದು, 200 ಮಿಲಿಯನ್ ಮಂದಿ ವಾಟ್ಸಪ್ ಬಳಸುತ್ತಿದ್ದಾರೆ. ಟ್ವಿಟರ್ ಬಳಸುವವರ ಸಂಖ್ಯೆಯೂ ಸರಿಸುಮಾರು ಅಷ್ಟೇ ಇದೆ.

ಕಳೆದ ಬಾರಿ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ‘ಟೆಕ್’ ಕೇಂದ್ರಿತ ನರೇಂದ್ರ ಮೋದಿ ಹಾಗೂ ಬಿಜೆಪಿ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿತ್ತು. 2015ರಲ್ಲಿ ಟ್ವಿಟರ್‌ಗೆ ಪದಾರ್ಪಣೆ ಮಾಡಿದ್ದ ರಾಹುಲ್ ಗಾಂಧಿ, ಸೋಶಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಪ್ರಭಾವ ಹೆಚ್ಚಿಸಲು  ಬಹಳಷ್ಟು ಪರಿಶ್ರಮ ಪಟ್ಟಿದ್ದಾರೆ. 

ಇದನ್ನೂ ಓದಿ: ವಾಟ್ಸಪ್ ಗ್ರೂಪ್ ಇನ್ನು ಸುಲಭವಲ್ಲ? ಬರಲಿದೆ ಹೊಸ ನಿಯಮ!

2014 ಲೋಕಸಭೆ ಚುನಾವಣೆಗಳ ಬಳಿಕ ನಡೆದ ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಆಯಾಯ ಪಕ್ಷದ ಐಟಿ/ಸೋಶಿಯಲ್ ಮೀಡಿಯಾ ಸೆಲ್‌ಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ.

ಪಕ್ಷಗಳ ಅಧಿಕೃತ ಹ್ಯಾಂಡಲ್ ಹಾಗೂ ನಾಯಕರ ಖಾತೆಗಳನ್ನು ನಿರ್ವಹಿಸಲು ಟೀಂಗಳು ರಚನೆಯಾಗಿವೆ. ಅದರ ಹೊರತಾಗಿ ಗ್ರಾ. ಪಂ. ಮಟ್ಟದವರೆಗೂ ರಾಜಕಾರಣಿಗಳು ಸೋಶಿಯಲ್ ಮಿಡಿಯಾ ಮೊರೆಹೋಗಿರುವುದು ಸರ್ವೆಸಾಮನ್ಯ.

2014 ಲೋಕಸಭೆ ಚುನಾವಣೆ ವೇಳೆ ಭಾರತದಲ್ಲಿ 155 ಮಿಲಿಯನ್‌ರಷ್ಟಿದ್ದ ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ, ಒಂದು ಅಂದಾಜಿನ ಪ್ರಕಾರ 450 ಮಿಲಿಯನ್ ದಾಟಿದೆ.

ಕಳೆದ ಪಂಚರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಯ್ಟರ್ಸ್ ಸುದ್ದಿ ಸಂಸ್ಥೆಯು ಸೋಶಿಯಲ್ ಮೀಡಿಯಾ ವಾರ್ ರೂಂಗಳಿಗೆ ಭೇಟಿ ನೀಡಿ ವರದಿ ಮಾಡಿತ್ತು. 3 ಬೆಡ್ ರೂಮ್ ಮನೆಯನ್ನೇ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದ ಕಾಂಗ್ರೆಸ್ ಐಟಿ ಸೆಲ್ ತಂಡದ ಸದಸ್ಯರು ಎಲ್ಲಾ ಸುದ್ದಿ ಚ್ಯಾನೆಲ್/ತಾಣಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಆಡಿಯೋ, ವಿಡಿಯೋ ಮತ್ತು ಗ್ರಾಫಿಕ್ಸ್ ಪರಿಣಿತರ ತಂಡ ಕಂಟೆಟ್ಗಳನ್ನು ರಚಿಸಿ ವಾಟ್ಸಪ್ ಮೂಲಕ ಸ್ವಯಂಸೇವಕರಿಗೆ ತಲುಪಿಸುವ ಕೆಲಸ ಮಾಡುತಿತ್ತು, ಎಂದು ಹೇಳಿತ್ತು. ಆದರೆ ಬಿಜೆಪಿ ಐಟಿ ಸೆಲ್ ವಾರ್ ರೂಂಗೆ ಭೇಟಿಗೆ ಅನುಮತಿ ಸಿಕ್ಕಿರಲಿಲ್ಲ.

ಫೇಸ್ಬುಕ್‌ನಲ್ಲಿ ಜಾಗತಿಕವಾಗಿ 43 ಮಿಲಿಯನ್ ಮತ್ತು ಟ್ವಿಟರ್‌ನಲ್ಲಿ 45 ಮಿಲಿಯನ್ ಫಾಲೋವರ್ಸ್ ಇರುವ ಮೋದಿಯನ್ನು, ಟ್ವಿಟರ್‌ನಲ್ಲಿ 8.1 ಮಿಲಿಯನ್, ಫೇಸ್ಬುಕ್‌ನಲ್ಲಿ 2.2 ಮಿಲಿಯನ್ ಫಾಲೋವರ್ಸ್ ಇರುವ ರಾಹುಲ್ ಗಾಂಧಿ ಆನ್‌ಲೈನ್ ಪೈಪೋಟಿ ನೀಡುವುದು ಕಾಂಗ್ರೆಸ್ ಮುಂದಿರುವ ಸವಾಲು. 

ಮತದಾರರ ಅಭಿಪ್ರಾಯ ರೂಪಿಸುವ ಕಂಟೆಟ್‌ಗಳನ್ನು ಜನರಿಗೆ ತಲುಪಿಸುವಲ್ಲಿ ವಾಟ್ಸಪ್ ಬಹಳ ಪ್ರಮುಖ ಪಾತ್ರವಹಿಸುತ್ತದೆ. ರಾಜಸ್ತಾನದಲ್ಲಿ ಕಾಂಗ್ರೆಸ್ ಸುಮಾರು 90000, ಬಿಜೆಪಿ 1 ಲಕ್ಷಕ್ಕಿಂತಲೂ ಹೆಚ್ಚು ವಾಟ್ಸಪ್ ಗ್ರೂಪ್‌ಗಳನ್ನು ರಚಿಸಿ ಕಾರ್ಯೋನ್ಮುಖವಾಗಿತ್ತು.

ಇದನ್ನೂ ಓದಿ: ವೈರಸ್ ಹಾವಳಿ, 22 ಆ್ಯಪ್‌ ಪ್ಲೇಸ್ಟೋರ್‌ನಿಂದ ಡಿಲೀಟ್! ನಿಮ್ಮ ಫೋನಿನಲ್ಲಿದಿಯಾ?

ಒಟ್ಟಾರೆಯಾಗಿ ನಗರವಾಸಿ, ಯುವಜನರು ಹಾಗೂ ಮೊದಲ ಬಾರಿ ವೋಟ್ ಮಾಡಲಿರುವ ಹೊಸ ಪೀಳಿಗೆಯನ್ನು ರೀಚ್ ಆಗಲು ಸೋಶಿಯಲ್ ಮೀಡಿಯಾ ಬಹಳ ಮುಖ್ಯ.

ಕರ್ನಾಟಕದಲ್ಲೂ ಕೂಡಾ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಗಳು ಸೋಶಿಯಲ್ ಮೀಡಿಯಾ ವಾರ್ ರೂಂಗಳ ಮೂಲಕ ಸಕ್ರಿಯವಾಗಿದ್ದುವು.  ಮೇಲ್ನೋಟಕ್ಕೆ/ ಅಂಕಿಸಂಖ್ಯೆಗಳಾಧಾರದಲ್ಲಿ ಬಿಜೆಪಿ ಮತ್ತು ಅದರ ನಾಯಕರು ಇತರೆಲ್ಲಾ ಪಕ್ಷಗಳಿಗಿಂತ ಮುಂದಿದ್ದಾರೆ.

ಬಿಜೆಪಿ ಫೇಸ್ಬುಕ್‌ನಲ್ಲಿ 6.83 ಲಕ್ಷ ಹಾಗೂ ಟ್ವಿಟರ್‌ನಲ್ಲಿ 2.83 ಲಕ್ಷ, ಕಾಂಗ್ರೆಸ್ ಫೇಸ್ಬುಕ್‌ನಲ್ಲಿ 2.16 ಲಕ್ಷ ಮತ್ತು ಟ್ವಿಟರ್‌ನಲ್ಲಿ 68K ಫಾಲೋವರ್ಸ್‌ಗಳನ್ನು ಹೊಂದಿವೆ. ಮುಂದಿನ ದಿನಗಳಲ್ಲಿ ಇವುಗಳಲ್ಲಿ ಭಾರೀ ಸಂಚಲನ ಉಂಟಾಗುವುದು ಮಾತ್ರ ಖಚಿತ. 

Follow Us:
Download App:
  • android
  • ios