Asianet Suvarna News Asianet Suvarna News

ರಜೆ ದಿನವೂ ಕಂದಾಯ ಇಲಾಖೆಯಲ್ಲಿ ಕೆಲಸ!

ಸಾಲು-ಸಾಲು ರಜೆಗಳ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸಾವಿರಾರು ಕಡತಗಳು ವಿಲೇವಾರಿಯಾಗದೆ ಬಾಕಿ ಉಳಿದಿದ್ದವು. ಸರಕಾರದ ಪ್ರಮುಖ ಇಲಾಖೆಯಾದ ಕಂದಾಯ ಇಲಾಖೆ ಕಡತಗಳು ವಿಲೇವಾರಿಯಾಗದೆ ಉಳಿದಿದ್ದರಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಉಂಟಾಗುತ್ತಿತ್ತು. ಹೀಗಾಗಿ ನ.12ರಂದು ಒಂದು ವಾರ ಕಡತ ವಿಲೇವಾರಿ ಸಪ್ತಾಹ ಮಾಡಿದ್ದೇವೆ- ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ. 

work on holiday in revenue department
Author
Bangalore, First Published Nov 19, 2018, 7:46 AM IST

ಬೆಂಗಳೂರು[ನ.19]: ಕಂದಾಯ ಇಲಾಖೆಯು ನ.12ರಿಂದ 18ರವರೆಗೆ ‘ಕಡತ ವಿಲೇವಾರಿ ಸಪ್ತಾಹ’ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ರಜಾ ದಿನವಾದ ಭಾನುವಾರವೂ (ನ.18) ಕಂದಾಯ ಇಲಾಖೆಯ ಎಲ್ಲಾ ಕಚೇರಿಗಳು ಕಾರ್ಯನಿರ್ವಹಿಸಿದ್ದು, ಸಪ್ತಾಹವು ಯಶಸ್ವಿಯಾಗಿ ಮುಗಿದಿದೆ ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದ್ದಾರೆ.

ಸಾಲು-ಸಾಲು ರಜೆಗಳ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸಾವಿರಾರು ಕಡತಗಳು ವಿಲೇವಾರಿಯಾಗದೆ ಬಾಕಿ ಉಳಿದಿದ್ದವು. ಸರಕಾರದ ಪ್ರಮುಖ ಇಲಾಖೆಯಾದ ಕಂದಾಯ ಇಲಾಖೆ ಕಡತಗಳು ವಿಲೇವಾರಿಯಾಗದೆ ಉಳಿದಿದ್ದರಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಉಂಟಾಗುತ್ತಿತ್ತು. ಹೀಗಾಗಿ ನ.12ರಂದು ಒಂದು ವಾರ ಕಡತ ವಿಲೇವಾರಿ ಸಪ್ತಾಹ ಮಾಡಿದ್ದೇವೆ. ಹೀಗಾಗಿ ರಾಜ್ಯಾದ್ಯಂತ ತಮ್ಮ ಕಚೇರಿಯೂ ಸೇರಿದಂತೆ ಎಲ್ಲ ಪ್ರಾದೇಶಿಕ ಆಯುಕ್ತರ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿಗಳೂ ಭಾನುವಾರವನ್ನು ಸಾರ್ವತ್ರಿಕ ರಜಾ ದಿನದ ಬದಲಾಗಿ ‘ಕರ್ತವ್ಯ ದಿನ’ ಎಂದು ಭಾವಿಸಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಇನ್ನಷ್ಟುರಚನಾತ್ಮಕ ಹಾಗೂ ಜನಪರ ಕ್ರಮಗಳನ್ನು ವಿಸ್ತೃತವಾಗಿ ಕೈಗೊಳ್ಳಲಾಗುವುದು. 21ನೇ ಶತಮಾನದಲ್ಲಿ ಕಂದಾಯ ಇಲಾಖೆಯು ತಂತ್ರಜ್ಞಾನ ಆಧರಿತವಾಗಿ ತ್ವರಿತ ಹಾಗೂ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಡತಗಳ ಕ್ಷಿಪ್ರ ವಿಲೇವಾರಿಗೆ ಮುಂದಾಗಿದ್ದೇವೆ. ಭಾನುವಾರ ನಡೆದ ಕಡತ ವಿಲೇವಾರಿಯಲ್ಲಿ ಸಪ್ತಾಹ ಆರಂಭವಾಗುವ ಮೊದಲು ತಮ್ಮಲ್ಲಿ ಬಾಕಿ ಇದ್ದ ಕಡತ, ವಿಲೇವಾರಿ ಆದ ಕಡತ ಹಾಗೂ ಬಾಕಿ ಇರುವ ಕಡತಗಳ ಬಗ್ಗೆ ಮಾಹಿತಿ ನೀಡುವಂತೆ ಎಲ್ಲಾ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಸದ್ಯದಲ್ಲೇ ಮಾಹಿತಿ ತರಿಸಿಕೊಂಡು ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದು ಸಚಿವ ಆರ್‌.ವಿ. ದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Follow Us:
Download App:
  • android
  • ios