Asianet Suvarna News Asianet Suvarna News

ಬೆಂಗಳೂರಿಗರೇ ಗಮನಿಸಿ, 2 ದಿನ ಕಾವೇರಿ ನೀರು ಪೂರೈಕೆ ವ್ಯತ್ಯಯ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾವೇರಿ ನೀರು ಸರಬರಾಜು ಯೋಜನೆ ನೆಟ್ಕಲ್‌ ಬ್ಯಾಲೆನ್ಸಿಂಗ್‌ ರಿಸರ್ವರ್‌(ಎನ್‌ಬಿಆರ್‌)ನಿಂದ ತೊರೆಕಾಡನಹಳ್ಳಿವರೆಗಿನ ಕಚ್ಚಾ ನೀರಿನ ಕೊಳವೆ ಮಾರ್ಗ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಎರಡು ದಿನಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

variation in cauvery water supply in bangalore
Author
Bangalore, First Published Dec 2, 2018, 10:02 AM IST

ಬೆಂಗಳೂರು[ಡಿ.02]: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾವೇರಿ ನೀರು ಸರಬರಾಜು ಯೋಜನೆ 4ನೇ ಹಂತದ 2ನೇ ಘಟ್ಟದ ಯೋಜನೆಯ ನೆಟ್ಕಲ್‌ ಬ್ಯಾಲೆನ್ಸಿಂಗ್‌ ರಿಸರ್ವರ್‌(ಎನ್‌ಬಿಆರ್‌)ನಿಂದ ತೊರೆಕಾಡನಹಳ್ಳಿವರೆಗಿನ ಕಚ್ಚಾ ನೀರಿನ ಕೊಳವೆ ಮಾರ್ಗ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸದರಿ ಮಾರ್ಗದಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳುವುದರಿಂದ ಡಿ.2ರಿಂದ ಡಿ.3ರವರೆಗೆ ನಗರದ ಕೆಲ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಹೆಗ್ಗನಹಳ್ಳಿ, ಲಗ್ಗೆರೆ, ದಾಸರಹಳ್ಳಿ, ಶ್ರೀಗಂಧ ಕಾವಲ್‌, ಪೀಣ್ಯ, ಟೆಲಿಕಾಂ ಲೇಔಟ್‌, ಕೆಬ್ಬಾಳು, ರಾಜಗೋಪಾಲನಗರ, ಶ್ರೀನಿವಾಸ ನಗರ, ಆರ್‌.ಆರ್‌ ನಗರ, ನಂದಿನಿ ಲೇಔಟ್‌, ಸಂಜಯ ನಗರ, ಬಾಹುಬಲಿ ನಗರ, ಜಾಲಹಳ್ಳಿ, ಹೂಡಿ, ಏರೋ ಇಂಜಿನ್‌, ಕೂಡ್ಲು, ನಾರಾಯಣಪುರ, ಓಎಂಬಿಆರ್‌, ರಾಮಮೂರ್ತಿ ನಗರ, ಕೆ.ಆರ್‌.ಪುರಂ, ಮಾರತಹಳ್ಳಿ, ಬೊಮ್ಮನಹಳ್ಳಿ, ಅಂಜನಾಪುರ, ಕೊತ್ತನೂರು, ಅರಕೆರೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಡಿ.2ರ ಮಧ್ಯರಾತ್ರಿ 12ರಿಂದ ಡಿ.3ರ ಮಧ್ಯಾಹ್ನ 12ರವರೆಗೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಜಲಮಂಡಳಿ ಮನವಿ ಮಾಡಿದೆ.

Follow Us:
Download App:
  • android
  • ios