Asianet Suvarna News Asianet Suvarna News

ಆ್ಯಂಬುಲೆನ್ಸ್‌, ಅಗ್ನಿಶಾಮಕದಳ, ಪೊಲೀಸ್‌ಗೆ ಒಂದೇ ಸಂಖ್ಯೆ 112

ಇನ್ನು ಮುಂದೆ ರಾಜ್ಯದಲ್ಲಿ ಪೊಲೀಸ್‌, ಅಗ್ನಿಶಾಮಕದಳ, ಆ್ಯಂಬುಲೆನ್ಸ್‌ ಮತ್ತು ಮಕ್ಕಳ ಸಹಾಯವಾಣಿ ಸೇರಿ ಇತರೆ ತುರ್ತು ಸೇವೆಗಳಿಗೆ ಏಕಕಾಲದಲ್ಲಿ ಸಂಪರ್ಕ ಸಾಧಿಸುವ ‘112’ ದೂರವಾಣಿ ಸಂಖ್ಯೆ ಕಾರ್ಯಾರಂಭ ಮಾಡಿದೆ. ಈ ಮೇಲಿನ ಯಾವುದೇ ತರ್ತು ಸೇವೆಗೂ ನೀವಿನ್ನು 112 ಡಯಲ್ ಮಾಡಿದರೆ ಸಾಕು. ಇದು ಹೇಗೆ ಕಾರ್ಯ ನಿರ್ವಹಿಸುತ್ತೆ, ಯಾವ ರೀತಿ ನೆರವಾಗಲಿದೆ ಎನ್ನುವ ಮಾಹಿತಿ ಇಲ್ಲಿದೆ.

 

same contact number for police ambulance fire force emergency
Author
Bangalore, First Published Nov 1, 2019, 8:17 AM IST

ಬೆಂಗಳೂರು(ನ.01): ಇನ್ನು ಮುಂದೆ ರಾಜ್ಯದಲ್ಲಿ ಪೊಲೀಸ್‌, ಅಗ್ನಿಶಾಮಕದಳ, ಆ್ಯಂಬುಲೆನ್ಸ್‌ ಮತ್ತು ಮಕ್ಕಳ ಸಹಾಯವಾಣಿ ಸೇರಿ ಇತರೆ ತುರ್ತು ಸೇವೆಗಳಿಗೆ ಏಕಕಾಲದಲ್ಲಿ ಸಂಪರ್ಕ ಸಾಧಿಸುವ ‘112’ ದೂರವಾಣಿ ಸಂಖ್ಯೆ ಕಾರ್ಯಾರಂಭ ಮಾಡಿದೆ.

ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ (ಇಆರ್‌ಎಸ್‌ಎಸ್‌) ‘112’ ದೂರವಾಣಿ ಸಂಖ್ಯೆಗೆ ಗುರುವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ನಗರದ ಎಂ.ಜಿ.ರಸ್ತೆಯಲ್ಲಿರುವ ಪೊಲೀಸ್‌ ಸಂವಹನ, ಆಧುನೀಕರಣ ಮತ್ತು ಲಾಜಿಸ್ಟಿಕ್ಸ್‌ ಕಚೇರಿ ಆವರಣದಲ್ಲಿ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ಇಂದಿನಿಂದ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿ ಇರಲೇ ಬೇಕು.

ಕೇಂದ್ರ ಸರ್ಕಾರ ಈ ಮಹತ್ವಾಕಾಂಕ್ಷೆ ಯೋಜನೆಗೆ .10 ಕೋಟಿ ಬಿಡುಗಡೆ ಮಾಡಿದ್ದು, ಉಳಿದ ಅನುದಾನವನ್ನು ರಾಜ್ಯ ಸರ್ಕಾರ ಭರಿಸಲಿದೆ. ಸಂಕಷ್ಟಕ್ಕೆ ಸಿಲುಕಿದವರು ದಿನದ 24 ಗಂಟೆ ಕಾರ್ಯ ನಿರ್ವಹಿಸಲಿದೆ. ಇಡೀ ದೇಶದಲ್ಲಿ ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ಈ ಕೇಂದ್ರೀಕೃತ ವ್ಯವಸ್ಥೆ ಜಾರಿಯಲ್ಲಿರಲಿದೆ ಎಂದು ಹೇಳಿದ್ದಾರೆ.

ಮೊದಲ ಹಂತದಲ್ಲಿ 183 ತುರ್ತು ಸ್ಪಂದನಾ ವಾಹನಗಳನ್ನು ಒದಗಿಸಲಾಗಿದ್ದು, ಈ ಸಂಖ್ಯೆಯನ್ನು ಮುಂದಿನ ದಿನಗಳಲ್ಲಿ 500ಕ್ಕೆ ಹೆಚ್ಚಿಸಲಾಗುವುದು. ರಾಜಧಾನಿ ಬೆಂಗಳೂರಿಗೆ 100 ವಾಹನಗಳನ್ನು ಒದಗಿಸಲು ಮುಂದಿನ ಬಜೆಟ್‌ನಲ್ಲಿ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಟಿಪ್ಪು ಪಠ್ಯದ ಕುರಿತು ನಿರ್ಧರಿಸಲು ಮಹತ್ವದ ಸಭೆ...

ತುರ್ತು ಸ್ಪಂದನಾ ಸಹಾಯ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳಬಾರದು. ಸಾರ್ವಜನಿಕರು ಸೂಕ್ತವಾಗಿ ವ್ಯವಸ್ಥೆಯನ್ನು ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಇದೇ ವೇಳೆ 183 ಸ್ಪಂದನಾ ವಾಹನ ಹಾಗೂ ಬಳಕೆದಾರರ ಕೈಪಿಡಿಯನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು. ಈಗಾಗಲೇ ಆಂಧ್ರಪ್ರದೇಶ, ಉತ್ತರಾಖಂಡ, ಪಂಜಾಬ್‌, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ತಮಿಳುನಾಡು, ಗುಜರಾತ್‌ ಸೇರಿ 16 ರಾಜ್ಯಗಳಲ್ಲಿ ಏಕರೂಪ ತುರ್ತು ಸೇವೆ ಆರಂಭವಾಗಿದೆ.

ತಾಂತ್ರಿಕ ತರಬೇತಿ:

ನೂತನ ಸೇವೆಯನ್ನು ಸಮರ್ಪಕವಾಗಿ ನಿರ್ವಹಿಸಲು ನಿಯಂತ್ರಣ ಕೊಠಡಿಯಲ್ಲಿ ಕೆಲಸ ಮಾಡುವ ನಿಸ್ತಂತು (ವೈರ್‌ಲೆಸ್‌) ವಿಭಾಗದ ಸಿಬ್ಬಂದಿಗೆ ತಾಂತ್ರಿಕ ತರಬೇತಿ ನೀಡಲಾಗಿದೆ. ಎಂ.ಜಿ.ರಸ್ತೆಯಲ್ಲಿರುವ ತುರ್ತು ಸ್ಪಂದನಾ ಸಹಾಯ ಕೇಂದ್ರದಲ್ಲಿ 180 ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪ್ರತಿ ಪಾಳಿಗೆ (ಶಿಫ್ಟ್‌) 60 ಮಂದಿ ಸಿಬ್ಬಂದಿಯಂತೆ, ದಿನದ ಮೂರು ಪಾಳಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

112 ಕಾರ‍್ಯ ನಿರ್ವಹಣೆ

ದೇಶದಾದ್ಯಂತ ತುರ್ತು ಸ್ಪಂದನ ಸಹಾಯ ವ್ಯವಸ್ಥೆ (ಇಆರ್‌ಎಸ್‌ಎಸ್‌) ಆಗಿರುವ 112 ಸಂಖ್ಯೆಯು ರಾಜ್ಯದ ಎಲ್ಲಾ ಜಿಲ್ಲೆಗಳೊಂದಿಗೆ ಸಂಪರ್ಕ ಹೊಂದಿರುತ್ತದೆ. ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಸಮನ್ವಯ ಕೇಂದ್ರಗಳನ್ನು (ಡಿಸಿಸಿ) ಸ್ಥಾಪಿಸಲಾಗಿದೆ. ಬೆಂಗಳೂರಿನಲ್ಲಿರುವ ಕೇಂದ್ರ ಕಚೇರಿಗೆ ಬರುವ ಕರೆಗಳನ್ನು ಸ್ವೀಕರಿಸಿ ಇಲ್ಲಿಂದಲೇ ಸಂಬಂಧಪಟ್ಟಜಿಲ್ಲಾ ಸಮನ್ವಯ ಕೇಂದ್ರಗಳಿಗೆ ರವಾನಿಸಲಾಗುತ್ತದೆ. ಅಲ್ಲಿಂದ ತುರ್ತು ನೆರವಿಗೆ ಅಗತ್ಯವಿರುವ ಸಂಬಂಧಪಟ್ಟವಾಹನ, ಸಿಬ್ಬಂದಿಯನ್ನು ಕಳುಹಿಸಿ ಕೊಡಲಾಗುತ್ತದೆ. ಕರೆ ಮಾಡಿದವರ ನೆರವಿಗೆ 8ರಿಂದ 10 ನಿಮಿಷದಲ್ಲಿ ನೆರವಿಗೆ ಧಾವಿಸುವಂತೆ ವ್ಯವಸ್ಥೆ ರೂಪಿಸಲಾಗಿದೆ.

ಡಯಲ್‌ 112 ಯೋಜನೆಗೆ ಜನರಿಗೆ ಪರಿಚಯವಾಗುವ ತನಕ ತುರ್ತು ಕರೆಗೆ ಮೀಸಲಿರುವ 100, 101 ಹಾಗೂ 108 ಸಂಖ್ಯೆಯನ್ನು ಮುಂದುವರೆಸಲು ಚಿಂತಿಸಲಾಗಿದೆ ಎಂದು ಎಡಿಜಿಪಿ ಆರ್‌.ಪಿ.ಶರ್ಮಾ ಹೇಳಿದರು.

ಆ್ಯಪ್‌ ಲಭ್ಯ

ಕೇಂದ್ರ ಸರ್ಕಾರ ‘112 ಇಂಡಿಯಾ’ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಿದೆ. ಗೂಗಲ್‌ ಪ್ಲೇ ಸ್ಟೋರ್‌ ಮೂಲಕ ಆ್ಯಪ್‌ಡೌನ್‌ ಮಾಡಿಕೊಳ್ಳಬಹುದು. ತುರ್ತು ಸಂದರ್ಭಗಳಲ್ಲಿ ‘ಪ್ಯಾನಿಕ್‌ ಎಸ್‌ಒಎಸ್‌’ ಬಟನ್‌ ಒತ್ತಿದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ರವಾನೆಯಾಗಲಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಲಿದ್ದಾರೆ.

Follow Us:
Download App:
  • android
  • ios