Asianet Suvarna News Asianet Suvarna News

ಫಾರಿನ್ ಟೂರ್ ಪ್ಲಾನ್ ಕೈ ಬಿಟ್ಟ ಸಚಿವ ಶೆಟ್ಟರ್

ಸ್ವಪಕ್ಷಿಯರಿಂದಲೇ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಜಗದೀಶ್ ಶೆಟ್ಟರ್ ತಮ್ಮ ವಿದೇಶಿ ಪ್ರವಾಸವನ್ನು ಕೈ ಬಿಟ್ಟಿದ್ದಾರೆ. 

Minister Jagadish Shettar Cancels His Foreign Trip Plan
Author
Bengaluru, First Published Nov 1, 2019, 12:24 PM IST

ಹುಬ್ಬಳ್ಳಿ [ನ.01]: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿರುವ ಹೊತ್ತಿನಲ್ಲಿಯೇ ಬೃಹತ್‌ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ಕುಟುಂಬ ಸಮೇತರಾಗಿ ವಿದೇಶಕ್ಕೆ ತೆರಳಲು ಮುಂದಾಗಿರುವುದಕ್ಕೆ  ಅಸಮಾಧಾನ ವ್ಯಕ್ತವಾಗಿದ ಬೆನ್ನಲ್ಲೇ ಪ್ರವಾಸ ರದ್ದು ಮಾಡಿದ್ದಾಗಿ ಹೇಳಿದ್ದಾರೆ. 

"

ಹುಬ್ಬಳ್ಳಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್ ನನಗೆ ವಿದೇಶ ಪ್ರವಾಸಕ್ಕೆ ಹೋಗುವ ಚಟ ಇಲ್ಲ. ಚೀನಾ ಕೈಗಾರಿಕಾ ವಿಭಾಗದ ಆಹ್ವಾನದ ಮೇರೆಗೆ ಪ್ರವಾಸ ಫಿಕ್ಸ್ ಆಗಿತ್ತು ಎಂದರು. 

ನಾನು ಮಜಾ ಮಾಡಲು ಹೊರಟಿರಲಿಲ್ಲ. ಪ್ರವಾಸದ ಬಗ್ಗೆ ಟೀಕೆ ವ್ಯಕ್ತವಾಗಿದ್ದು, ಪ್ರವಾಸ ರದ್ದು ಮಾಡುವೆ. ಚೀನಾ ಹಾಗೂ ಕೈಗಾರಿಕೆ ಇಲಾಖೆ ಆಹ್ವಾನವಿತ್ತು. ನಾನಿನ್ನೂ ನಿರ್ಧಾರ ಮಾಡಿರಲಿಲ್ಲ ಎಂದು ಹೇಳಿದರು. 

ಚೀನಾ ದೇಶದ ಎಂಟು ವಿವಿಧ ಕೈಗಾರಿಕೆಯ ಪ್ರತಿನಿಧಿಗಳು ರಾಜ್ಯದ ವಿವಿಧ ವಲಯದಲ್ಲಿ ಬಂಡವಾಳ ಹೂಡಿಕೆ ಮಾಡುವ ಸಂಬಂಧ ಜಗದೀಶ್‌ ಶೆಟ್ಟರ್‌ ಅವರನ್ನು  ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದರು. ಈ ವೇಳೆ ಚೀನಾ ದೇಶದ ಪ್ರತಿನಿಧಿಗಳು ಆಹ್ವಾನಿಸಿದ್ದರು. ಈ ಆಹ್ವಾನದ ಮೇರೆಗೆ ನ.5ರಿಂದ ಚೀನಾಕ್ಕೆ ತೆರಳಲು ನಿರ್ಧರಿಸಿದ್ದರು. ಅಲ್ಲಿಂದ ಬ್ರಿಟನ್‌ಗೂ ತೆರಳುವ ಉದ್ದೇಶವಿತ್ತು.

ಪ್ರವಾಹ ಪರಿಸ್ಥಿತಿ ಇದ್ದರೂ ಶೆಟ್ಟರ್‌ ವಿದೇಶ ಪ್ರವಾಸ: ವಿವಾದ...

ಆದರೆ, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇಂತಹ ಸಮಯದಲ್ಲಿ ಸಚಿವರು ವಿದೇಶ ಪ್ರವಾಸ ಕೈಗೊಳ್ಳುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಾಗಿ, ಅಂತಿಮವಾಗಿ ಶೆಟ್ಟರ್‌ ತಮ್ಮ ಪ್ರವಾಸ  ರದ್ದು ಮಾಡಿದ್ದಾಗಿ ಹೇಳಿದ್ದಾರೆ.

Follow Us:
Download App:
  • android
  • ios