Asianet Suvarna News Asianet Suvarna News

ಆಪರೇಷನ್‌ ತಡೆಗೆ ಕಾಂಗ್ರೆಸ್ ರಣತಂತ್ರ!

(‘ಹಸ್ತ’ವ್ಯಸ್ತ) ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಬೆಂಗಳೂರಿಗೆ ದೌಡು, ರಾಜ್ಯ ನಾಯಕರ ಜತೆ ಎಡೆಬಿಡದೆ ಸಮಾಲೋಚನೆ| ಬಿಜೆಪಿ ತೆಕ್ಕೆಗೆ ಬಿದ್ದ ಶಾಸಕರನ್ನು ಸಂಪರ್ಕಿಸಲು ಯತ್ನ| ಆನಂದ್‌ ಸಿಂಗ್‌, ಶ್ರೀಮಂತ ಪಾಟೀಲ್‌ರನ್ನು ಕರೆತಂದ ಡಿಕೆಶಿ, ಸತೀಶ್‌

Master Plan of congress to stop operation kamala
Author
Bangalore, First Published Jan 16, 2019, 7:40 AM IST

ಬೆಂಗ​ಳೂರು[ಜ.16]: ಆಪ​ರೇ​ಷನ್‌ ಕಮ​ಲದ ಬಗ್ಗೆ ಅಷ್ಟೇನೂ ತಲೆ​ಕೆ​ಡಿ​ಸಿ​ಕೊ​ಳ್ಳದೇ ನಿರು​ಮ್ಮ​ಳ​ವಾ​ಗಿದ್ದ ಕಾಂಗ್ರೆಸ್‌ ನಾಯ​ಕ​ರು ಇದೀಗ ಕಂಗಾ​ಲಾ​ಗಿ​ದ್ದಾರೆ. ಕಾರ​ಣ- ಅತೃಪ್ತ ಶಾಸ​ಕರ ದಂಡು ಬಿಜೆ​ಪಿ​ಯತ್ತ ವಾಲಿ​ರುವ ಸ್ಪಷ್ಟಸೂಚನೆ ದೊರ​ಕಿದೆ. ಪರಿ​ಣಾಮ- ರಾಜ್ಯ ಉಸ್ತು​ವಾರಿ ಕೆ.ಸಿ. ವೇಣು​ಗೋ​ಪಾಲ್‌ ನಗ​ರಕ್ಕೆ ದೌಡಾ​ಯಿ​ಸಿ ಅತೃ​ಪ್ತರ ಬಂಡಾ​ಯದ ಸರಿ​ಯಾದ ಚಿತ್ರಣ ಪಡೆ​ಯಲು ಪಕ್ಷದ ನಾಯ​ಕ​ರೊಂದಿಗೆ ಇಡೀ ದಿನ ಸರಣಿ ಸಭೆ ನಡೆ​ಸಿ​ದರು.

ಇಡೀ ದಿನದ ಸರಣಿ ಸಭೆಗಳು ಎರಡು ಪ್ರಮುಖ ವಿಷ​ಯ​ಗಳ ಬಗ್ಗೆ ನಡೆದವು.

1- ಅತೃ​ಪ್ತ ಶಾಸ​ಕ​ರನ್ನು ಮತ್ತೆ ಪಕ್ಷದ ತೆಕ್ಕೆಗೆ ತರು​ವುದು ಹೇಗೆ?

2- ಒಂದು ವೇಳೆ ಅತೃ​ಪ್ತರು ಕೈಕೊಟ್ಟೇ ಬಿಟ್ಟರೆ ಸಮ್ಮಿಶ್ರ ಸರ್ಕಾ​ರ​ವನ್ನು ಉಳಿ​ಸಿ​ಕೊ​ಳ್ಳಲು ಅನು​ಸ​ರಿ​ಸ​ಬೇ​ಕಾದ ಕಾನೂ​ನಾ​ತ್ಮಕ ಹಾಗೂ ಕಾನೂ​ನೇ​ತರ ಕ್ರಮ​ಗಳು ಏನಿ​ರ​ಬೇಕು?

ರಾಜ್ಯ​ದಲ್ಲಿ ರಾಜ​ಕೀಯ ವಿಪ್ಲವ ನಡೆ​ಯುವ ಸೂಚನೆ ಹಿನ್ನೆ​ಲೆ​ಯಲ್ಲಿ ನಗ​ರಕ್ಕೆ ದೌಡಾ​ಯಿ​ಸಿದ ವೇಣು​ಗೋ​ಪಾಲ್‌ ಅವರು ಮಂಗ​ಳವಾರ ಬೆಳ​ಗ್ಗೆ​ಯಿಂದ ತಡ​ರಾತ್ರಿವ​ರೆಗೂ ಸರಣಿ ಸಭೆ​ಗ​ಳನ್ನು ನಡೆ​ಸಿ​ದರು. ಮೊದ​ಲಿಗೆ ಕುಮಾ​ರ​ಕೃ​ಪಾ​ದಲ್ಲಿ ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌, ಉಪ ಮುಖ್ಯ​ಮಂತ್ರಿ ಡಾ.ಜಿ. ಪರ​ಮೇ​ಶ್ವರ್‌, ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಹಾಗೂ ಸಚಿ​ವ​ರಾದ ಪ್ರಿಯಾಂಕ್‌ ಖರ್ಗೆ, ಎಚ್‌.ಕೆ. ಪಾಟೀಲ್‌, ಜಮೀರ್‌ ಅಹ್ಮದ್‌, ಕೆ.ಜೆ. ಜಾಜ್‌ರ್‍ ಸೇರಿ​ದಂತೆ ಹಲವು ನಾಯ​ಕರು ವೇಣು​ಗೋ​ಪಾಲ್‌ ಅವ​ರನ್ನು ಭೇಟಿ ಮಾಡಿ ಮಾತು​ಕತೆ ನಡೆ​ಸಿ​ದ​ರು.

ಈ ವೇಳೆ ಪ್ರಿಯಾಂಕ್‌ ಖರ್ಗೆ ಅವರು ಉಮೇಶ್‌ ಜಾಧವ್‌ ಅವರನ್ನು ಬಿಜೆಪಿ ತನ್ನ ಬಲೆಗೆ ಹೇಗೆ ಬೀಳಿ​ಸಿ​ಕೊಂಡಿದೆ ಎಂಬುದನ್ನು ವಿವರಿಸಿದರು. ಜಾಧವ್‌ ಅವರು ದೂರ​ವಾ​ಣಿ​ಯನ್ನು ತಮ್ಮ ಮನೆ​ಯಲ್ಲೇ ಬಿಟ್ಟು ಹೋಗಿ​ದ್ದಾರೆ, ಯಾರ ಸಂಪ​ರ್ಕಕ್ಕೂ ಸಿಗು​ತ್ತಿಲ್ಲ ಎಂದು ಹೇಳಿ​ದ್ದ​ಲ್ಲದೆ, ಅವರು ಪಕ್ಷ ತೊರೆ​ಯು​ವು​ದ​ರಿಂದ ಉಂಟಾ​ಗ​ಬ​ಹು​ದಾದ ಪರಿ​ಣಾ​ಮ​ಗಳ ಬಗ್ಗೆ ಮಾಹಿತಿ ನೀಡಿ​ದರು ಎನ್ನ​ಲಾ​ಗಿದೆ.

ಇದೇ ಸಭೆ ವೇಳೆ ಶಿವ​ಕು​ಮಾರ್‌ ಹಾಗೂ ಸತೀಶ್‌ ಜಾರ​ಕಿ​ಹೊಳಿ ಅವರು ಬಿಜೆ​ಪಿಯ ತೆಕ್ಕೆ​ಯ​ಲ್ಲಿ​ದ್ದಾರೆ ಎನ್ನ​ಲಾದ ಆನಂದ​ಸಿಂಗ್‌ ಹಾಗೂ ಶ್ರೀಮಂತ ಪಾಟೀಲ್‌ ಅವ​ರನ್ನು ಕರೆ​ತಂದು ವೇಣು​ಗೋ​ಪಾಲ್‌ ಅವರ ಸಮ್ಮುಖ ಹಾಜ​ರು​ಪ​ಡಿ​ಸಿ​ದರು ಎನ್ನ​ಲಾ​ಗಿದೆ. ಈ ವೇಳೆ ಆನಂದ​ಸಿಂಗ್‌ ಅವರು ಬಿಜೆಪಿ ತಮ್ಮನ್ನು ಸಂಪ​ರ್ಕಿ​ಸಿದ್ದು ನಿಜ. ಆದರೆ, ತಾವು ಬಿಜೆ​ಪಿಗೆ ಹೋಗು​ವು​ದಿಲ್ಲ ಎಂದು ಸ್ಪಷ್ಟ​ಪ​ಡಿ​ಸಿ​ದ್ದಾರೆ. ಜತೆಗೆ, ಆಪ​ರೇ​ಷನ್‌ ಕಮ​ಲ ನಡೆ​ದಿದ್ದು ಹೇಗೆ ಹಾಗೂ ಬಿಜೆಪಿ ನಾಯ​ಕರು ಒಡ್ಡು​ತ್ತಿ​ರುವ ಆಮಿ​ಷ​ಗಳ ಬಗ್ಗೆ ಮಾಹಿ​ತಿ​ಯನ್ನು ವೇಣು​ಗೋ​ಪಾಲ್‌ ಅವ​ರಿಗೆ ನೀಡಿ​ದರು ಎಂದು ಮೂಲ​ಗಳು ಹೇಳಿ​ವೆ.

ಇದೇ ವೇಳೆ ಕಾಂಗ್ರೆಸ್‌ ನಾಯ​ಕರು ಬಿಜೆ​ಪಿ​ಯತ್ತ ಧಾವಿ​ಸಿ​ದ್ದಾರೆ ಎನ್ನ​ಲಾದ ಕಾಂಗ್ರೆ​ಸ್‌ನ ಅತೃಪ್ತ ಶಾಸ​ಕ​ರನ್ನು ಸಂಪ​ರ್ಕಿ​ಸಲು ಯತ್ನಿ​ಸಿ​ದರು. ಈ ಪೈಕಿ ಸಂಪ​ರ್ಕಕ್ಕೆ ದೊರೆತ ಕೆಲ​ವರು ತಾವು ತಮ್ಮ ಕ್ಷೇತ್ರ​ದ​ಲ್ಲಿದ್ದು, ಬಿಜೆ​ಪಿಗೆ ಹೋಗು​ವು​ದಿಲ್ಲ ಎಂದು ಭರ​ವಸೆ ನೀಡಿ​ದರೆ, ಸುಮಾರು ಎಂಟು ಮಂದಿ ಅತೃ​ಪ್ತರನ್ನು ಸಂಪ​ರ್ಕಿ​ಸಲು ಸಾಧ್ಯ​ವಾ​ಗ​ಲಿಲ್ಲ ಎಂದು ಮೂಲ​ಗಳು ಹೇಳಿವೆ. ಈ ಹಿನ್ನೆ​ಲೆ​ಯಲ್ಲಿ ಕಾಂಗ್ರೆ​ಸ್‌ನ ಎಲ್ಲಾ ಶಾಸ​ಕ​ರನ್ನು ಬುಧ​ವಾರ ನಗ​ರಕ್ಕೆ ಆಗ​ಮಿ​ಸು​ವಂತೆ ಸೂಚಿ​ಸಲು ನಾಯ​ಕರು ತೀರ್ಮಾ​ನಿ​ಸಿ​ದರು.

ಕಾಂಗ್ರೆಸ್‌ ತಂತ್ರಗಳು

1. ಬಿಜೆಪಿ ನಡೆ​ಸಿ​ರುವ ಆಪ​ರೇ​ಷನ್‌ ಕಮ​ಲಕ್ಕೆ ಪ್ರತಿ​ಯಾಗಿ ಕಾಂಗ್ರೆಸ್‌ ಕೂಡ ಜೆಡಿ​ಎಸ್‌ ಜತೆ ಸೇರಿ ರಿವ​ರ್ಸ್‌ ಆಪ​ರೇ​ಷನ್‌ ಮಾಡು​ವುದು. ತನ್ಮೂ​ಲಕ ಬಿಜೆ​ಪಿಯ ಹಲವು ಶಾಸ​ಕ​ರನ್ನು ರಾಜೀ​ನಾಮೆ ನೀಡು​ವಂತೆ ಪ್ರೇರೇ​ಪಿ​ಸು​ವು​ದು. ಹೀಗೆ ಮಾಡಿ​, ಬಿಜೆಪಿ ಸಂಖ್ಯೆಯನ್ನೂ ವಿಧಾ​ನ​ಸ​ಭೆ​ಯಲ್ಲಿ ಕಡಿ​ಮೆ ಮಾಡು​ವುದು.

2. ಬಿಜೆ​ಪಿ​ಯತ್ತ ವಾಲಿ​ರುವ ಅತೃ​ಪ್ತರನ್ನು ಧೃತಿ​ಗೆ​ಡಿ​ಸಲು ಬಿಜೆಪಿ ಸರ್ಕಾರ ರಚ​ನೆಗೆ ಅವ​ಕಾಶವಿಲ್ಲ​ದಂತೆ ಮಾಡುವುದು. ಒಂದು ವೇಳೆ ಈ ಶಾಸ​ಕರು ಬಿಜೆ​ಪಿ​ಯ ಬಲೆಗೆ ಬಿದ್ದರೂ ಸರ್ಕಾರ ರಚ​ನೆ​ಯಾ​ಗು​ವು​ದಿಲ್ಲ. ಬದ​ಲಾಗಿ, ಅತಂತ್ರ ಸ್ಥಿತಿ ನಿರ್ಮಾ​ಣ​ವಾಗು​ತ್ತದೆ. ಇದ​ರಿಂದ ರಾಜ್ಯ​ದಲ್ಲಿ ರಾಷ್ಟ್ರ​ಪತಿ ಆಡ​ಳಿತ ಬರು​ತ್ತ​ದೆಯೇ ಹೊರತು ಬಿಜೆಪಿ ಸರ್ಕಾರ ಬರು​ವು​ದಿಲ್ಲ ಎಂದು ಬಿಂಬಿ​ಸು​ವು​ದು.

3. ಜತೆಗೆ, ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ಸಭೆ​ಯನ್ನು ಕರೆದು, ಎಲ್ಲ ಶಾಸಕರೂ ಹಾಜ​ರಾ​ಗು​ವಂತೆ ವಿಪ್‌ ನೀಡು​ವುದು. ಹಾಜ​ರಾ​ಗ​ದ​ವರ ವಿರುದ್ಧ ವಿಪ್‌ ಉಲ್ಲಂಘನೆ ಆರೋ​ಪದ ಮೇಲೆ ಪಕ್ಷ​ದಿಂದ ಉಚ್ಚಾಟನೆ ಮಾಡು​ವು​ದಾಗಿ ಬಿಂಬಿ​ಸು​ವುದು. ವಾಸ್ತ​ವ​ವಾಗಿ ಇಂತಹ ಕ್ರಮ ಕೈಗೊಂಡರೂ ಅದು ನ್ಯಾಯಾ​ಲ​ಯ​ದಲ್ಲಿ ಊರ್ಜಿ​ತ​ವಾ​ಗು​ವು​ದಿಲ್ಲ. ಇದು ಗೊತ್ತಿ​ದ್ದರೂ ಗೊಂದಲ ಸೃಷ್ಟಿ​ಸಲು ಇಂತಹ ಕ್ರಮಕ್ಕೆ ಮುಂದಾ​ಗು​ವು​ದು.

4. ದೇಶಾ​ದ್ಯಂತ ಬಿಜೆಪಿ ಕುದುರೆ ವ್ಯಾಪಾರ ಮಾಡು​ತ್ತಿದೆ, ಆಮಿಷ​ವೊಡ್ಡಿ ಸರ್ಕಾ​ರ​ವನ್ನು ಅಸ್ಥಿ​ರ​ಗೊ​ಳಿ​ಸು​ತ್ತಿದೆ ಎಂದು ರಾಷ್ಟ್ರ​ಮ​ಟ್ಟ​ದಲ್ಲಿ ಬಿಂಬಿಸಿ ಒತ್ತಡ ನಿರ್ಮಿ​ಸು​ವುದು. ಈ ಬಗ್ಗೆ ರಾಜ್ಯ​ಪಾ​ಲರು ಹಾಗೂ ಚುನಾ​ವ​ಣಾ​ಧಿ​ಕಾ​ರಿ​ಗ​ಳಿಗೆ ದೂರು ನೀಡು​ವು​ದು.

Follow Us:
Download App:
  • android
  • ios